
ನವದೆಹಲಿ, ಜನವರಿ 21: ಆಸ್ಟ್ರೇಲಿಯಾದಲ್ಲಿ ಆತಿಥೇಯರ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿರುವ ವಿರಾಟ್ ಕೊಹ್ಲಿ ಬಳಗ ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯನ್ನು ಎದುರುಗೊಳ್ಳಲಿದೆ. ಬುಧವಾರ (ಜನವರಿ 23) 5 ಏಕದಿನ ಪಂದ್ಯಗಳ ಏಕದಿನ ಸರಣಿಯೊಂದಿಗೆ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ.
ಆಸ್ಟ್ರೇಲಿಯಾದಲ್ಲಿ ಏಕದಿನ ಸರಣಿ ಜಯಿಸಿದ ಹೊರತಾಗಿಯೂ ಭಾರತದ ಮಧ್ಯಮ ಕ್ರಮಾಂಕ ಮತ್ತು 5ನೇ ಬೌಲರ್ ಹೆಸರು ಪಕ್ಕಾ ಆಗಿಲ್ಲ. ಆದರೂ ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಏಕದಿನದಲ್ಲಿ ಮೈದಾನಕ್ಕಿಳಿಯುವ ಭಾರತದ ಸಂಭಾವ್ಯ ತಂಡ ಬಹುತೇಕ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿದ್ದಂತೆ ಇರಲಿದೆ.
ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯು 5 ಏಕದಿನ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಒಳಗೊಂಡಿರಲಿದೆ. ಆರಂಭಿಕ ಪಂದ್ಯ ಜನವರಿ 23ರಂದು ನೇಪಿಯರ್‌ನ ಮೆಕ್ಲೀನ್ ಪಾರ್ಕ್‌ನಲ್ಲಿ (ಭಾರತೀಯ ಕಾಲಮಾನ) 7.30 amಗೆ ಆರಂಭಗೊಂಡರೆ, ಟಿ20 ಮೊದಲ ಪಂದ್ಯ ಫೆಬ್ರವರಿ 6ರಂದು ವೆಲ್ಲಿಂಗ್ಟನ್‌ನ ವೆಸ್ಟ್ಪ್ಯಾಕ್ ಸ್ಟೇಡಿಯಂ ನಲ್ಲಿ 12.30 pmಗೆ ಶುರುವಾಗಲಿದೆ.
ಸಂಭಾವ್ಯ ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಎಂಎಸ್ ಧೋನಿ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್.