ಏಷ್ಯಾಕಪ್ ಟೂರ್ನಿಯಲ್ಲಿ ಬಹುನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿ ನೀರಸವಾಗಿ ಅಂತ್ಯವಾಗಿದೆ. ಮಳೆ ಅಡ್ಡಿಯುಂಟು ಮಾಡಿರುವ ಕಾರಣದಿಂದಾಗಿ ಫಲಿತಾಂಶವಿಲ್ಲದೆ ಪಂದ್ಯ ಅಂತ್ಯಕಂಡಿದೆ. ಆದರೆ ಭಾರತ ತಂಡದ ಬ್ಯಾಟಿಂಗ್ ಮುಕ್ತಾಯವಾದ ಬಳಿಕ ಮಳೆ ಸುರಿದ ಕಾರಣದಿಂದಾಗಿ ಭಾರತ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿತ್ತು. ಹೀಗಾಗಿ ಭಾರತ ತಂಡದ ಬ್ಯಾಟಿಂಗ್ ವಿಭಾಗ ಪರೀಕ್ಷೆಗೆ ಒಳಪಟ್ಟಿತ್ತು.
ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬ್ಯಾಟಿಂಗ್ ಸಂದರ್ಭದಲ್ಲಿ ಔಟಾಗಿರುವ ರೀತಿಗೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಿಡಿಕಾರಿದ್ದಾರೆ. ವಿರಾಟ್ ಕೊಹ್ಲಿ ಬಾರಿಸಿರುವ ಹೊಡೆತ ಏನೂ ಅಲ್ಲದ ಹೊಡೆತ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಗೌತಮ್ ಗಂಭೀರ್.

ಪಾಕಿಸ್ಥಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 7 ಎಸೆತಗಳನ್ನು ಎದುರಿಸಿದ್ದು 4 ರನ್‌ಗಳನ್ನು ಬಾರಿಸಿದ ಬಳಿಕ ಔಟಾದರು. ಶಾಹೀನ್ ಶಾ ಎಸೆತವನ್ನು ಕೆಣಕಿದ ಕೊಹ್ಲಿ ಬ್ಯಾಡ್‌ಗೆ ಎಡ್ಜ್ ಆಗಿ ವಿಕೆಟ್‌ಗೆ ಬಡಿದಿತ್ತು. ಈ ಮೂಲಕ ಕೊಹ್ಲಿ ಇನ್ನಿಂಗ್ಸ್ ಅಂತ್ಯವಾಗಿತ್ತು. ಅಲ್ಲದೆ ಭಾರತ ಆರಂಭಿಕ ಕುಸಿತಕ್ಕೆ ಕಾರಣವಾದರು. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಲ್ಪ ಮೊತ್ತಕ್ಕೆ ಔಟಾದ ಬಳಿಕ ಶ್ರೇಯಸ್ ಐಯ್ಯರ್ ಹಾಗೂ ಶುಬ್ಮನ್ ಗಿಲ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ ನಂತರ ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಭಾರತದ ಉತ್ತಮ ಮೊತ್ತಕ್ಕೆ ಕಾರಣವಾದರು.
"ಅದಿ ಏನೂ ಅಲ್ಲದ ಹೊಡೆತ. ಮುಂದೆ ಬಾರಿಸುವುದೂ ಅಲ್ಲ, ಹಿಂದೆ ತಳ್ಳುವುದೂ ಅಗಿರಲಿಲ್ಲ. ಶಾಹೀನ್ ಅಫ್ರಿದಿಯಂಥಾ ಬೌಲರ್ ಇರುವಾಗ ನಿಮಗೆ ಬರುವುದು ಅಂಥಾ ಎಸೆತಗಳೇ. ಆದರೆ ಅದಕ್ಕೆ ಮುಂದೆ ಹೋಗಬೇಕಾ ಅಂತಾ ಹಿಂದೆ ಆಟಬೇಕಾ ಎನ್ನುವುದು ನಿಮಗೆ ತಿಳಿಯುವುದಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್ ವೀಕ್ಷಕ ವಿವರಣೆಯ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಕರ್ ಯೂನಿಸ್ ಮಾತನಾಡಿದ್ದು ಕೋಹ್ಲಿ "ಈ ಆ ಎಸೆತವನ್ನು ದುರದೃಷ್ಟವಶಾತ್ ಮುಟ್ಟಿಸಿದರು. ಅದು ಒಳಭಾಗಕ್ಕೆ ಎಡ್ಜ್‌ಆಯಿತು. ಅಲ್ಲದೆ ಅದು ಸ್ವಲ್ಪ ಕೆಳಕ್ಕೂ ಬರುತ್ತಿತ್ತು. ಆದರೆ ಅದರ ಶ್ರೇಯಸ್ಸು ಶಾಹೀನ್ ಶಾ ಅಫ್ರಿದಿಗೆ ಸಲ್ಲಬೇಕು. ಯಾಕೆಂದರೆ ಅಲ್ಲಿ ಲೆಂತ್‌ಅನ್ನು ಆತ ಬದಲಾಯಿಸಿದ್ದರು" ಎಂದಿದ್ದಾರೆ ವಾಕರ್ ಯೂನಿಸ್.
ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಬ್ಬರು ಕೂಡ ಶಾಹೀನ್ ಶಾ ಅಫ್ರಿದಿ ಎಸೆತಕ್ಕೆ ಬಲಿಯಾಗಿದ್ದಾರೆ. ಮೊದಲಿಗೆ 22 ಎಸೆತಗಳಲ್ಲಿ 11 ರನ್‌ಳನ್ನು ಗಳಿಸಿದ್ದ ರೋಹಿತ್ ಶರ್ಮಾ ಬೌಲ್ಡ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ನಂತರ ವಿರಾಟ್ ಕೊಹ್ಲಿ ಎಡ್ಜ್ ಆಗಿ ಬೌಲ್ಡ್ ಆಗುವ ಮೂಲಕ ಔಟಾದರು. ಇನ್ನು 87 ರನ್‌ಗಳಿಸಿದ್ದ ಹಾರ್ದಿಕ್ ಪಾಂಡ್ಯ ಕೂಡ ಶಾಹೀನ್ ಶಾ ಅಫ್ರಿದಿಗೆ ಬಲಿಯಾಗಿದ್ದು ನಂತರ ರವೀಂದ್ರ ಜಡೇಜಾ ಅವರನ್ನು ಕೂಡ ಪಾಕಿಸ್ತಾನದ ಈ ವೇಗಿಯೇ ಬಲಿ ಪಡೆದರು.