Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಸಂಗೀತ ಕಾರ್ಯಕ್ರಮ: ಖಚಿತಪಡಿಸಿದ ಬಿಸಿಸಿಐ

ಈ ಬಾರಿಯ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಂದು ಆರಂಭವಾಗಿತ್ತು. ಆದರೆ ಯಾವುದೇ ಮನರಂಜನಾ ಕಾರ್ಯಕ್ರಮಗಳು ಇಲ್ಲದೆ ಸರಳವಾಗಿ ಈ ಪಂದ್ಯ ನಡೆದಿತ್ತು. ಆದರೆ ಉದ್ಘಾಟನಾ ಪಂದ್ಯ ತಾಣವಾದ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು ಈ ಪಂದ್ಯಕ್ಕೂ ಮುನ್ನ ಅದ್ದೂರಿ ಮನರಂಜನಾ ಕಾರ್ಯಕ್ರಮವನ್ನು ಬಿಸಿಸಿಐ ಹಮ್ಮಿಕೊಂಡಿದೆ. ಈ ವಿಚಾರವನ್ನು ಬಿಸಿಸಿಐ ಅಧಿಕೃತವಾಗಿ 'ಎಕ್‌'ನಲ್ಲಿ ಹಂಚಿಕೊಂಡಿದೆ.

ಈ ಮನರಂಜನಾ ಕಾರ್ಯಕ್ರಮದ ಬಗ್ಗೆ ಬಿಸಿಸಿಐ ಎಕ್ಸ್‌ನಲ್ಲಿ ಮೂರು ಪೋಸ್ಟ್‌ಗಳನ್ನು ಹಂಚಿಕೊಂಡಿದೆ. ಭಾರತದ ಮೂವರು ಅಗ್ರ ಸಂಗೀತಗಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅಭಿಮಾನಿಗಳ ಮನರಂಜಿಸಲಿದ್ದಾರೆ ಎನ್ನುವುದನ್ನು ಬಿಸಿಸಿಐ ಖಚಿತಪಡಿಸಿದೆ. ಅಕ್ಟೋಬರ್ 14 ಶನಿವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಈ ಕಾರ್ಯಕ್ರಮಗಳು ನಡೆಯಲಿದೆ.

India vs Pakistan: BCCI confirms Musical Performance Before India vs Pakistan match

ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕಳೆದ ವಾರ ಇಂಗ್ಲೆಂಡ್ vs ನ್ಯೂಜಿಲೆಂಡ್ ಆರಂಭಿಕ ಪಂದ್ಯದ ಸಂದರ್ಭದಲ್ಲಿ ಪ್ಕೇಕ್ಷಕರು ತುಂಬದೆ ಖಾಲಿ ಸ್ಟ್ಯಾಂಡ್‌ಗಳು ಕಾಣಿಸುತ್ತಿತ್ತು. ಆದರೆ ಅದೇ ಕ್ರೀಡಾಂಗಣ ಭಾರತ-ಪಾಕಿಸ್ತಾನ ಪಂದ್ಯ ನಡೆಯುವಾಗ ಅದರ ಸಂಪೂರ್ಣ ಸಾಮರ್ಥ್ಯ 1,32,000 ಸೀಟುಗಳು ಕೂಡ ಭರ್ತಿಯಾಗುವುದರಲ್ಲಿ ಸಂಶಯವಿಲ್ಲ.

ಸಂಗೀತ ಕಾರ್ಯಕ್ರಮದಲ್ಲಿ ಭಗವಹಿಸುವ ದಿಗ್ಗಜರು ಯಾರು?

ಅಕ್ಟೋಬರ್ 14ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿಗೂ ಮುನ್ನ ನಡೆಯುವ ಈ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೂವರಿಗೆ ಆಹ್ವಾನಿಸಲಾಗಿದೆ. ಅರಿಜೀತ್ ಸಿಂಗ್, ಸುಖ್‌ವೀರ್ ಸಿಂಗ್ ಹಾಗೂ ಶಂಕರ್ ಮಹಾದೇವನ್ ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಮನರಂಜಿಸಲಿದ್ದಾರೆ.

ಕಾರ್ಯಕ್ರಮದ ಸಮಯ
ಪಂದ್ಯದ ಟಾಸ್ ನಡೆಯುವುದಕ್ಕೂ ಸುಮಾರು ಒಂದು ಗಂಟೆಗಳ ಮುನ್ನ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಅಂದರೆ 12:30ಕ್ಕೆ ಈ ಕಾರ್ಯಕ್ರಮ ಆರಂಭವಾಗಲಿದೆ. ಮೊದಲಿಗೆ ಅರಿಜಿತ್ ಸಿಂಗ್ ಅವರ ಸಂಗೀತದ ಜೊತೆಗೆ ಆರಂಭವಾಗಲಿದ್ದು ನಂತರ ಶಂಕರ್ ಮಹಾದೇವನ್ ಹಾಗೂ ಸುಖ್‌ವಿಂದರ್ ಸಿಂಗ್ ಕಾರ್ಯಕ್ರಮ ಆಯೋಜನೆಯಾಗಲಿದೆ. 1:30ಕ್ಕೆ ಟಾಸ್ ನಡೆಯಲಿದ್ದು 2 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.

"ಎಲ್ಲರೂ ಕಾಯುತ್ತಿರುವ ಭಾರತ vs ಪಾಕಿಸ್ತಾನ ತಂಡಕ್ಕೆ ಅದ್ಭುತ ಆರಂಭ ದೊರೆಯಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂತ್ರಮುಗ್ಧಗೊಳಿಸುವ ಸಂಗೀತದ ಮೂಲಕ ಅರಿಜಿತ್ ಸಿಂಗ್‌ಗಾಗಿ ನಿಮ್ಮ ಮನರಂಜಿಸುತ್ತಾರೆ ಎಂದು ಅಕ್ಟೋಬರ್ 14 ರಂದು ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗುವ ಪೂರ್ವ-ಪಂದ್ಯ ಪ್ರದರ್ಶನದಲ್ಲಿ ನೀವೂ ಭಾಗಿಯಾಗಿ: ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಭಾರತದ ಸಂಗೀತ ಜೋಕದ ದಂತಕೃಥೆ ಅರಿಜಿತ್ ಸಿಂಗ್ ಈ ವರ್ಷದ ಆರಂಭದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಉದ್ಘಾಟನಾ ಸಮಾರಂಭದಲ್ಲಿಯೂ ಅದ್ದೂರಿ ಮನರಂಜನೆ ನೀಡಿದ್ದರು. ಇದೀಗ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಲಿದ್ದಾರೆ.

Story first published: Friday, October 13, 2023, 13:10 [IST]
Other articles published on Oct 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+