Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

India Vs Pakistan: ಟೀಮ್ ಇಂಡಿಯಾಗೆ ತಲೆನೋವಾದ ಇಬ್ಬರಲ್ಲಿ ಒಬ್ಬರ ಆಯ್ಕೆ

2023ರ ಏಷ್ಯಾಕಪ್ ನಲ್ಲಿ ಸೂಪರ್-4 ಪಂದ್ಯಗಳು ಆರಂಭವಾಗಿವೆ. ಇದೇ ಭಾನುವಾರದಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾ ಕಾಳಗ ನಡೆಯಲಿದೆ. ಈ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದ ಆಯ್ಕೆ ನಾಯಕ ರೋಹಿತ್ ಶರ್ಮಾಗೆ ಸುಲಭದ ಮಾತಲ್ಲ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತದ ಪಾಳಯದಲ್ಲಿ ತಲೆ ನೋವು ಹೆಚ್ಚಾಗಿದೆ.

ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಅದೇ ವೇಳೆ ಕೆ.ಎಲ್. ರಾಹುಲ್ ಕೂಡ ಸಂಪೂರ್ಣ ಫಿಟ್ ಆಗಿದ್ದಾರೆ. ಹೀಗಿರುವಾಗ ಈಗ ರಾಹುಲ್ ಮತ್ತು ಇಶಾನ್ ಕಿಶನ್ ನಡುವೆ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಪ್ರಶ್ನೆ ನಿಜಕ್ಕೂ ಮ್ಯಾನೇಜ್ಮೆಂಟ್ ತಲೆ ನೋವು ಹೆಚ್ಚಾಗುವಂತೆ ಮಾಡಿದೆ.

India Vs Pakistan Match: Choice Of One Of The Two Is a Headache For Team India

ರಾಹುಲ್ ಐಪಿಎಲ್ ನಲ್ಲಿ ಆಡುವಾಗ ಗಾಯಕ್ಕೆ ತುತ್ತಾಗಿದ್ದರು. ಅಲ್ಲಿಂದ ಅವರು ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿಲ್ಲ. ಇವರ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಧಮಾಕೆದಾರ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಇಶಾನ್ ಆಡಿದ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು.

ಅಲ್ಲದೆ, ಏಷ್ಯಾಕಪ್ ಮೊದಲ ಪಂದ್ಯದಲ್ಲಿ ಇಶಾನ್ ಪಾಕ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದರು. ಈ ಮೂಲಕ ಸತತ ನಾಲ್ಕು ಅರ್ಧಶತಕ ಬಾರಿಸುವ ಮೂಲಕ ಮಿಡ್ಲ್ ಆರ್ಡರ್ ಆಡಲು ತಾವು ಸೂಕ್ತ ಎಂದು ಸಾರಿ ಹೇಳಿದ್ದರು. ಇನ್ನು ಬುಮ್ರಾ ತಂಡಕ್ಕೆ ಮರಳಿದ ಮೇಲೆ ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ನಡುವೆ ಯಾರನ್ನು ಕೈಬಿಡಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಕೆಎಲ್ ರಾಹುಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಶ್ರೀಲಂಕಾದಲ್ಲಿ ಟೀಂ ಇಂಡಿಯಾವನ್ನು ಸೇರಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ತಂಡದೊಂದಿಗೆ ಸೇರಿಕೊಂಡು ಅಭ್ಯಾಸ ನಡೆಸಿದರು. ಅವರ ಸ್ಥಾನದಲ್ಲಿ ಆಡಿದ ಇಶಾನ್ ಕಿಶನ್ ಪಾಕಿಸ್ತಾನ ವಿರುದ್ಧ 82 ರನ್ ಗಳ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಿದ್ದರು.

ಅವರು ಏಕದಿನ ಪಂದ್ಯಗಳಲ್ಲಿ ಸತತ ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾಯಕ ರೋಹಿತ್ ಶರ್ಮಾಗೆ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಸುಲಭವಲ್ಲ. ಇದಲ್ಲದೇ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಜಸ್ಪ್ರೀತ್ ಬುಮ್ರಾ ಕೂಡ ತಂಡವನ್ನು ಸೇರಿಕೊಂಡಿದ್ದಾರೆ.

ಈಗ ಬುಮ್ರಾ ವಾಪಸಾದರೆ ಶಮಿ ಅಥವಾ ಶಾರ್ದೂಲ್ ರಲ್ಲಿ ಒಬ್ಬರು ತಂಡದಿಂದ ಹೊರ ಹೋಗಬೇಕಾಗುತ್ತದೆ. 2023 ರ ಏಷ್ಯಾ ಕಪ್ ಲೀಗ್ ಹಂತದಲ್ಲಿ, ನಾಯಕ ರೋಹಿತ್ ಅವರು ಬುಮ್ರಾ ಮತ್ತು ಸಿರಾಜ್ ಜೊತೆಗೆ ಆಲ್ ರೌಂಡರ್ ರೂಪದಲ್ಲಿ ಶಾರ್ದೂಲ್ ಠಾಕೂರ್ ಕಾಣಿಸಿಕೊಂಡಿದ್ದರು.

ಒಂದು ವೇಳೆ ಈ ಕಾಂಬಿನೇಷನಿಗೆ ಟೀಮ್ ಇಂಡಿಯಾ ಮಣೆ ಹಾಕಿದ್ದ ಆದಲ್ಲಿ ಮೊಹಮ್ಮದ್ ಶಮಿ ಬೆಂಚ್ ಕಾಯುವುದು ಫಿಕ್ಸ್. ಹೀಗಿರುವಾಗ ರೋಹಿತ್ ಈ ಬಾರಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Story first published: Saturday, September 9, 2023, 10:03 [IST]
Other articles published on Sep 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+