For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲ್ಯಾಂಡ್: 4ನೇ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

India vs New Zealand: Probable XI of India for 4th ODI - Gill may get a debut

ಹ್ಯಾಮಿಲ್ಟನ್, ಜನವರಿ 30: ಆತಿಥೇಯ ನ್ಯೂಜಿಲ್ಯಾಂಡ್ ವಿರುದ್ಧ ಸತತ 3 ಏಕದಿನ ಪಂದ್ಯಗಳನ್ನು ಗೆದ್ದು ಸರಣಿಯನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಟೀಮ್ ಇಂಡಿಯಾ, ಹ್ಯಾಮಿಲ್ಟನ್ ನಲ್ಲಿ ಜನವರಿ 31ರಂದು ನಡೆಯುವ 4ನೇ ಏಕದಿನಕ್ಕೆ ಸಜ್ಜಾಗಿದೆ.

ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿರುವುದರಿಂದ ತಂಡದ ನಾಯಕತ್ವದ ಜವಾಬ್ದಾರಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹೆಗಲೇರಿದೆ. ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3 ಪಂದ್ಯಗಳನ್ನು ಭಾರತ ಜಯಿಸಿರುವುದರಿಂದ ಇನ್ನುಳಿದ 2 ಔಪಚಾರಿಕ ಪಂದ್ಯಗಳಲ್ಲಿ ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

4ನೇ ಏಕದಿನ ಪಂದ್ಯಕ್ಕೆ ಭಾರತದ 11 ಆಟಗಾರರ ಸಂಭಾವ್ಯ ತಂಡದ ಮಾಹಿತಿ ಇಲ್ಲಿದೆ. ಯುವ ಆಟಗಾರ ಶುಭ್‌ಮಾನ್ ಗಿಲ್ ಭಾರತ ತಂಡ ಸೇರಿಕೊಳ್ಳುವುತ್ತಿರುವುದು ಬಹುತೇಕ ಖಚಿತವಾಗಿದೆ.

1. ರೋಹಿತ್ ಶರ್ಮಾ (ನಾಯಕ)

1. ರೋಹಿತ್ ಶರ್ಮಾ (ನಾಯಕ)

ಹ್ಯಾಮಿಲ್ಟನ್ ನಲ್ಲಿ ಬುಧವಾರ ನಡೆಯಲಿರುವ ಭಾರತ ಮತ್ತು ಆತಿಥೇಯ ನ್ಯೂಜಿಲ್ಯಾಂಡ್ ನಡುವಿನ 4ನೇ ಏಕದಿನ ಪಂದ್ಯ ರೋಹಿತ್ ಶರ್ಮಾ ಅವರ ಪಾಲಿಗೆ ಪ್ರಮುಖವೆನಿಸಿದೆ. ಯಾಕೆಂದರೆ ಈ ಪಂದ್ಯದಲ್ಲಿ ರೋಹಿತ್, ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸುತ್ತಿದ್ದಾರೆ ಅಲ್ಲದೆ ಇದು ರೋಹಿತ್ ಅವರ 200ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ.

2. ಶಿಖರ್ ಧವನ್

2. ಶಿಖರ್ ಧವನ್

ರೋಹಿತ್ ಶರ್ಮಾ ಅವರಿಗೆ ಜೊತೆಗಾರನಾಗಿ ಬ್ಯಾಟಿಂಗ್‌ಗೆ ಇಳಿಯುವ ಶಿಖರ್ ಧವನ್ ಈಗ ಉತ್ತಮ ಫಾರ್ಮ್‌ನಲ್ಲಿದ್ದು, 4ನೇ ಏಕದಿನದಲ್ಲೂ ಭಾರತದ ಬಲವಾಗಿ ನಿಲ್ಲಲಿದ್ದಾರೆ. 3ನೇ ಏಕದಿನ ಪಂದ್ಯದಲ್ಲಿ ರೋಹಿತ್-ಧವನ್ ಜೋಡಿಯ ಜೊತೆಯಾಟ, ಸಚಿನ್ ತೆಂಡೂಲ್ಕರ್-ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದಿದ್ದನ್ನು ಇಲ್ಲಿ ಸ್ಮರಿಸಬಹುದು.

3. ಶುಬ್‌ಮಾನ್ ಗಿಲ್

3. ಶುಬ್‌ಮಾನ್ ಗಿಲ್

ಅಂಡರ್ 19 ತಂಡದಲ್ಲಿ ಭಾರತ ತಂಡದಲ್ಲಿ ಮಿಂಚಿದ್ದ ಉದಯೋನ್ಮುಖ ಆಟಗಾರ ಶುಭ್‌ಮಾನ್ ಗಿಲ್ ಅವರು ಟೀಮ್ ಇಂಡಿಯಾದಲ್ಲಿ ಪಾದಾರ್ಪಣೆ ಪಂದ್ಯವನ್ನಾಡುವುದರಲ್ಲಿದ್ದಾರೆ. ಗಿಲ್ ಅವರು ಕೊಹ್ಲಿಯ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವುದರಲ್ಲಿದ್ದಾರೆ.

4. ಅಂಬಾಟಿ ರಾಯುಡು

4. ಅಂಬಾಟಿ ರಾಯುಡು

ನಾಲ್ಕನೇ ಕ್ರಮಾಂಕದಲ್ಲಿ ಅಂಬಾಟಿ ರಾಯುಡು ಕಣಕ್ಕಿಳಿಯುತ್ತಿದ್ದಾರೆ. ಬೌಲಿಂಗ್ ಆ್ಯಕ್ಷನ್ ಸರಿಯಿಲ್ಲದ ಕಾರಣಕ್ಕಾಗಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್ ಬೌಲಿಂಗ್ ನಿಂದ ಅಮಾನತುಗೊಂಡಿದ್ದರು. ಆದರೆ ಬ್ಯಾಟಿಂಗ್ ವಿಚಾರದಲ್ಲಿ ವಿಕೆಟ್ ಕಾಯುವ ರಾಯುಡು ತಂಡದ ಬೆಂಬಲಕ್ಕೆ ನಿಲ್ಲಬಲ್ಲರು.

5. ಎಂಎಸ್ ಧೋನಿ/ದಿನೇಶ್ ಕಾರ್ತಿಕ್

5. ಎಂಎಸ್ ಧೋನಿ/ದಿನೇಶ್ ಕಾರ್ತಿಕ್

4ನೇ ಪಂದ್ಯಕ್ಕಾಗಿ ಭಾರತ ತಂಡದಿಂದ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವವರು ಯಾರೆಂಬುದು ಖಾತ್ರಿಯಾಗಿಲ್ಲ. ಎಂಎಸ್ ಧೋನಿ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಅನುಭವಿಗಳೇ. ಇಬ್ಬರೂ ಬ್ಯಾಟಿಂಗ್ ಮತ್ತು ಕೀಪಿಂಗ್‌ ಮಾಡಬಲ್ಲರು. ಆದರೆ ದಿನೇಶ್ ಕಾರ್ತಿಕ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ಸಂಭವ ಹೆಚ್ಚು.

6. ಕೇದಾರ್ ಜಾಧವ್

6. ಕೇದಾರ್ ಜಾಧವ್

ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲೂ ಕೇದಾರ್ ಜಾಧವ್ ಈಗ ಟೀಮ್ ಇಂಡಿಯಾದಲ್ಲಿ ಪ್ರಮುಖ ಆಟಗಾರ ಎನಿಸಿದ್ದಾರೆ. ಹ್ಯಾಮಿಲ್ಟನ್ ಪಂದ್ಯದಲ್ಲಿ ಜಾಧವ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಲಿದ್ದಾರೆ.

7. ಹಾರ್ದಿಕ್ ಪಾಂಡ್ಯ

7. ಹಾರ್ದಿಕ್ ಪಾಂಡ್ಯ

ಆಸ್ಟ್ರೇಲಿಯಾ ಪ್ರವಾಸ ಸರಣಿ ವೇಳೆ ಬಿಸಿಸಿಐನಿಂದ ಅಮಾನತಾಗಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ನ್ಯೂಜಿಲ್ಯಾಂಡ್ ವಿರುದ್ಧ 3ನೇ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಉತ್ತಮ ಪ್ರದರ್ಶನವನ್ನೂ ನೀಡಿದ್ದರು. ಹೀಗಾಗಿ ಹಾರ್ದಿಕ್ 4ನೇ ಪಂದ್ಯದಲ್ಲೂ ಇರಲಿದ್ದಾರೆ.

8. ಭುವನೇಶ್ವರ್ ಕುಮಾರ್

8. ಭುವನೇಶ್ವರ್ ಕುಮಾರ್

ಇತ್ತೀಚಿಗೆ ಟೀಮ್ ಇಂಡಿಯಾ ವಿಶ್ವ ಮಟ್ಟದ ಎಲ್ಲಾ ತಂಡಗಳೆದುರು ಪಾರಮ್ಯ ಮೆರೆಯುತ್ತಿರುವುದಕ್ಕೆ ತಂಡದ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗದ ಉತ್ತಮ ಪ್ರದರ್ಶನ ಕಾರಣ ಎನ್ನುವುದು ಉಲ್ಲೇಖಾರ್ಹ. ಗೆಲ್ಲುವ ಭಾರತ ತಂಡಕ್ಕೆ ಭುವಿ ಬೌಲಿಂಗ್ ಬಲವಾಗಿರಲಿದ್ದಾರೆ.

9. ಕುಲದೀಪ್ ಯಾದವ್

9. ಕುಲದೀಪ್ ಯಾದವ್

ಚೈನಾಮನ್ ಕುಲದೀಪ್ ಯಾದವ್‌ಗೆ ನ್ಯೂಜಿಲ್ಯಾಂಡ್-ಭಾರತ 3ನೇ ಏಕದಿನದಲ್ಲಿ ಒಂದೂ ವಿಕೆಟ್ ಲಭಿಸಿರಲಿಲ್ಲ (8-0-39-0). ಅದರ ಹಿಂದಿನ ಎರಡೂ ಪಂದ್ಯಗಳನ್ನು ಸೇರಿ ಯಾದವ್ ಒಟ್ಟು 8 ವಿಕೆಟ್‌ಗಳನ್ನು ಪಡೆದಿದ್ದರು. 4ನೇ ಪಂದ್ಯದಲ್ಲಿ ಕುಲದೀಪ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

10. ಯುಜುವೇಂದ್ರ ಚಾಹಲ್

10. ಯುಜುವೇಂದ್ರ ಚಾಹಲ್

ಯುಜುವೇಂದ್ರ ಚಾಹಲ್ ಈಗಂತೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ ವಿಭಾಗದ ಬಲವಾಗಿರು ಚಾಹಲ್ 4ನೇ ಪಂದ್ಯದಲ್ಲಿ 10ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಇರಲಿದ್ದಾರೆ.

11. ಅಹ್ಮದ್ ಖಲೀಲ್

11. ಅಹ್ಮದ್ ಖಲೀಲ್

ಆಸ್ಟ್ರೇಲಿಯಾ ಟೆಸ್ಟ್ ಸರಣಿಯಿಂದಲೂ ಭಾರತ ತಂಡದಲ್ಲಿ ಬೌಲಿಂಗ್ ವಿಭಾಗದ ಜವಾಬ್ದಾರಿ ಹೊತ್ತಿರುವ ಮೊಹಮ್ಮದ್ ಶಮಿಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಶಮಿ 4ನೇ ಪಂದ್ಯದಲ್ಲಿ ಆಡುತ್ತಿಲ್ಲ. ಬದಲಿಗೆ ಅಹ್ಮದ್ ಖಲೀಲ್ ತಂಡದಲ್ಲಿ ಸ್ಥಾನ ಪಡೆಯುವುದರಲ್ಲಿದ್ದಾರೆ.

Story first published: Wednesday, January 30, 2019, 16:06 [IST]
Other articles published on Jan 30, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+