ಕಿವೀಸ್ ವಿರುದ್ಧ 3ನೇ ಟಿ20 ಹಾಗೂ ಸರಣಿ ಗೆದ್ದ ಭಾರತ

Posted By:

ತಿರುವನಂತಪುರಂ, ನವೆಂಬರ್ 07: ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮಳೆಯ ನಡುವೆ ನಡೆದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 6 ರನ್ ಗಳ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯನ್ನು 2 -1 ಅಂತರದಿಂದ ಭಾರತ ಗೆದ್ದುಕೊಂಡಿದೆ.

India Vs New Zealand, India win 3rd T20I by 6 wickets Series 2-1

ಮಳೆಯ ಕಾರಣ 8 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 67/5 ಸ್ಕೋರ್ ಮಾಡಿತ್ತು. ಇದನ್ನು ಸಮರ್ಥವಾಗಿ ಚೇಸ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತವಾಗಿ ವಿಕೆಟ್ ಕಳೆದುಕೊಂಡರೂ ಕೊನೆ ಓವರ್ ತನಕ ಹೋರಾಟ ಮುಂದುವರೆಸಿತು. ಅಂತಿಮವಾಗಿ 61/6 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

ಭಾರತದ ಪರ ವಿರಾಟ್ ಕೊಹ್ಲಿ 13, ಮನೀಶ್ ಪಾಂಡೆ 17 ಹಾಗೂ ಹಾರ್ದಿಕ್ ಪಾಂಡ್ಯ 14ರನ್ ಗಳಿಸಿದರೆ, ಕಿವೀಸ್ ಪರ ಟಿಮ್ ಸೌಥಿ ಹಾಗೂ ಇಶ್ ಸೋಧಿ ತಲಾ 2 ವಿಕೆಟ್ ಗಳಿಸಿದರು.

ಕಿವೀಸ್ ಪರ ಗ್ಲೆನ್ ಫಿಲಿಪ್ಸ್ 11 ಹಾಗೂ ಗ್ರಾಂಡ್ ಹೋಮ್ 17 ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಭಾರತದ ಪರ ಬೂಮ್ರಾ 2, ಕುಲದೀಪ್ ಯಾದವ್ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದುಕೊಂಡರು. ಪಂದ್ಯಕ್ಕೆ ಮಳೆ ಅಡ್ಡಿಯಾದಾಗ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಫುಟ್ಬಾಲ್ ಆಡಿ ಕಾಲ ಕಳೆದರು.

Story first published: Tuesday, November 7, 2017, 23:18 [IST]
Other articles published on Nov 7, 2017
Please Wait while comments are loading...