ಭಾರತ vs ಕಿವೀಸ್, ಸೆ.ಫೈನಲ್: ಮೀಸಲು ದಿನವೂ ಮಳೆಯಾಟ ಜೋರು?!

ಮ್ಯಾಂಚೆಸ್ಟರ್, ಜುಲೈ 10: ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ನಲ್ಲಿ ಮಂಗಳವಾರ (ಜುಲೈ 9) ಆರಂಭಗೊಂಡಿರುವ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಪೂರ್ಣಗೊಂಡಿಲ್ಲ. ಪಂದ್ಯವನ್ನು ನಿಲುಗಡೆಗೊಳಿಸಲಾಗಿದೆ. ಆದರೆ ಮೀಸಲು ದಿನವಾದ ಬುಧವಾರವೂ (ಜುಲೈ 10) ಮಳೆಯಾಟ ನಡೆಯುವ ಸಂಭವವಿದೆ.
ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ
ಮಂಗಳವಾರ ಪಂದ್ಯಾರಂಭದ ವೇಳೆ ಮಳೆ ಅಡ್ಡಿಪಡಿಸಿರಲಿಲ್ಲ. ಹೀಗಾಗಿ ಟಾಸ್ ಗೆದ್ದ ನ್ಯೂಜಿಲೆಂಡ್ ಇನ್ನಿಂಗ್ಸ್ ಶುರು ಮಾಡಿತ್ತು. ಆರಂಭಿಕ ಇನ್ನಿಂಗ್ಸ್ ಇನ್ನೇನು ಮುಗಿಯಲಿದೆ ಅನ್ನುವಾಗ ಅಂದರೆ 46.5 ಓವರ್‌ನಲ್ಲಿ ಮಳೆ ಶುರುವಾಯ್ತು. ಪಂದ್ಯ ನಿಲ್ಲಿಸಲಾಯ್ತು. ಈ ವೇಳೆ ಕಿವೀಸ್ 5 ವಿಕೆಟ್ ನಷ್ಟಕ್ಕೆ 211 ರನ್ ಬಾರಿಸಿತ್ತು.
ಭಾರತ vs ನ್ಯೂಜಿಲೆಂಡ್, ಸೆ.ಫೈನಲ್, ದಿನ 2, ಬುಧವಾರ (ಜುಲೈ 10), Live ಸ್ಕೋರ್‌ಕಾರ್ಡ್
ಮ್ಯಾಂಚೆಸ್ಟರ್ ಹವಾಮಾನ ವರದಿಯೊಂದರಲ್ಲಿ, 'ಬುಧವಾರವೂ ಮೋಡ ಕವಿದ ವಾತಾವರಣವಿರಲಿದೆ. ಭಾರೀ ಮಳೆಯಾಗುವುದನ್ನು ನಿರೀಕ್ಷಿಸಲಾಗಿದೆ. ನಡು ನಡುವೆ ಕೊಂಚ ಮಳೆಯಾಟ ನಿಲ್ಲಲಿದೆ. ಆಟಕ್ಕೆ ಅವಕಾಶವೂ ಲಭಿಸಲಿದೆ' ಎಂದು ಹೇಳಲಾಗಿದೆ.
ನಿಲುಗಡೆಯಾಗಿರುವ ಮಂಗಳವಾರದ ಪಂದ್ಯ, ಬುಧವಾರ ಎಂದಿನಂತೆ ಭಾರತೀಯ ಕಾಲಮಾನ 3 pmಗೆ ಆರಂಭವಾಗಲಿದೆ. ಯಾಕೆಂದರೆ ಹವಾಮಾನ ವರದಿಯ ಪ್ರಕಾರ ಈ ವೇಳೆ ಮಳೆ ಬರುವ ಸಾಧ್ಯತೆಯಿಲ್ಲ. ಆದರೆ 4.30 pm ಹೊತ್ತಿಗೆ ಮಳೆ ತನ್ನಾಟ ಶುರು ಮಾಡಲಿದೆ. ಅನಂತರ ಬಹಳಷ್ಟು ಕಾಲ ಮಳೆಯಾಗುವುದು ನಿರೀಕ್ಷಿತ.
ಮೋಡ ಕವಿದ ವಾತಾವರಣವಿರುವುದರಿಂದ ಬುಧವಾರ ಪಂದ್ಯದ ವೇಳೆ ಸಣ್ಣಗಿನ ಮಳೆ ಬಹಳ ಕಾಲ ಮುಂದುವರೆಯಲಿದೆ. ರಾತ್ರಿ 9.30 pm ವೇಳೆಗೆ ವರುಣನಾರ್ಭಟ ತಗ್ಗಲಿದೆ. ಹೀಗಾಗಿ ಪಂದ್ಯ ಯಾವ ದಿಕ್ಕಿನಲ್ಲಿ ಸಾಗಲಿದೆಯೋ ಈಗಲೇ ಹೇಳುವಂತಿಲ್ಲ. ಮಳೆ ಮತ್ತು ಆಟದ ಸ್ಥಿತಿಗತಿಗಳು ಫಲಿತಾಂಶವನ್ನು ನಿರ್ಧರಿಸಲಿದೆ.
ಅಂತೂ ಇನ್ನು ಇತ್ತಂಡಗಳ ಈ ಪಂದ್ಯ 20 ಓವರ್‌ಗಳಲ್ಲಿ ನಡೆಯುತ್ತಿಲ್ಲ. ಮಂಗಳವಾರ ಈ ವಿಧಾನಕ್ಕೆ ಅವಕಾಶ ಲಭಿಸುತ್ತದೋ ಎಂದು ಅಧಿಕಾರಿಗಳು ಕಾದರಾದರೂ ಮೊದಲ ಇನ್ನಿಂಗ್ಸ್ ಈಗಾಗಲೇ 45 ಓವರ್ ದಾಟಿಯಾಗಿದೆ. ಹೀಗಾಗಿ ಇನ್ನೇನಿದ್ದರೂ ನಡೆದರೆ 50 ಓವರ್‌ಗಳ ಪಂದ್ಯವೇ ನಡೆಯಬೇಕಿದೆ. ಬುಧವಾರವೂ ಮಳೆಯಿಂದ ಪಂದ್ಯ ನಡೆಯದಿದ್ದರೆ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಫೈನಲ್ ಪ್ರವೇಶದ ಅನುಕೂಲ ಪಡೆದುಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications