IND vs NZ: ತವರಿನಲ್ಲಿ ಟೆಸ್ಟ್ ಸರಣಿ ಸೋಲಿನ ಭೀತಿಯಲ್ಲಿ ಭಾರತ; ಕಿವೀಸ್‌ಗೆ 301 ರನ್‌ಗಳ ಮುನ್ನಡೆ
ತವರಿನಲ್ಲಿ ಭಾರತ ತಂಡ 12 ವರ್ಷಗಳ ನಂತರ ಟೆಸ್ಟ್ ಸರಣಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಪುಣೆಯಲ್ಲಿ ನಡೆಯುತ್ತಿರುವ 'ಮಾಡು ಇಲ್ಲವೇ ಮಡಿ' ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸಂಕಷ್ಟದಲ್ಲಿದೆ.
ಪುಣೆಯ ಟರ್ನಿಂಗ್ ಪಿಚ್‌ನಲ್ಲಿ ಭಾರತದ ಮೊದಲ ಇನ್ನಿಂಗ್ಸ್ 156 ರನ್‌ಗಳಿಗೆ ಕುಸಿಯಿತು. ಟೀಮ್ ಇಂಡಿಯಾ ಪರ ರವೀಂದ್ರ ಜಡೇಜಾ ಗರಿಷ್ಠ 38 ರನ್ ಗಳಿಸಿದರು. ನ್ಯೂಜಿಲೆಂಡ್ ಪರ ಮಿಚೆಲ್ ಸ್ಯಾಂಟ್ನರ್ ಗರಿಷ್ಠ 7 ವಿಕೆಟ್ ಪಡೆದರು. ಗ್ಲೆನ್ ಫಿಲಿಪ್ಸ್ 2 ಮತ್ತು ಟಿಮ್ ಸೌಥಿ 1 ವಿಕೆಟ್ ಪಡೆದರು. ಇದರೊಂದಿಗೆ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 259 ರನ್ ಗಳಿಸಿತ್ತು.

ಮೊದಲ ಇನಿಂಗ್ಸ್‌ನಲ್ಲಿ 103 ರನ್‌ಗಳ ಮುನ್ನಡೆ ಪಡೆದ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ಬೃಹತ್ ಮೊತ್ತ ಕಲೆ ಹಾಕುವ ಕಡೆ ಸಾಗಿದೆ. ಪುಣೆಯ ಪಿಚ್‌ನಲ್ಲಿ 200 ರನ್ ಗಳ ಗುರಿ ಇದ್ದರೂ ಪಂದ್ಯ ಗೆಲ್ಲಲು ಸಾಕು. ಇಂತಹ ಸಂದರ್ಭದಲ್ಲಿ ಕಿವೀಸ್ ಪಡೆ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದೆ. ಇದೀಗ ನ್ಯೂಜಿಲೆಂಡ್ ಒಟ್ಟು 301 ರನ್ ಮುನ್ನಡೆ ಸಾಧಿಸಿದೆ. ಕಿವೀಸ್ ಪರ ಟಾಮ್ ಬ್ಲಂಡೆಲ್ (30) ಮತ್ತು ಗ್ಲೆನ್ ಫಿಲಿಪ್ಸ್ (9) ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಟಾಮ್ ಲ್ಯಾಥಮ್ (86), ಡೆವೊನ್ ಕಾನ್ವೇ (17) ವಿಲ್ ಯಂಗ್ (23), ರಚಿನ್ ರವೀಂದ್ರ (9 ಮತ್ತು ಡೇರಿಲ್ ಮಿಚೆಲ್ (18) ಔಟಾಗಿದ್ದಾರೆ.
ಟೀಮ್ ಇಂಡಿಯಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಅದ್ಭುತ ಬೌಲಿಂಗ್ ಪ್ರದರ್ಶಿಸಿರುವ ವಾಷಿಂಗ್ಟನ್ ಸುಂದರ್ ಪ್ರಮುಖ 4 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರೆ, ರವಿಚಂದ್ರನ್ ಅಶ್ವಿನ್ ಒಂದು ವಿಕೆಟ್ ಪಡೆದಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ 301 ರನ್ ಹಿನ್ನಡೆ ಅನುಭವಿಸಿರುವ ಟೀಮ್ ಇಂಡಿಯಾ ಗೆಲುವಿನ ಹಾದಿ ಕಠಿಣವಾಗಿದೆ. ಭಾರತ ಪುಣೆ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಾದರೆ, ಶನಿವಾರ ಮೂರನೇ ದಿನದಾಟದಂದು ನ್ಯೂಜಿಲೆಂಡ್ ತಂಡವನ್ನು ಅದಷ್ಟು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಬೇಕು. ಜೊತೆಗೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ ಜವಬ್ದಾರಿಯುವ ಬ್ಯಾಟಿಂಗ್ ಮಾಡಬೇಕಾಗಿದೆ. ಇದು ಸಾಧ್ಯವಾದರೆ, ಭಾರತ ಸರಣಿಯನ್ನು ಉಳಿಸಿಕೊಳ್ಳಲಿದೆ.
ನಾಯಕ ಅಮೋಘ ಪ್ರದರ್ಶನ
ಪುಣೆ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಪುಟಿದೆದಿದ್ದಾರೆ. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಟಾಮ್ ಲ್ಯಾಥಮ್ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡು ಬರಲಿಲ್ಲ. ಜೊತೆಗೆ ಪುಣೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿಯೂ ಲ್ಯಾಥಮ್ ಮಂಕಾಗಿದ್ದರು. ಇದೀಗ ಅದ್ಭುತವಾಗಿ ಬ್ಯಾಟಿಂಗ್ ಮಾಡಿರು ಲ್ಯಾಥಮ್ ಶತಕ ವಂಚಿತರಾಗಿದ್ದಾರೆ. ಅವರು 133 ಎಸೆತಗಳಲ್ಲಿ 10 ಬೌಂಡರಿ ಬಾರಿಸುವ ಮೂಲಕ 86 ರನ್ ಕಲೆ ಹಾಕಿ ಔಟಾಗಿದ್ದಾರೆ. ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಲ್ಯಾಥಮ್ ಎದುರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications