For Quick Alerts
ALLOW NOTIFICATIONS  
For Daily Alerts
 

IND vs NZ: ಮುಂಜಾನೆಯಿಂದಲ್ಲೇ ಬೆಂಗಳೂರಿನಲ್ಲಿ ಮಳೆ; ಮೊದಲ ಟೆಸ್ಟ್ ಟಾಸ್ ವಿಳಂಬ!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಟೆಸ್ಟ್ ಪಂದ್ಯಗಳ ಸರಣಿ ಇಂದಿನಿಂದ ಪ್ರಾರಂಭವಾಗಲಿದೆ. ಸರಣಿಯ ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಿದೆ. ಎರಡು ವರ್ಷಗಳ ನಂತರ ಈ ಸ್ಟೇಡಿಯಂನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಆದರೆ ಮಳೆಯಿಂದಾಗಿ ಮೊದಲ ಪಂದ್ಯದ ಟಾಸ್‌ ವಿಳಂಬವಾಗಿದೆ.

ಬೆಂಗಳೂರಿನಲ್ಲಿ ಸೋಮವಾರ ತಡರಾತ್ರಿಯಿಂದ ಎಡೆಬೆಡದೆ ಸುರಿಯುತ್ತಿರುವ ಮಳೆ ಟೆಸ್ಟ್ ಪಂದ್ಯದ ಮೇಲೆ ಪ್ರಭಾವ ಬೀರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಂಗಳವಾರ ಬೆಳಗ್ಗೆ ಕೂಡ ಶುರುವಾದ ಮಳೆಯಿಂದಾಗಿ ಭಾರತ ತಂಡದ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ. ಬೆಳಗ್ಗೆ 11:15 ಗಂಟೆಗೆ ಟೀಮ್ ಇಂಡಿಯಾದ ಅಭ್ಯಾಸ ಅವಧಿಯನ್ನು ನಿಗದಿಪಡಿಸಲಾಗಿತ್ತು. ಇದೀಗ ಬುಧವಾರ ಮುಂಜಾನೆಯಿಂದಲ್ಲೇ ಶುರುವಾಗಿರುವ ಮಳೆ ಸರಣಿ ಮೊದಲ ಪಂದ್ಯದ ಟಾಸ್‌ಗೆ ಅಡ್ಡಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (ಡಬ್ಲ್ಯೂಟಿಸಿ) ಅಡಿಯಲ್ಲಿ ಉಭಯ ತಂಡಗಳ ಸರಣಿಯನ್ನು ಆಡುತ್ತಿವೆ.

India vs New Zealand first test match toss interrupted by rain

ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ತನ್ನ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹವಣಿಸುತ್ತಿದೆ. ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು 2-0 ಅಂತರದಲ್ಲಿ ಗೆದ್ದುಕೊಂಡಿರುವ ಟೀಮ್ ಇಂಡಿಯಾ ಮತ್ತೊಂದು ಕ್ಲೀನ್ ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಕಿವೀಸ್ ಪಡೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಇಲ್ಲದೆ ಕಣಕ್ಕಿಳಿದಿದೆ. ಶ್ರೀಲಂಕಾದಲ್ಲಿ ನಡೆದ 2-ಟೆಸ್ಟ್ ಸರಣಿಯಲ್ಲಿ 0-2 ರಿಂದ ಸೋತ ನಂತರ ಟಿಮ್ ಸೌಥಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಈ ಸರಣಿಯಿಂದ ಟಾಮ್ ಲ್ಯಾಥಮ್ ನ್ಯೂಜಿಲೆಂಡ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ.

ಉಭಯ ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಬ್ ಪಂತ್ (ವಿಕೆಟ್ ಕೀಪರ್), ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.

ನ್ಯೂಜಿಲೆಂಡ್: ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಮಾರ್ಕ್ ಚಾಪ್ಮನ್, ವಿಲ್ ಯಂಗ್, ಡ್ಯಾರೆಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್, ರಚಿನ್ ರವೀಂದ್ರ, ಟಾಮ್ ಬ್ಲಂಡೆಲ್, ಅಜಾಜ್ ಪಟೇಲ್, ಬೆನ್ ಸಿಯರ್ಸ್, ಮ್ಯಾಟ್ ಹೆನ್ರಿ, ಟಿಮಿ ಸೌತ್, ಟಿಮಿ ಸೌತ್ ರೋರ್ಕೆ.

Story first published: Wednesday, October 16, 2024, 10:26 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+