For Quick Alerts
ALLOW NOTIFICATIONS  
For Daily Alerts
 

India vs Pakistan Match: ದಾಖಲೆ ಹಾಗೂ ಮೈಲುಗಲ್ಲುಗಳ ಮೇಲೆ ಕಣ್ಣಿಟ್ಟಿದ್ದಾರೆ ಈ ಆಟಗಾರರು

India vs Pakistan Match: ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಇನ್ನಿಲ್ಲದಂತೆ ಕಾಯುತ್ತಿದ್ದು ಕಡೆಗೂ ಆ ಕ್ಷಣ ಬಂದಿದೆ. ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯಲಿದ್ದು ತೀವ್ರ ಪೈಪೋಟಿ ನಡೆಯುವ ನಿರೀಕ್ಷೆಯಿದೆ.

ಇನ್ನು ಇತ್ತೀಚೆಗಷ್ಟೇ ಭಾರತ ಏಷ್ಯಾಕಪ್‌ನಲ್ಲಿ ಎರಡು ಬಾರಿ ಪಾಕಿಸ್ತಾನ ತಂಡವನ್ನು ಎದುರಿಸಿದ್ದು ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದರೆ ಎರಡನೇ ಪಂದ್ಯದಲ್ಲಿ ಭಾರತ ಅಮೋಘ ಗೆಲುವು ಸಾಧಿಸಿತ್ತು. ಅಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಈವರೆಗೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಪಾಕಿಸ್ತಾನ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ತವಕಿಸುತ್ತಿದೆ. ಇನ್ನು ಭಾರತ ತವರಿನಲ್ಲಿ ನಡೆಯುತ್ತಿರುವ ಈ ಬಾರಿಯ ವಿಶ್ವಕಪ್‌ನಲ್ಲಿ ನಿರೀಕ್ಷೆಯಂತೆಯೇ ಗೆಲುವು ಸಾಧಿಸ ಬೇಕಿದ್ದರೆ ಪಾಕಿಸ್ತಾನದ ವಿರುದ್ಧದ ಈ ಪಂದ್ಯದ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಲು ಮತ್ತಷ್ಟು ಸಹಕಾರಿಯಾಗಲಿದೆ.

World Cup, India vs Pakistan: players eye on Records and milestones

ಇನ್ನು ಇಂದು ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳ ಕೆಲ ಆಟಗಾರು ದಾಖಲೆಗಳನ್ನು ನಿರ್ಮಿಸುವ ಸನಿಹದಲ್ಲಿದ್ದಾರೆ. ಅಂಥಾ ದಾಖಲೆಗಳು ಹಾಗೂ ಆಟಗಾರರ ಮಾಹಿತಿ ಇಲ್ಲಿದೆ. ಮುಂದೆ ಓದಿ..

1. ಮೊಹಮ್ಮದ್ ರಿಜ್ವಾನ್

ಅದ್ಭುತ ಫಾರ್ಮ್‌ನಲ್ಲಿರುವ ಪಾಕಿಸ್ತಾನದ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಪಾಕಿಸ್ತಾನದ ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನಿಡಿ ಅಬ್ಬರಿಸಿದ್ದರು. ಶ್ರೀಲಂಕಾ ವಿರುದ್ಧ ಮ್ಯಾಚ್ ವಿನ್ನಿಂಗ್ ಶತಕ ಕೂಡ ಸಿಡಿಸಿದ್ದರು. ಇದೀಗ ಪಾಕಿಸ್ತಾನದ ಪರವಾಗಿ 2000 ರನ್‌ಗಳ ಗಡಿಯನ್ನು ವೇಗವಾಗಿ ದಾಟಿದ ವಿಕೆಟ್ ಕೀಪರ್ ಎಂಬ ದಾಖಲೆ ಬರೆಯಲು ಅವರಿಗೆ 108 ರನ್‌ಗಳ ಅಗತ್ಯವಿದೆ.

2. ವಿರಾಟ್ ಕೊಹ್ಲಿ

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ ಅದ್ಭುತ ಲಯದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 26,000 ರನ್‌ಗಳ ಗಡಿಯನ್ನು ದಾಟಿದ ಬ್ಯಾಟರ್ ಎಂಬ ದಾಖಲೆ ಬರೆಯುವ ಅವಕಾಶ ವಿರಾಟ್ ಕೊಹ್ಲಿ ಮುಂದಿದೆ. ಅದಕ್ಕಾಗಿ ಅವರಿಗೆ 93 ರನ್‌ಗಳ ಅಗತ್ಯವಿದೆ.

3. ಫಕರ್ ಜಮಾನ್
ಫಖರ್ ಜಮಾನ್ ಇಂದಿನ ಭಾರತ ಮತ್ತು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡರೆ ಏಕದಿನ ಕ್ರಿಕೆಟ್‌ನಲ್ಲಿ 5000 ರನ್‌ಗಳನ್ನು ತಲುಪುವ ಅವಕಾಶವಿದೆ. ಆದರೆ ಅದು ಸಾಧ್ಯವಾಗಬೇಕಿದ್ದರೆ 91 ರನ್‌ಗಳ ಅಗತ್ಯವಿದೆ.

4. ಇಶಾನ್ ಕಿಶನ್
ಭಾರತದ ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್‌ಗೆ ಏಕದಿನದಲ್ಲಿ 1000 ರನ್‌ಗಳನ್ನು ದಾಟಲು ಇನ್ನು ಒಂದು ಅರ್ಧಶತಕ (67 ರನ್) ಅಗತ್ಯವಿದೆ.

5. ಹಸನ್ ಅಲಿ
ಪಾಕಿಸ್ತಾನದ ವೇಗಿ ಹಸನ್ ಅಲಿ 100 ವಿಕೆಟ್‌ಗೆ ಮೂರು ವಿಕೆಟ್‌ಗಳ ಅಂತರದಲ್ಲಿದ್ದಾರೆ.

6. ಶುಬ್ಮನ್ ಗಿಲ್
ಈ ಬಾರಿಯ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಆಡುವ ಬಳಗದಿಂದ ಹೊರಗುಳಿದಿದ್ದ ಶುಬ್ಮನ್ ಗಿಲ್ ಈ ಪಂದ್ಯದಲ್ಲಿ ಅವಕಾಶ ಪಡೆದುಕೊಂಡಲ್ಲಿ ಏಕದಿನ ಮಾದರಿಯಲ್ಲಿ 2000 ರನ್‌ಗಳ ಮೈಲಿಗಲ್ಲು ದಾಟುವ ಅವಕಾಶವಿದೆ. ಅದಕ್ಕಾಗಿ ಅವರು ಈ ಪಂದ್ಯದಲ್ಲಿ 83 ರನ್‌ಗಳನ್ನು ಗಳಿಸಬೇಕಿದೆ.

Story first published: Saturday, October 14, 2023, 13:13 [IST]
Other articles published on Oct 14, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+