IND vs NZ ಚಾಂಪಿಯನ್ಸ್ ಟ್ರೋಫಿ ಫೈನಲ್: ಸ್ಪಿನ್ ಬೌಲರ್‌ಗಳ ಆರ್ಭಟ: ರನ್‌ಗಳಿಸಲು ಕಿವೀಸ್ ಪರದಾಟ
ಟೀಮ್ ಇಂಡಿಯಾದ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ. ಆರಂಭದಲ್ಲಿ ಅಬ್ಬರದ ಆಟವನ್ನು ಆಡಿದ ಕಿವೀಸ್ ತಂಡದ ಬ್ಯಾಟರ್ಸ್ ಸ್ಪಿನ್ ಬೌಲರ್ಸ್‌ಗಳು ದಾಳಿಗೆ ಬರುತ್ತಿದ್ದಂತೆ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. ಭಾರತದ ಇಬ್ಬರು ಸ್ಪಿನ್ ಬೌಲರ್‌ಗಳಾದ ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ಅವರ ಶಿಸ್ತು ಬದ್ಧ ದಾಳಿಯನ್ನು ಎದುರಿಸುವಲ್ಲಿ ನ್ಯೂಜಿಲೆಂಡ್ ಮಕಾಡೆ ಮಲಗಿದೆ. ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಸಹ ವಿಕೆಟ್ ಕಬಳಿಸುವಲ್ಲಿ ಕೊಂಚ ಹಿಂದೆ ಬಿದ್ದರೂ ಸಹ ಎಫೆಕ್ಟಿವ್ ಆಗಿದ್ದಾರೆ.
ದುಬೈನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿತು. ನಾಯಕ ಮಿಚೆಲ್ ಸ್ಯಾಂಟ್ನರ್ ಅವರ ನಿರ್ಧಾರವನ್ನು ಆರಂಭಿಕರು ಸಮರ್ಥಿಸಿಕೊಂಡರು. ವಿಲ್ ಯಂಗ್ ಹಾಗೂ ರಚಿನ್ ರವೀಂದ್ರ ಜೋಡಿ ತಂಡಕ್ಕೆ ಭರ್ಜರಿ ಜೊತೆಯಾಟ ನಡೆಸಿತು. ಈ ಜೋಡಿ ಮೊದಲ ವಿಕೆಟ್‌ಗೆ 7.5 ಓವರ್‌ಗಳಲ್ಲಿ 57 ರನ್‌ಗಳನ್ನು ಸೇರಿಸಿತು.

ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ವರುಣ್ ಚಕ್ರವರ್ತಿ 8ನೇ ಓವರ್ ಬೌಲ್ ಮಾಡಲು ಬಂದರು. ಆಗ ವಿಲ್ ಯಂಗ್ ಇವರ ಪಿರ್ಕಿ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು. ಇವರು 15 ರನ್ ಬಾರಿಸಿದ್ದಾಗ ವರುಣ್‌ಗೆ ವಿಕೆಟ್ ಒಪ್ಪಿಸಿದರು.
ಕುಲ್‌ದೀಪ್ ಮಿಂಚು
ವೇಗದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ್ದ ರಚಿನ್ ರವೀಂದ್ರ ಅವರ ಆಟಕ್ಕೆ ಕಟ್ಟಿ ಹಾಕಲು ಚೈನಾ ಮೆನ್ ಬೌಲರ್ ಕುಲ್ದೀಪ್ ಯಾದವ್‌ಗೆ ಚೆಂಡನ್ನು ನೀಡಿದರು. ಈ ವೇಳೆ ರಚಿನ್ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 37 ರನ್ ಬಾರಿಸಿದ್ದಾಗ ಔಟ್ ಆದರು. ಇವರು ಕುಲ್‌ದೀಪ್ ಯಾದವ್ ಅವರ ಗುಗ್ಲೀ ಎಸೆತವನ್ನು ಎದುರಿಸುವಲ್ಲಿ ವಿಫಲರಾದರು.
ಕುಲ್‌ದೀಪ್ ಯಾದವ್ ಅವರ ಎರಡನೇ ಓವರ್‌ನಲ್ಲಿ ಚೈನಾ ಮೆನ್ ಎಸೆತವನ್ನು ಎದುರಿಸುವಲ್ಲಿ ಅನುಭವಿ ಕೇನ್ ವಿಲಿಯಮ್ಸನ್ ವಿಫಲರಾದರು. ಪರಿಣಾಮ ಕೌಟ್ ಆಂಡ್ ಬೋಲ್ಡ್ ಆದರು. ಇವರ ಆಟ 11 ರನ್‌ಗಳಿಗೆ ಕೊನೆ ಗೊಂಡಿತು. ಟಾಮ್ ಲಾಥಮ್ 14 ರನ್ ಬಾರಿಸಿದ್ದಾಗ ಜಡ್ಡುಗೆ ವಿಕೆಟ್ ಒಪ್ಪಿಸಿದರು.
ಮಿಚೆಲ್ ಅರ್ಧಶತಕ
ಐದನೇ ವಿಕೆಟ್‌ಗೆ ಡೇರಿಲ್ ಮಿಚೆಲ್ ಹಾಗೂ ಗ್ಲೇನ್ ಫಿಲಿಪ್ಸ್ ಜೋಡಿ ಸಮಯೋಚಿತ ಜೊತೆಯಾಟದ ಕಾಣಿಕೆ ನೀಡಿತು. ಈ ಜೊಡಿ 87 ಎಸೆತಗಳಲ್ಲಿ 57 ರನ್ ಸೇರಿಸಿತು. ಗ್ಲೇನ್ ಫಿಲಿಪ್ಸ್ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಡೇರಿಲ್ ಮಿಚೆಲ್ ಅಮೋಘ ಇನಿಂಗ್ಸ್ ಕಟ್ಟಿದರು. ಇವರು ಕೇವಲ 3 ಬೌಂಡರಿ ನೆರವಿನಿಂದ 63 ರನ್ ಬಾರಿಸಿ ಮೊಹಮ್ಮದ್ ಶಮಿ ಅವರಿಗೆ ಔಟ್ ಆದರು.
ಕೆಳ ಕ್ರಮಾಂಕದಲ್ಲಿ ಮಿಚೆಲ್ ಬ್ರಾಸ್‌ವೆಲ್ ಅಜೇಯ 53 ರನ್ ಬಾರಿಸಿದರು. ಇವರ ಕ್ಲಾಸಿಕ್ ಇನಿಂಗ್ಸ್‌ನಲ್ಲಿ 2 ಬೌಂಡರಿ, 1 ಸಿಕ್ಸರ್‌ಗಳು ಸೇರಿವೆ. ಅಂತಿಮವಾಗಿ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 251 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು.
ಸ್ಪಿನ್ ಬೌಲರ್‌ಗಳ ಆರ್ಭಟ
ಭಾರತದ ಪರ ವೇಗಿಗಳಾದ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ಕೊಂಚ ದುಬಾರಿ ಆದರು. ಶಮಿ 8ರ ಸರಾಸರಿಯಲ್ಲಿ ರನ್ ನೀಡಿದರೆ, ಪಾಂಡ್ಯ ಪ್ರತಿ ಓವರ್‌ಗೆ 10 ರನ್ ನೀಡಿದರು. ಆದರೆ ಸ್ಪಿನ್ ಬೌಲರ್‌ಗಳು ಸುಲಭವಾಗಿ ರನ್‌ಗಳು ನೀಡಲೇ ಇಲ್ಲ. 38 ಓವರ್ ಸ್ಪಿನ್ ಬೌಲಿಂಗ್ ನಡೆಸಿದ ಭಾರತ 193 ರನ್ ನೀಡಿದರು. ವರುಣ್ ಚಕ್ರವರ್ತಿ ಹಾಗೂ ಕುಲ್‌ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. ಜಡಜೇ 1 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications