For Quick Alerts
ALLOW NOTIFICATIONS  
For Daily Alerts
 

ಭಾರತ vs ಕಿವೀಸ್: ವೇಗಿ ಶಮಿ ಈಗ ಏಕದಿನ 100 ವಿಕೆಟ್‌ಗಳ ವೀರ

India vs New Zealand: ವೇಗಿ ಶಮಿ ಈಗ ಏಕದಿನ 100 ವಿಕೆಟ್‌ಗಳ ವೀರ | Oneindia Kannada
India vs New Zealand: Shami fastest Indian to 100 ODI wickets

ನೇಪಿಯರ್, ಜನವರಿ 23: ನ್ಯೂಜಿಲ್ಯಾಂಡ್‌ನ ನೇಪಿಯರ್ ನಲ್ಲಿ ನಡೆದ/ನಡೆಯುತ್ತಿರುವ ಭಾರತ vs ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ ಅವರನ್ನು ಭಾರತದ ವೇಗಿ ಮೊಹಮ್ಮದ್ ಶಮಿ 5 ರನ್ನಿಗೆ ಪೆವಿಲಿಯನ್‌ಗೆ ಅಟ್ಟಿದರು. ಇದರೊಂದಿಗೆ ಶಮಿ ಏಕದಿನದಲ್ಲಿ 100 ವಿಕೆಟ್‌ಗಳ ಸಾಧನೆ ಮೆರೆದಿದ್ದಾರೆ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44080

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ ಆರಂಭಿಕರಾದ ಗಪ್ಟಿಲ್ ಅವರನ್ನು ಶಮಿ ಮೊದಲ ಓವರ್‌ನಲ್ಲೇ ಬೌಲ್ಡ್ ಮಾಡಿದರು. ಅಲ್ಲದೆ ಕಾಲಿನ್ ಮುನ್ರೋ (8 ರನ್) ಕೂಡ ಶಮಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಶಮಿ ಈ ಸಾಧನೆ ಅವರನ್ನು ಏಕದಿನ ಪಂದ್ಯದಲ್ಲಿ ಬೇಗನೆ 100 ವಿಕೆಟ್ ಪೂರೈಸಿದ ಭಾರತೀಯನ ಸಾಲಿನಲ್ಲಿ ತಂದು ನಿಲ್ಲಿಸಿದೆ.

ಏಕದಿನದಲ್ಲಿ ಕಡಿಮೆ ಪಂದ್ಯದಲ್ಲಿ 100 ವಿಕೆಟ್ ಸಾಧನೆ ಮೂಲಕ ಶಮಿ, ಭಾರತದ ಮತ್ತೊಬ್ಬ ವೇಗಿ, ಮಾಜಿ ಆಟಗಾರ ಇರ್ಫಾನ್ ಪಠಾಣ್ ದಾಖಲೆಯನ್ನು ಮೀರಿಸಿದೆ. ಪಠಾಣ್ 59 ಪಂದ್ಯಗಳಲ್ಲಿ ಏಕದಿನ 100 ಗಳಿಸಿದ್ದರೆ, ಶಮಿ ಇದೇ ಸಾಧನೆಗಾಗಿ 56 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ.

ಬೆಂಗಾಲ್‌ನ ಬಲಗೈ ಮಧ್ಯಮ ವೇಗಿ, 28ರ ಹರೆಯದ ಶಮಿ ಒಟ್ಟು 56 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 5.51 ಎಕಾನಮಿಯಲ್ಲಿ 25.68ರ ಸರಾಸರಿಯಂತೆ 102 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ನಲ್ಲಿ ಮೊಹಮ್ಮದ್ 144 ವಿಕೆಟ್ ಸಾಧನೆ ಹೊಂದಿದ್ದಾರೆ.

Story first published: Wednesday, January 23, 2019, 9:46 [IST]
Other articles published on Jan 23, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+