ಬೂಮ್ರಾಗೆ ಸೂಪರ್ ಓವರ್: ಕಾರಣ ಬಿಚ್ಚಿಟ್ಟ ರೋಹಿತ್ ಶರ್ಮಾ !

ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಮೂರನೇ ಪಂದ್ಯವನ್ನು ಟೀಮ್ ಇಂಡಿಯಾ ಸೂಪರ್ ಓವರ್‌ನಲ್ಲಿ ಗೆದ್ದುಕೊಂಡಿದೆ. ಆದರೆ ಸೂಪರ್ ಓವರ್ ಅನ್ನು ಬೂಮ್ರಾಗೆ ಯಾಕೆ ನೀಡಲಾಯಿತು ಎಂಬ ವಿಚಾರ ಒಂದಷ್ಟು ಚರ್ಚೆಗೂ ಕಾರಣವಾಗಿದೆ. ಈ ವಿಚಾರವಾಗಿ ತಂಡದಲ್ಲೂ ಗೊಂದಲವಿತ್ತು ಅನ್ನೋದನ್ನು ಉಪನಾಯಕ ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಜಸ್ಪ್ರೀತ್ ಬೂಮ್ರಾ ದುಬಾರಿಯಾಗಿದ್ದರು. ನಾಲ್ಕು ಓವರ್‌ಗಳಲ್ಲಿ ಬರೊಬ್ಬರಿ 45ರನ್‌ಗಳನ್ನು ನೀಡಿದ್ದರು. ಇದು ಜಸ್ಪ್ರೀತ್ ಬೂಮ್ರಾ ಅವರ ಎರಡನೇ ದುಬಾರಿ ಸ್ಪೆಲ್ ಕೂಡ ಆಗಿದೆ. 2016ರಲ್ಲಿ ಜಸ್ಪ್ರೀತ್ ಬೂಮ್ರಾ ವೆಸ್ಟ್ ಇಂಡೀಸ್ ವಿರುದ್ಧ 47ರನ್ ಬಿಟ್ಟುಕೊಟ್ಟಿದ್ದು ಅತ್ಯಂತ ದುಬಾರಿ ಸ್ಪೆಲ್ ಆಗಿದೆ.
ಆದರೆ ಮೊಹಮ್ಮದ್ ಶಮಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದರು. ಅಂತಿಮ ಓವರ್‌ನಲ್ಲಿ ನ್ಯೂಜಿಲ್ಯಾಂಡನ್ನೂ ಸಂಪೂರ್ಣವಾಗಿ ನಿಯಂತ್ರಿಸಿದ್ದರು. ಮೊದಲ ಎಸೆತದಲ್ಲಿ ಸಿಕ್ಸರ್ ನೀಡಿದರೂ ಬಳಿಕ ಕೇವಲ ಎರಡೇ ರನ್ ನೀಡಿ ಎರಡು ವಿಕೆಟ್ ಪಡೆದರು. ಹಾಗಿದ್ದರೂ ಮೊಹಮದ್ ಶಮಿಯನ್ನು ಸೂಪರ್ ಓವರ್‌ನಲ್ಲಿ ಆಡಿಸದೆ ಬೂಮ್ರಾ ಕೈಗೆ ಬಾಲ್ ನೀಡಲಾಗಿತ್ತು

ಗೊಂದಲ ಇತ್ತು ಎಂದ ಶರ್ಮಾ
ಬೌಲಿಂಗ್ ಗೊಂದಲದ ಬಗ್ಗೆ ಉಪನಾಯಕ ರೋಹಿತ್ ಶರ್ಮಾ ಹೇಳಿಕೆ ನೀಡಿದ್ದಾರೆ. ಯಾರಿಗೆ ಅಂತಿಮ ಓವರನ್ನು ನೀಡಬೇಕು ಎಂಬ ಬಗ್ಗೆ ನಮ್ಮಲ್ಲೂ ಸ್ವಲ್ಪ ಗೊಂದಲ ಇತ್ತು ಎಂಬ ಮಾತನ್ನು ರೋಹಿತ್ ಶರ್ಮಾ ಹೇಳಿದ್ದಾರೆ. ಬೂಮ್ರಾ, ಶಮಿ ಜೊತೆಗೆ ಜಡೇಜಾ ಆಯ್ಕೆಯೂ ನಮ್ಮ ಮುಂದಿತ್ತು ಎಂದಿದ್ದಾರೆ ರೋಹಿತ್ ಶರ್ಮಾ.

ಕೀ ಬೌಲರ್ ಬೂಮ್ರಾ
ಬೂಮ್ರಾ ತಂಡದ ಕೀ ಬೌಲರ್ ಆಗಿದ್ದಾರೆ. ಆದರೆ ಸ್ಥಿರವಾಗಿ ಯಾರ್ಕರ್, ಸ್ಲೋವರ್ ಬಾಲ್‌ನಂತಾ ವಿಚಾರವನ್ನು ಈ ಸಂದರ್ಭದಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಈ ಮೂಲಕ ಶಮಿ ಅವರ ಬದಲಿಗೆ ಬೂಮ್ರಾ ಅವರನ್ನು ಯಾಕೆ ಆಯ್ಕೆ ಮಾಡಲಾಯಿತು ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ದುಬಾರಿಯಾದ ವೇಗಿ:
ಸೂಪರ್ ಓವರ್ ಎಸೆಯಲು ಬಂದ ಬೂಮ್ರಾ ದುಬಾರಿಯಾದರು. ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯನ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ ಸೂಪರ್ ಓವರ್‌ನಲ್ಲಿ 17 ರನ್ ಗಳಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ಒತ್ತಡ ಬೀಳುವಂತೆ ಮಾಡಿದರು.

ಸೂಪರ್ ಓವರ್ ಶಮಿಗೆ ನೀಡಬೇಕಿತ್ತು ಎಂದ ಅಖ್ತರ್:
ಸೂಪರ್ ಓವರ್‌ಅನ್ನು ಬೂಮ್ರಾಗೆ ನೀಡಿದ್ದು ಕೊಹ್ಲಿಯ ತಪ್ಪು ನಿರ್ಧಾರ ಎಂಬ ಮಾತನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದರು. ಶಮಿ ಆಗ ತಾನೆ ಬೌಲಿಂಗ್ ಮಾಡಿ ವಾರ್ಮ್ ಅಪ್ ಆಗಿದ್ದರು. ಅಂತಾ ಸಂದರ್ಭದಲ್ಲಿ ಶಮಿಗೆ ನೀಡಿದ್ದರೆ ಉತ್ತಮ ನಿರ್ಧಾರವಾಗುತ್ತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications