ಭಾರತ vs ನ್ಯೂಜಿಲೆಂಡ್: ಮೊದಲನೇ ಟಿ20ಐಗೆ ಭಾರತ ಸಂಭಾವ್ಯ XI

ಆಕ್ಲೆಂಡ್, ಜನವರಿ 23: ಸುದೀರ್ಘ ಪ್ರವಾಸ ಸರಣಿಗಾಗಿ ನ್ಯೂಜಿಲೆಂಡ್‌ಗೆ ತೆರಳಿರುವ ಟೀಮ್ ಇಂಡಿಯಾ, ಜನವರಿ 24ರಿಂದ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲಿದೆ. ಅದಾಗಿ 3 ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ.
ಭಾರತ-ನ್ಯೂಜಿಲೆಂಡ್ ಪ್ರವಾಸ ಸರಣಿ ಜನವರಿ 24ರಿಂದ ಆರಂಭವಾಗಿ ಮಾರ್ಚ್ 4ರಂದು ಕೊನೆಗೊಳ್ಳಲಿದೆ. ಅಂದರೆ ಸುಮಾರು 40 ದಿನಗಳ ಕಾಲ ನಡೆಯಲಿರುವ ಈ ಪ್ರವಾಸ ಸರಣಿ ಪಂದ್ಯಗಳು ಜಿದ್ದಾಜಿದ್ದಿಯೆನಿಸುವುದನ್ನು ನಿರೀಕ್ಷಿಸಲಾಗಿದೆ.
ಭಾರತ vs ನ್ಯೂಜಿಲೆಂಡ್, 1ನೇ ಟಿ20ಐ, Live ಸ್ಕೋರ್‌ಕಾರ್ಡ್
ಕುತೂಹಲಕಾರಿ ಈ ಪ್ರವಾಸ ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಭಾರತ ಪರ ಮೈದಾನಕ್ಕಿಳಿಯಲಿರುವ ಆಟಗಾರರ ಪಟ್ಟಿ ಇಂತಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು
ಶಿಖರ್ ಧವನ್ ಗಾಯಗೊಂಡು ಟಿ20 ಸರಣಿಯಿಂದ ಹೊರ ಬಿದ್ದಿರುವುದರಿಂದ ಭಾರತದ ಓಪನರ್‌ಗಳಾಗಿ ಉಪನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆಎಲ್ ರಾಹುಲ್ ಬರಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬರಲಿದ್ದಾರೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ
ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಬರುವ ನಿರಿಕ್ಷೆಯಿದೆ. ಇನ್ನು 5ನೇ ಕ್ರಮಾಂಕದಲ್ಲಿ ರಿಷಬ್ ಪಂತ್, 6ರಲ್ಲಿ ಕನ್ನಡಿಗ ಮನೀಶ್ ಪಾಂಡೆ ಬ್ಯಾಟ್ ಕೈಗೆತ್ತಿಕೊಳ್ಳಲಿದ್ದಾರೆ (4. ಶ್ರೇಯಸ್ ಐಯ್ಯರ್, 5. ರಿಷಬ್ ಪಂತ್, 6. ಮನೀಶ್ ಪಾಂಡೆ).

ಆಲ್ ರೌಂಡರ್‌ಗಳು
ಭಾರತದ ಆಲ್ ರೌಂಡರ್‌ಗಳ ಬಣದಲ್ಲಿ ಶಿವಂ ದೂಬೆ ಮತ್ತು ರವೀಂದ್ರ ಜಡೇಜಾ ಇರಲಿದ್ದಾರೆ. 7ನೇ ಕ್ರಮಾಂಕದಲ್ಲಿ ದೂಬೆ, 8ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಬರುವುದನ್ನು ನಿರೀಕ್ಷಿಸಲಾಗಿದೆ (7. ಶಿವಂ ದೂಬೆ, 8. ರವೀಂದ್ರ ಜಡೇಜಾ).

ಬೌಲರ್‌ಗಳ ಬಳಗ
ಕೊಹ್ಲಿ ಪಡೆಗೆ ಬೌಲರ್ ಬಣದಲ್ಲಿ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಬಲವಾಗಿ ಇರುವುದನ್ನು ನಿರೀಕ್ಷಿಸಲಾಗಿದೆ (9. ಕುಲದೀಪ್ ಯಾದವ್, 10. ಮೊಹಮ್ಮದ್ ಶಮಿ, 11. ಜಸ್‌ಪ್ರೀತ್ ಬೂಮ್ರಾ).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications