ಬರೀ ಹೈಪ್, ಪ್ರಚಾರಕ್ಕೆ ಸೀಮಿತವಾಯಿತಾ ಭಾರತ vs ಪಾಕ್ ಕ್ರಿಕೆಟ್ ಫೈಟ್; ಗೂಗಲ್ ಹೇಳಿದ್ದೇನು?
ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಎಂದರೆ ಹೈವೋಲ್ಟೇಜ್ ಕದನ.. ಈ ಪಂದ್ಯವನ್ನು ನೋಡಲು ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ದಿನ ಕಳೆದಂತೆ ಭಾರತ-ಪಾಕ್ ಪಂದ್ಯಕ್ಕೆ ಹೈಪ್ ಸಹ ಸಿಕ್ಕಿತು. ಆದರೆ ಅಭಿಮಾನಿಗಳು ಮಾತ್ರ ಈ ಪಂದ್ಯದ ಬಗ್ಗೆ ಆಸಕ್ತಿ ತೋರುತ್ತಿಲ್ಲವೇ ಎಂಬ ಮಾಹಿತಿ ತಿಳಿದು ಬಂದಿದೆ.
ಭಾರತ ಮತ್ತು ಪಾಕ್ ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡುವುದು ನಿಲ್ಲಿಸಿ ವರ್ಷಗಳೇ ಕಳೆದಿವೆ. ಈ ಎರಡೂ ರಾಷ್ಟ್ರಗಳು ಈಗ ಬರೀ ಐಸಿಸಿ ಟೂರ್ನಿಯಲ್ಲಿ ಮಾತ್ರ ಕಾದಾಟ ನಡೆಸಲಿವೆ. ಹೀಗಾಗಿ ಈ ಪಂದ್ಯಕ್ಕೆ ಹೈವೋಲ್ಟೇಜ್ ಇರುತ್ತದೆ. ಐಸಿಸಿ ಸಹ ಈ ಪಂದ್ಯಕ್ಕೆ ದೊಡ್ಡ ಪ್ರಚಾರವನ್ನು ನೀಡುತ್ತದೆ. ದಾಖಲೆಯ ಪ್ರಮಾಣದಲ್ಲಿ ಟಿಕೆಟ್‌ಗಳು ಈ ಪಂದ್ಯಕ್ಕೆ ಮಾರಾಟವಾಗುತ್ತವೆ. ಅಷ್ಟೇ ಅಲ್ಲ ಆನ್‌ಲೈನ್‌ನಲ್ಲಿ ಟಿಕೆಟ್ ಕ್ಷಣ ಮಾತ್ರದಲ್ಲಿ ಸೋಲ್ಡ್ ಆಗುತ್ತವೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳ ಕದನ ಅಂದ್ರೆ ಹಾಗೆ, ಅಲ್ಲಿ ಜಿದ್ದು ಎದ್ದು ಕಾಣುತ್ತದೆ. ಏನೇ ಆಗಲಿ ಈ ಪಂದ್ಯ ಗೆದ್ದರೆ ಸಾಕಪ್ಪ ಎನ್ನುವ ಮನಸ್ಥಿತಿ ಎರಡೂ ದೇಶದ ಅಭಿಮಾನಿಗಳಲ್ಲಿ ಇರುತ್ತದೆ. ಇನ್ನು ಮಾಧ್ಯಮಗಳು ಸಹ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತವೆ. ಭಾರೀ ಹೈವೋಲ್ಟೇಜ್‌ನಿಂದ ಕೂಡಿರುವ ಪಂದ್ಯ ಅಂತರ್ಜಾಲದಲ್ಲೂ ಭಾರೀ ಸದ್ದು ಮಾಡುತ್ತಾ ಇರುತ್ತದೆ. ಭಾರತ, ಪಾಕ್ ನಡುವಿನ ಫೈಟ್ ಆರಂಭವಾದರೆ ಸಾಕು, ಟ್ರೆಂಡ್‌ಗೆ ಬಂದು ಬಿಡುತ್ತದೆ.
ಭಾರತ ವಿಶ್ವಕಪ್‌ನಲ್ಲಿ ತನ್ನ ಹಿಡಿತವನ್ನು ದಿನೇ ದಿನೇ ಬಲ ಪಡಿಸಿಕೊಳ್ಳುತ್ತಾ ಸಾಗಿದೆ. ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಎಂಟು ಬಾರಿ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿದೆ. ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಸೋತಿದ್ದು ಬಿಟ್ಟರೆ, ಎಲ್ಲ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಆರ್ಭಟ ನಡೆಸಿದೆ. ಆದರೆ, ದಿನಗಳು ಕಳೆದಂತೆ ಹೈವೋಲ್ಟೇಜ್ ಕಿಕ್ ಅಷ್ಟಾಗಿ ಸಿಗುತ್ತಿಲ್ಲ ಎಂಬುದು ಗೂಗಲ್ ಹೊರಡಿಸಿರುವ ಅಂಕಿ ಅಂಶಗಳ ಪ್ರಕಾರ ಹೊರ ಬಂದಿದೆ.
ದಶಕಗಳಿಂದಲೂ ಭಾರತ, ಪಾಕ್ ಅಂದರೆ ಬ್ಯಾಟಿಂಗ್ ವಸರ್ಸ್ ಬೌಲಿಂಗ್ ಎಂದೇ ಖ್ಯಾತಿಯಾಗಿತ್ತು. ಆದರೆ, ವರ್ಷಗಳು ಕಳೆದಂತೆ ಇದರ ಸ್ವರೂಪ ಬದಲಾಗಿದೆ. ಮೊದಲು ಟೀಮ್ ಇಂಡಿಯಾದಲ್ಲಿ ಸ್ಟಾರ್ ಬ್ಯಾಟರ್‌ಗಳ ದಂಡೇ ಇತ್ತು. ಆಗ, ಪಾಕ್ ತಂಡದಲ್ಲಿ ಸ್ಟಾರ್ ಬೌಲರ್‌ಗಳ ದಂಡೇ ಇತ್ತು. ಆ ಫೈಟ್ ನೋಡಲು ಎಲ್ಲರೂ ಎದುರು ನೋಡುತ್ತಿದ್ದರು. ಈಗ ಕಾಲ ಬದಲಾಗಿದೆ. ಪಾಕ್ ತಂಡದಲ್ಲಿ ಸ್ಟಾರ್ ಬ್ಯಾಟರ್‌ಗಳು ಇದ್ದಾರೆ. ಟೀಮ್ ಇಂಡಿಯಾದಲ್ಲಿ ಬ್ಯಾಟರ್‌ಗಳು ಅಷ್ಟೇ ವಿಶ್ವ ದರ್ಜೆಯವರಲ್ಲ, ಬೌಲರ್‌ಗಳು ಸಹ ವಿಶ್ವದರ್ಜೆಯವರಿದ್ದಾರೆ. ಹೀಗಾಗಿ ಈ ಪಂದ್ಯ ಏಕಪಕ್ಷೀಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

2023 ರ ವರ್ಷವು ಕೊನೆಗೊಳ್ಳಲಿದೆ ಮತ್ತು ಈ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ಅನೇಕ ದೊಡ್ಡ ಪಂದ್ಯಾವಳಿಗಳನ್ನು ಆಡಲಾಗಿದೆ. ಈ ವರ್ಷದ ಗೂಗಲ್ ಟ್ರೆಂಡ್ ಬಗ್ಗೆ ಅಂದರೆ 2023 ರಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಬಗ್ಗೆ ಗೂಗಲ್ ಮಾಹಿತಿಯನ್ನು ನೀಡಿದೆ. ವಿವಿಧ ವಿಭಾಗಗಳಲ್ಲಿ ವಿವಿಧ ವಿಷಯಗಳ ಹುಡುಕಾಟದ ಬಗ್ಗೆ ಗೂಗಲ್ ತಿಳಿಸಿದೆ. ಈ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ ಪಂದ್ಯ ಹೆಸರು ಸಹ ಇಲ್ಲ.
ಹೆಚ್ಚು ಹುಡುಕಿದ ಟಾಪ್ 10 ಪಂದ್ಯಗಳು
1) ಭಾರತ vs ಆಸ್ಟ್ರೇಲಿಯಾ
2) ಭಾರತ vs ನ್ಯೂಜಿಲೆಂಡ್
3) ಭಾರತ vs ಶ್ರೀಲಂಕಾ
4) ಭಾರತ vs ಇಂಗ್ಲೆಂಡ್
5) ಭಾರತ vs ಐರ್ಲೆಂಡ್
6) ಇಂಗ್ಲೆಂಡ್ vs ಆಸ್ಟ್ರೇಲಿಯಾ
7) ಭಾರತ vs ಅಫ್ಘಾನಿಸ್ತಾನ
8) ಭಾರತ vs ಬಾಂಗ್ಲಾದೇಶ
9) ಗುಜರಾತ್ ಟೈಟಾನ್ಸ್ vs ಚೆನ್ನೈ ಸೂಪರ್ ಕಿಂಗ್ಸ್
10) ಪಾಕಿಸ್ತಾನ vs ನ್ಯೂಜಿಲೆಂಡ್

ಹೆಚ್ಚು ಹುಡುಕಲ್ಪಟ್ಟ ಕ್ರೀಡೆ
1) ಇಂಡಿಯನ್ ಪ್ರೀಮಿಯರ್ ಲೀಗ್
2) ಕ್ರಿಕೆಟ್ ವಿಶ್ವಕಪ್
3) ಏಷ್ಯಾ ಕಪ್
4) ಮಹಿಳಾ ಪ್ರೀಮಿಯರ್ ಲೀಗ್
5) ಏಷ್ಯನ್ ಗೇಮ್ಸ್
6) ಇಂಡಿಯನ್ ಸೂಪರ್ ಲೀಗ್
7) ಪಾಕಿಸ್ತಾನ್ ಸೂಪರ್ ಲೀಗ್
8) ಆಶಸ್
9) ಮಹಿಳಾ ಕ್ರಿಕೆಟ್ ವಿಶ್ವಕಪ್
10) SA20
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications