ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಇಂದು ತಂಡ ಪ್ರಕಟಿಸುವ ಸಾಧ್ಯತೆ: ಪಡಿಕ್ಕಲ್‌ಗೆ ಸಿಗುತ್ತಾ ಸ್ಥಾನ?
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಏಕದಿನ ಹಾಗೂ ಟಿ20 ಸರಣಿಗೆ ಶನಿವಾರ (ಜ.3 ರಂದು) ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಎಲ್ಲರ ಚಿತ್ತ ಬಿಸಿಸಿಐ ಆಯ್ಕೆ ಸಮಿತಿಯ ಮೇಲೆ ನೆಟ್ಟಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಯಾವೆಲ್ಲಾ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕುತ್ತದೆ ಎಂಬುವುದು ಕುತೂಹಲ ಮೂಡಿಸಿದೆ. ಈ ವೇಳೆ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಸಹ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ.
ಈಗಾಗಲೇ ಟೀಮ್ ಇಂಡಿಯಾದ ಪರ ಎರಡು ಟೆಸ್ಟ್ ಪಂದ್ಯಗಳನ್ನು ಆಡಿರುವ ದೇವದತ್ ಪಡಿಕ್ಕಲ್, ಏಕದಿನ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ. ಇವರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ ಅನುಭವ ಸಹ ಇದೆ. ಇವರು ಈಗ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಸೇರುವ ಕನಸು ಕಾಣುತ್ತಿದ್ದಾರೆ. ದೇಶೀಯ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ದೇವದತ್ ಏಕದಿನ ತಂಡದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಸದ್ಯ ಭಾರತದಲ್ಲಿ ದೇಶೀಯ ವಿಜಯ್ ಹಜಾರೆ ಏಕದಿನ ಸರಣಿಗಳು ನಡೆಯುತ್ತಿವೆ. ಈ ವೇಳೆ ಕರ್ನಾಟಕದ ಪರ ಬ್ಯಾಟ್ ಮಾಡುವ 25 ವರ್ಷದ ಯುವ ಎಡಗೈ ಆಟಗಾರ ದೇವದತ್ ಪಡಿಕ್ಕಲ್ ಅಬ್ಬರಿಸಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ 101ರ ಸರಾಸರಿಯಲ್ಲಿ 406 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಬ್ಯಾಟ್‌ನಿಂದ ಮೂರು ಶತಕಗಳು ಸಹ ಮೂಡಿ ಬಂದಿವೆ. ಸದ್ಯ ಕರ್ನಾಟಕದ ಪರ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿರುವ ದೇವದತ್ ಯಾವುದೇ ಕ್ರಮಾಂಕದಲ್ಲಾದರೂ ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಪ್ರಕಟಿಸುವಾಗ ಬಿಸಿಸಿಐ ಆಯ್ಕೆ ಸಮಿತಿ ಚಿತ್ತ ಈ ಪ್ಲೇಯರ್ ಮೇಲೂ ಹೋಗುವ ಸಾಧ್ಯತೆ ಇದೆ. ಇವರು ಮಧ್ಯಮ ಕ್ರಮಾಂಕದಲ್ಲೂ ಬ್ಯಾಟ್ ಮಾಡುವ ಕ್ಷಮತೆ ಹೊಂದಿದ್ದಾರೆ. ಈ ಮೂಲಕ ಇವರು 2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲಿ ಸ್ಥಾನವನ್ನು ಪಡೆಯುವ ಮಹದಾಸೆಯನ್ನು ಹೊಂದಿದ್ದಾರೆ.
8 ನಿಮಿಷದಲ್ಲಿ ಟಿಕೆಟ್ ಸೋಲ್ಡ್
ಕಿವೀಸ್ ವಿರುದ್ಧದ ಬಹು ನಿರೀಕ್ಷಿತ ಸರಣಿ ಜನವರಿ 11 ರಿಂದ ಆರಂಭವಾಗಲಿದೆ. ಈ ಸರಣಿ ಏಕದಿನ ಸರಣಿಯಿಂದ ಆರಂಭವಾಗಲಿದೆ. ಬಳಿಕ ಟಿ20 ಪಂದ್ಯಗಳು ನಡೆಯಲಿವೆ. ದೇಶೀಯ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಲ್ಯೂ ಜೆರ್ಸಿಯಲ್ಲಿ ಅಂಗಳ ಪ್ರವೇಶಿಸಲಿದ್ದಾರೆ. ಈಗಾಗಲೇ ಟಿಕೆಟ್ ಮಾರಾಟ ಸಹ ನಡೆದಿದೆ. ಆನ್ ಲೈನ್ ಟಿಕೆಟ್‌ಗಳು ಮಾರಟ ಆರಂಭಿಸಿದ ಕೇವಲ ಎಂಟು ನಿಮಿಷದಲ್ಲಿ ಸೋಲ್ಡ್ ಆಗಿವೆ. ಆದರೆ ಇನ್ನು ಆಫ್‌ಲೈನ್ ಟಿಕೆಟ್‌ಗಳ ಮಾರಾಟ ನಡೆಯಬೇಕಿದೆ. ಈ ಸರಣಿಗೆ ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್ ಮೊಹಮ್ಮದ್ ಶಮಿ ಸಹ ಕಂ ಬ್ಯಾಕ್ ಮಾಡುವ ಆಸೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications