Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಕಿವೀಸ್ ಸೆಮಿಫೈನಲ್‌ ಪಂದ್ಯದಲ್ಲಿ ಗೆಲ್ಲೋ ತಂಡ ಊಹಿಸಿದ ಕ್ಲಾರ್ಕ್!

India vs New Zealand, semi-finals: Michael Clarke predicts winner

ಮ್ಯಾಂಚೆಸ್ಟರ್, ಜುಲೈ 9: ಐಸಿಸಿ ವಿಶ್ವಕಪ್ 2019ರ ಲೀಗ್ ಹಂತದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು ಎದುರುಬದುರಾದಾಗ ಹುಟ್ಟಿದ್ದ ಕುತೂಹಲ ಆ ಪಂದ್ಯ ಮಳೆಯಿಂದ ರದ್ದಾದಾಗ ನಿರಾಶೆ ಮೂಡಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಮತ್ತೆ ನ್ಯೂಜಿಲೆಂಡ್-ಟೀಂ ಇಂಡಿಯಾ ಮುಖಾಮುಖಿಯಾಗಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಈ ಪಂದ್ಯಲ್ಲೂ ಮಳೆಯ ಭೀತಿ ಇದೆಯಾದರೂ ಹಾಗೂ ಹೀಗೂ ಪಂದ್ಯ ನಡೆದರೆ ಅದರಲ್ಲಿ ವಿರಾಟ್ ಕೊಹ್ಲಿ ಬಳಗ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ. ಮಂಗಳವಾರ (ಜುಲೈ 9) ಈ ಪಂದ್ಯ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ 3 pmಗೆ ಆರಂಭಗೊಳ್ಳಲಿದೆ.

ನ್ಯೂಜಿಲೆಂಡ್ vs ಭಾರತ, ಸೆಮಿಫೈನಲ್ 1, ಜುಲೈ 9, Live ಸ್ಕೋರ್‌ಕಾರ್ಡ್

1
43689

ಇಂಡಿಯಾ ಟುಡೇ ಜೊತೆ ಮಾತನಾಡುತ್ತ ಕ್ಲಾರ್ಕ್, 'ಭಾರತ ತಂಡ ಈ ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಲಿದೆ ಎನ್ನುವುದಕ್ಕೆ ಯಾವುದೇ ಹೆಚ್ಚಿನ ಬುದ್ಧಿವಂತಿಕೆ ಬೇಡ. ಕ್ರಿಕೆಟ್‌ನಲ್ಲಿ ಹೀಗೆ ಯಾವತ್ತಿಗೂ ಹೇಳುವಂತಿಲ್ಲ. ಒಂದುವೇಳೆ ಭಾರತದ ಆಟಗಾರನಾಗಿದ್ದರೆ ನಾನು ಹೀಗೆ ಯೋಚಿಸಬಾರದು. ನಾನೊಂದುವೇಳೆ ವಿರಾಟ್ ಕೊಹ್ಲಿಯಾಗಿದ್ದರೂ ಹೀಗೆ ಆಲೋಚಿಸಬಾರದು' ಎಂದಿದ್ದಾರೆ.

ಆಡಿರುವ 8 ಪಂದ್ಯಗಳಲ್ಲಿ ಒಟ್ಟು 7ರಲ್ಲಿ ಜಯ ಗಳಿಸಿರುವ ವಿರಾಟ್ ಕೊಹ್ಲಿ ಬಳಗ 2019ರ ವಿಶ್ವಕಪ್ ಟೂರ್ನಿಯಲ್ಲಿ ಅತೀ ಬಲಿಷ್ಟ ತಂಡವಾಗಿ ಹೊರಹೊಮ್ಮಿದೆ. ಲೀಗ್‌ನಲ್ಲಿ ಒಟ್ಟು 15 ಅಂಕಗಳನ್ನು ಕಲೆ ಹಾಕಿರುವ ಭಾರತ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನುಳಿದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡವಿದೆ.

'ಕ್ರಿಕೆಟ್‌ನಲ್ಲಿ ಒಂದು ತಂಡವನ್ನು ಫೇವರಿಟ್ ಆಗಿಸಿ ಮಾತನಾಡಬಾರು. ಆದರೆ ಭಾರತ ಈ ಟೂರ್ನಿಯಲ್ಲಿ ನಂಬಲಾರದ ಪ್ರದರ್ಶನ ನೀಡುತ್ತಿದೆ. ಈ ಸಂದರ್ಭದಲ್ಲಿ ನನ್ನ ಪ್ರಕಾರ ಭಾರತ ಈಗಾಗಲೇ ಫೈನಲ್‌ನತ್ತ ಹೆಜ್ಜೆಯಿಟ್ಟಿದೆ' ಎಂದು ಕ್ಲಾರ್ಕ್ ಟೀಮ್ ಇಂಡಿಯಾ ಸೆಮಿಫೈನಲ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Story first published: Tuesday, July 9, 2019, 15:02 [IST]
Other articles published on Jul 9, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+