Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸೀಮಿತ ಪ್ರೇಕ್ಷಕರಿಗೆ ಅನುಮತಿ

India vs New Zealand WTC final, limited fans may be allowed

ನವದೆಹಲಿ: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯ ಲಂಡನ್‌ನ ಲಾರ್ಡ್ಸ್‌ಗೆ ಬದಲಾಗಿ ಸೌತಾಂಪ್ಟನ್‌ನ ಹ್ಯಾಂಪ್‌ಶೈರ್‌ ಬೌಲ್‌ನಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಕಾದಾಡಲಿವೆ.

ಜೂನ್ 18ರಂದು ಆರಂಭಗೊಳ್ಳುವ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 22ರಂದು ಕೊನೆಗೊಳ್ಳಲಿದೆ. ಜೂನ್ 23ನ್ನು ಮೀಸಲು ದಿನಾಂಕವಾಗಿ ಪರಿಗಣಿಸಲಾಗಿದೆ ಎಂದು ಐಸಿಸಿ ಬುಧವಾರ (ಮಾರ್ಚ್ 10) ಘೋಷಿಸಿದೆ.

ಫೈನಲ್ ಪಂದ್ಯದ ವೇಳೆ ಆರೋಗ್ಯ ಮತ್ತು ಸುರಕ್ಷೆಯ ಬಗ್ಗೆ ನಿಗಾ ವಹಿಸುವುದಾಗಿ ಐಸಿಸಿ ಹೇಳಿಕೊಂಡಿದೆ. ಈ ಬಗ್ಗೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ ಜೊತೆ ಸಮಾಲೋಚನೆ ನಡೆಸಿರುವುದಾಗಿ ಅದು ತಿಳಿಸಿದೆ. ಈ ಬಾರಿ ನಡೆಯುತ್ತಿರುವುದು ಉದ್ಘಾಟನಾ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್.

ಜುಲೈ 2019ರಲ್ಲಿ ಆರಂಭವಾಗಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ 2021ರಲ್ಲಿ ಅಂದರೆ 3 ವರ್ಷಗಳ ಅವಧಿಯಲ್ಲಿ ನಡೆಯುವುದರಲ್ಲಿದೆ. ಫೈನಲ್ ಪಂದ್ಯದ ವೇಳೆ ಸೀಮಿತ ಅಭಿಮಾನಿಗಳಿಗಷ್ಟೇ ಸ್ಟೇಡಿಯಂನಲ್ಲಿದ್ದು ಪಂದ್ಯ ವೀಕ್ಷಿಸಲು ಅನುಮತಿ ದೊರೆಯುವ ನಿರೀಕ್ಷೆಯಿದೆ.

Story first published: Wednesday, March 10, 2021, 17:37 [IST]
Other articles published on Mar 10, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+