ಟೀಮ್ ಇಂಡಿಯಾದ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ನಾಯಕ ರೋಹಿತ್ ಶರ್ಮಾ ಹೇಳಿದ್ದಿಷ್ಟು!

ಟೀಮ್ ಇಂಡಿಯಾದ ಮೂರು ಮಾದರಿಗಳ ನಾಯಕನಾಗಿದ್ದ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದು ಚುಟುಕು ಮಾದರಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ಹೊಸ ಜವಾಬ್ಧಾರಿ ಇಂದಿನಿಂದಲೇ ಆರಂಭವಾಗುತ್ತಿದ್ದು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೆ ಸಿದ್ಧವಾಗಿದ್ದಾರೆ. ಆದರೆ ಈ ಸರಣಿಯಿಂದ ವಿರಾಟ್ ಕೊಹ್ಲಿ ಆಟಗಾರನಾಗಿಯೂ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಂಡದ ನೂತನ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನಾದಿನ ಮಾಧ್ಯಮಗಳ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದರು ರೋಹಿತ್ ಶರ್ಮಾ. ಈ ಸಂದರ್ಭದಲ್ಲಿ ಅವರಿಗೆ ಟಿ20 ತಂಡದಲ್ಲಿ ನಿರ್ಗಮಿತ ನಾಯಕ ವಿರಾಟ್ ಕೊಹ್ಲಿಯ ಪಾತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ "ವಿರಾಟ್ ಕೊಹಲಿ ತಮಡದಲ್ಲಿ ಈವರೆಗೆ ಯಾವ ರೀತಿಯ ಜವಾಬ್ಧಾರಿಯನ್ನು ನಿರ್ವಹಿಸುತ್ತಿದ್ದರೋ ಅದನ್ನೇ ಮುಂದುವರಿಸಲಿದ್ದಾರೆ" ಎಂದಿದ್ದಾರೆ.

ಭಾರತ VS ನ್ಯೂಜಿಲೆಂಡ್ ಮೊದಲ ಟಿ20: ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್ಭಾರತ VS ನ್ಯೂಜಿಲೆಂಡ್ ಮೊದಲ ಟಿ20: ಸಂಭಾವ್ಯ ಪ್ಲೇಯಿಂಗ್ 11, ಕೀ ಪ್ಲೇಯರ್ಸ್

"ವಿರಾಟ್ ಕೊಹ್ಲಿ ಯಾವಾಗ ತಂಡದ ಪರವಾಗಿ ಆಡಿದರೂ ಅವರು ನಮ್ಮ ತಂಡದ ಅತ್ಯಂತ ಪ್ರಮುಖವಾದ ಆಟಗಾರ. ಅವರು ಅಂತಾ ಪರಿಣಾಮವನ್ನು ಬೀರಿದ್ದಾರೆ. ತಂಡದ ದೃಷ್ಟಿಕೋನದಿಂದಲೂ ಅವರೊಬ್ಬರು ಪ್ರಮುಖವಾದ ಆಟಗಾರನಾಗಿದ್ದಾರೆ. ನೀವು ಪ್ರತಿ ಪಂದ್ಯದಲ್ಲಿ ಆಡುವಾಗಲೂ ನಿಮ್ಮ ಪಾತ್ರ ಬದಲಾಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ. ಪ್ರತಿ ಪಂದ್ಯದ ಪರಿಸ್ಥಿಯನ್ನು ಗಮನದಲ್ಲಿಟ್ಟುಕೊಂಡು ಆಟಗಾರರ ಪಾತ್ರಗಳು ಬದಲಾಗುತ್ತಿರುತ್ತದೆ. ಸ್ವತಃ ವಿರಾಟ್ ಕೊಹ್ಲಿ ಕೂಡ ಅದಕ್ಕೆ ಮುಕ್ತವಾಗಿದ್ದಾರೆ ಎಂದು ನೂತನ ನಾಯಕ ಹೇಳಿಕೊಂಡಿದ್ದಾರೆ.

"ನೀವು ಬ್ಯಾಟಿಂಗ್ ಮೊದಲು ಮಾಡುತ್ತೀರಾದರೆ ಎರಡನೇ ಅವಧಿಯಲ್ಲಿ ಬ್ಯಾಟಿಂಗ್ ನಡೆಸುವ ನಿಮ್ಮ ಪಾತ್ರಕ್ಕಿಂತ ಅದು ಭಿನ್ನವಾಗಿರುತ್ತದೆ. ಅದು ನಾವು ಆಡುತ್ತಿರುವ ಪಂದ್ಯವನ್ನು ಅವಲಂಬಿಸಿರುತ್ತದೆ. ಹೀಗಾಗಿ ಪಾತ್ರಗಳು ಕೂಡ ಬದಲಾಗುತ್ತಿರುತ್ತದೆ. ಅದಕ್ಕಾಗಿ ತಂಡದ ಎಲ್ಲಾ ಆಟಗಾರರು ಕೂಡ ಸಿದ್ಧವಾಗಿರುತ್ತಾರೆ. " ಎಂದಿದ್ದಾರೆ ರೋಹಿತ್ ಶರ್ಮಾ. ಜೊತೆಗೆ ವಿರಾಟ್ ಕೊಹ್ಲಿ ತಂಡದಲ್ಲಿರುವುದು ತಂಡದ ಅನುಭವವನ್ನು ಹೆಚ್ಚಿಸುತ್ತದೆ ಎಂದು ಕೂಡ ಶರ್ಮಾ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರಭಾರತ vs ನ್ಯೂಜಿಲೆಂಡ್ ಸರಣಿಗಳ ಸಂಪೂರ್ಣ ವೇಳಾಪಟ್ಟಿ ಮತ್ತು ತಂಡಗಳ ವಿವರ

"ವಿರಾಟ್ ಕೊಹ್ಲಿ ತಮ್ಮ ಬಳಗವನ್ನು ಸೇರಿಕೊಂಡಾಗ ನಮ್ಮ ತಂಡದ ಬಲ ಹೆಚ್ಚಾಗುತ್ತದೆ. ಯಾಕೆಂದರೆ ವಿರಾಟ್ ಕೊಹ್ಲಿ ಅಂತಾ ದ್ಭುತವಾದ ಆಟಗಾರ ಹಾಗೂ ಆತನ ಅನುಭವ ಪ್ರಮುಖವಾಗಿದೆ. ಅದು ನಮ್ಮ ತಂಡದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ" ಎಂದಿದ್ದಾರೆ ಟೀಮ್ ಇಂಡಿಯಾದ ನೂತನ ನಾಯಕ.

ಅದು ಕ್ರಿಕೆಟ್‌ನ ನಿರ್ಧಾರ ಅಲ್ಲವೇ ಅಲ್ಲ: ಎಸ್‌ಆರ್‌ಹೆಚ್ ತಂಡದಿಂದ ವಾರ್ನರ್ ಹೊರಗಿಟ್ಟ ಬಗ್ಗೆ ಕೋಚ್ ಪ್ರತಿಕ್ರಿಯೆಅದು ಕ್ರಿಕೆಟ್‌ನ ನಿರ್ಧಾರ ಅಲ್ಲವೇ ಅಲ್ಲ: ಎಸ್‌ಆರ್‌ಹೆಚ್ ತಂಡದಿಂದ ವಾರ್ನರ್ ಹೊರಗಿಟ್ಟ ಬಗ್ಗೆ ಕೋಚ್ ಪ್ರತಿಕ್ರಿಯೆ

ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ಗೂ ಮುನ್ನ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ನಾಯಕತ್ವ ವಹಿಸಿಕೊಂಡ ಬಳಿಕ ತಾನು ಟಿ20 ಮಾದರಿಯ ನಾಯಕತ್ವದಿಂದ ಹೊರಗುಳಿಯುತ್ತೇನೆ ಎಂದು ಘೋಷಿಸಿದ್ದರು. ಹೀಗಾಗಿ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಚುಟುಕು ಮಾದರಿಯ ನಾಯಕನಾಗಿದ್ದಾರೆ. ಈ ಮಧ್ಯೆ ಸತತ ಕ್ರಿಕೆಟ್‌ನಿಂದ ಬಳಲಿರುವ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹಾಗೂ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದು ತಂಡವನ್ನು ಮುನ್ನಡೆಸಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ನಾಯಕತ್ವದ ಜವಾಬ್ಧಾರಿ ಅಜಿಂಕ್ಯಾ ರಹಾನೆ ಹೆಗಲೇರಿದೆ.

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, November 17, 2021, 10:54 [IST]
Other articles published on Nov 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X