ICC Women's World Cup: ಸೆಮೀಸ್‌ಗಾಗಿ ಭಾರತ, ನ್ಯೂಜಿಲೆಂಡ್ ಜಿದ್ದಿನ ಹೋರಾಟ
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿವೆ. ಈ ವೇಳೆ ಪಂದ್ಯಗಳ ರೋಚಕತೆ ಹೆಚ್ಚಾಗಿದೆ. ಈಗಾಗಲೇ ಮೂರು ತಂಡಗಳು ಟೂರ್ನಿಯ ಸೆಮಿಫೈನಲ್ ಹಂತವನ್ನು ಪ್ರವೇಶಿಸಿವೆ. ಇನ್ನು ಉಳಿದ ಒಂದು ಸ್ಥಾನಕ್ಕಾಗಿ ಜಿದ್ದು ಆರಂಭವಾಗಿದೆ. ಗುರುವಾರ ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. ಹೀಗಾಗಿ ಈ ಪಂದ್ಯವನ್ನು ಕ್ವಾರ್ಟರ್ ಫೈನಲ್ ಪಂದ್ಯ ಎಂದು ಬಣ್ಣಿಸಲಾಗಿದೆ.
ಟೂರ್ನಿಯಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿವೆ. ಆದರೆ ರನ್ ರೇಟ್ ಆಧಾರದಲ್ಲಿ ಟೀಮ್ ಇಂಡಿಯಾ ಕೊಂಚ ಚೆನ್ನಾಗಿದ್ದರಿಂದ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ನ್ಯೂಜಿಲೆಂಡ್ 4 ಅಂಕಗಳನ್ನು ಕಲೆ ಹಾಕಿ 5ನೇ ಸ್ಥಾನದಲ್ಲಿದೆ. ಭಾರತ ಸತತ ಮೂರು ಸೋಲುಗಳ ನೋವನ್ನು ಮರೆತು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದೆ. ಉಭಯ ತಂಡಗಳು ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಸಮಬಲದ ಪ್ರದರ್ಶನ ನೀಡಿವೆ.

ಹರ್ಮನ್ ಪ್ರೀತ್ ಪಡೆ ಈ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿ, ಸೆಮಿಫೈನಲ್‌ಗೆ ಒಂದು ಕಾಲು ಇಡುವ ಪ್ಲ್ಯಾನ್ ಮಾಡಿಕೊಂಡಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಅಂದಾಗ ಬಿಗ್ ಸ್ಕೋರ್ ಕಲೆ ಹಾಕಲು ಸಾಧ್ಯ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹರ್ಲಿನ್ ಡಿಯೋಲ್, ದೀಪ್ತಿ ಶರ್ಮಾ, ರಿಚಾ ಘೋಷ್ ತಂಡ ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ.
ಸ್ಥಿರ ಪ್ರದರ್ಶನದ ಅನಿವಾರ್ಯತೆ
ಭರವಸೆಯ ಆಲ್‌ರೌಂಡರ್‌ಗಳಾದ ಸ್ನೇಹಾ ರಾಣ, ಅಮನ್ಜೋತ್ ಕೌರ್ ಅವರು ಈ ಹಿಂದಿನ ಪಂದ್ಯದಲ್ಲಿ ಮಾಡಿರುವ ತಪ್ಪುಗಳನ್ನು ಮೆಟ್ಟಿನಿಂತು ಬ್ಯಾಟ್ ಮಾಡಬೇಕಿದೆ. ಕ್ರಾಂತಿ ಗೌಡ್ ಹೊಸ ಚೆಂಡಿನಲ್ಲಿ ತಮ್ಮ ಪರಿಣಾಮಕಾರಿ ಬೌಲಿಂಗ್ ನಡೆಸಬೇಕಿದೆ. ಯುವ ಸ್ಪಿನ್ ಬೌಲರ್ ಶ್ರೀ ಚರಣಿ ತಮ್ಮ ಪಿರ್ಕಿ ಕಮಾಲ್ ಪ್ರದರ್ಶಿಸಬೇಕಿದೆ.
ಸಂಭಾವ್ಯ ಭಾರತ ತಂಡ: ಸ್ಮೃತಿ ಮಂಧನಾ, ಪ್ರತಿಕಾ ರಾವಲ್, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್ ಕೀಪರ್), ಅಮನ್‌ಜೋತ್ ಕೌರ್, ಸ್ನೇಹ್ ರಾಣಾ, ದೀಪ್ತಿ ಶರ್ಮಾ, ರೇಣುಕಾ ಸಿಂಗ್/ಜೆಮಿಮಾ ರಾಡ್ರಿಗಸ್, ಕ್ರಾಂತಿ ಗೌಡ್, ಶ್ರೀ ಚಾರಣಿ
ಗೆಲುವೊಂದೆ ಜಪ
ನ್ಯೂಜಿಲೆಂಡ್ ತಂಡದಲ್ಲೂ ಸ್ಟಾರ್ ಆಟಗಾರ್ತಿಯರು ಇದ್ದು ಮಹತ್ವದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಭರವಸೆಯ ಆಟಗಾರ್ತಿ ಸೂಜಿ ಬೇಟ್ಸ್ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸೆಮೀಸ್‌ಗೆ ಹತ್ತಿರವಾಗುವ ಆಸೆಯನ್ನು ಕಿವೀಸ್ ಹೊಂದಿದೆ.

ನ್ಯೂಜಿಲೆಂಡ್ ಸಂಭಾವ್ಯ ತಂಡ: ಸೂಜಿ ಬೇಟ್ಸ್, ಜಾರ್ಜಿಯಾ ಪ್ಲಿಮ್ಮರ್, ಅಮೆಲಿಯಾ ಕೆರ್, ಸೋಫಿ ಡಿವೈನ್ (ನಾಯಕಿ), ಬ್ರೂಕ್ ಹಾಲಿಡೇ, ಮ್ಯಾಡಿ ಗ್ರೀನ್, ಇಸಾಬೆಲ್ಲಾ ಗೇಜ್ (ವಿಕೆಟ್ ಕೀಪರ್), ಜೆಸ್ ಕೆರ್, ರೋಸ್ಮೇರಿ ಮೈರ್, ಈಡನ್ ಕಾರ್ಸನ್, ಲಿಯಾ ತಾಹುಹು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications