Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs NZ: ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಶುಭ್‌ಮನ್‌ ಗಿಲ್‌ ನಾಯಕ?

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಲೀಗ್‌ ಹಂತದಲ್ಲಿ ಅಜೇಯ ಓಟವನ್ನು ನಡೆಸುವ ಇರಾದೆ ಟೀಮ್ ಇಂಡಿಯಾದ್ದಾಗಿದೆ. ಉಭಯ ತಂಡಗಳು ಬಲಿಷ್ಠವಾಗಿದ್ದು, ಕುತೂಹಲ ಮೂಡಿಸಿದೆ. ಈಗಾಗಲೇ ಕಿವೀಸ್‌ ಹಾಗೂ ಭಾರತ ಸೆಮಿಫೈನಲ್‌ಗೆ ತಲುಪಿವೆ. ಆದರೆ ಈ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಯಾವ ತಂಡ ಪಡೆಯುತ್ತದೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಭಾರತ ಲೀಗ್‌ ಹಂತದಲ್ಲಿ ತಾನಾಡೀದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್‌ ಹಾಗೂ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ 6 ವಿಕೆಟ್‌ ಜಯ ಸಾಧಿಸಿರುವ ಭಾರತ, ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿದೆ. ಇನ್ನು ನ್ಯೂಜಿಲೆಂಡ್ ಸಹ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು 4 ಅಂಕಗಳನ್ನು ಕಲೆ ಹಾಕಿದೆ.

India vs New Zealand Rohit Sharma Likely to Be Rested Shubman Gill May Lead in Champions Trophy Clash

ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಇವರು ಪಾಕ್ ವಿರುದ್ಧ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಎರಡು ದಿನಗಳ ವಿಶ್ರಾಂತಿಯ ಬಳಿಕ ಭಾರತ ಬುಧವಾರ ಅಭ್ಯಾಸ ಆರಂಭಿಸಿತು. ಈ ವೇಳೆ ರೋಹಿತ್ ಶರ್ಮಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸವನ್ನು ನಡೆಸಿದರು. ಇವರು ಇದೇ ವೇಳೆ ಮೈದಾನದಲ್ಲಿ ಇತರೆ ವ್ಯಾಯಾಮ ಮಾಡುವಾಗಲೂ ಫುಲ್‌ ಫಿಟ್ ಆಗಿದ್ದರು ಎಂದು ಹೇಳುವುದು ಕಷ್ಟ.

India vs New Zealand Rohit Sharma Likely to Be Rested Shubman Gill May Lead in Champions Trophy Clash

ಶುಭಮನ್‌ ಗಿಲ್ ನಾಯಕ?

ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯಂತೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಈ ಪಂದ್ಯ ಭಾನುವಾರ ಮಾರ್ಚ್‌ 2 ರಂದು ನಡೆಯಲಿದೆ. ಭಾರತ ಇನ್ನು ಸೆಮಿಫೈನಲ್‌ನಲ್ಲೂ ಕಾದಾಟ ನಡೆಸಲಿದೆ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್‌ ಹೆಚ್ಚಿನ ರಿಸ್ಕ್‌ ತೆಗೆದುಕೊಳ್ಳಲು ಬಯಸುತ್ತಿಲ್ಲ ಎಂದು ತಿಳಿದು ಬಂದಿದೆ. ಇನ್ನು ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ಯಾವ ತಂಡದ ವಿರುದ್ಧ ಕಾದಾಟ ನಡೆಸಲಿದೆ ಎಂಬುದು ಇನ್ನು ಕುತೂಹಲ ಮೂಡಿಸಿದೆ.

Take a Poll

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡದಿಂದ ಹೊರ ನಡೆದರೆ, ಯಾರಿಗೆ ಅವಕಾಶ ಸಿಗುತ್ತದೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಸಾಲಿನಲ್ಲಿ ವಾಶಿಂಗ್ಟನ್‌ ಸುಂದರ್‌ ಹಾಗೂ ರಿಷಭ್‌ ಪಂತ್‌ ಇದ್ದಾರೆ. ಇವರಿಬ್ಬರೂ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಖಾಡ ಪ್ರವೇಶಿಸಬಹುದು. ಈ ಇಬ್ಬರೂ ಆಟಗಾರರು ನೆಟ್ಸ್‌ನಲ್ಲಿ ಬುಧವಾರ ಬಹುಕಾಲ ಬ್ಯಾಟಿಂಗ್ ನಡೆಸಿದರು. ಎಂದು ತಿಳಿದು ಬಂದಿದೆ. ಇದೇ ವೇಳೆ ಇವರು ವೇಗದ ಬೌಲರ್‌ಗಳು ಹಾಗೂ ಸ್ಪಿನ್ ಬೌಲರ್‌ಗಳನ್ನು ಅಭ್ಯಾಸ ಮಾಡಿದ್ದಾರೆ.

ಇನ್ನು ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಿದ್ದೇ ಆದಲ್ಲಿ ಶುಭಮನ್‌ ಗಿಲ್ ಅವರೊಂದಿಗೆ ಇನಿಂಗ್ಸ್ ಆರಂಭಿಸುವುದು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.

Story first published: Thursday, February 27, 2025, 14:17 [IST]
Other articles published on Feb 27, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+