ವಿರಾಟ್ ಬ್ಯಾಟಿಂಗ್ ವರ್ಣಿಸಲು ಪದಗಳಿಲ್ಲ ಎಂದ ರೋಹಿತ್: ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ಎಂದ ಭಾರತದ ನಾಯಕ

ವಿಶ್ವಕಪ್‌ನಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಮುಖಾಮುಖಿ ನಿರೀಕ್ಷೆಯಂತಯೇ ಅತ್ಯಂತ ರೋಚಕವಾಗಿ ಅಂತ್ಯವಾಗಿದ್ದು ಭಾರತ ಅಮೋಘ ಗೆಲುವು ಸಾಧಿಸಿದೆ. ವಿರಾಟ್ ಕೊಹ್ಲಿ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಪಾಕಿಸ್ತಾನ ನೀಡಿದ್ದ ಸವಾಲಿನ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲಿಯೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಸಮಯೋಚಿತ ಆಟದ ಕಾರಣದಿಂದಾಗಿ ಟೀಮ್ ಇಂಡಿಯಾ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟದ ಬಗ್ಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಕೊಂಡಾಡಿದ್ದಾರೆ ರೋಹಿತ್.

ನನ್ನಲ್ಲಿ ಯಾವುದೇ ಪದಗಳಿಲ್ಲ
ಪಾಕಿಸ್ತಾನದ ವಿರುದ್ಧ ರೋಚಕ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ರೋಹಿತ್ ಶರ್ಮಾ ಈ ಗೆಲುವನ್ನು ವರ್ಣಿಸಲು ನನ್ನಲ್ಲಿ ಯಾವುದೇ ಪದಗಳಿಲ್ಲ ಎಂದಿದ್ದಾರೆ. "ಈ ಗೆಲುವನ್ನು ಬಣ್ಣಿಸಲು ನನ್ನಲ್ಲಿ ಶಬ್ದಗಳಿಲ್ಲ. ಇಂಥಾ ಪಂದ್ಯಗಳಲ್ಲಿ ಇಂಥಾ ವಿಶೇಷವಾದದನ್ನು ನಿರೀಕ್ಷಿಸಬೇಕಾಗುತ್ತದೆ. ಸಾಧ್ಯವಾದಷ್ಟು ಪಂದ್ಯವನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ನಾವು ಬಯಸಿದ್ದೆವು. ಆ ನಿರ್ಣಾಯಕ ಜೊತೆಯಾಟವೇ ನಮಗೆ ಗೆಲುವಿಗೆ ನಿರ್ಣಾಯಕವಾದ ಕ್ಷಣವಾಗಿತ್ತು" ಎಂದು ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೆಲುವು ಅಸಾಧ್ಯ ಎಂಬ ಸ್ಥಿತಿಯಲ್ಲಿದ್ದೆವು
"ಈ ಮೊತ್ತವನ್ನು ಬೆನ್ನಟ್ಟಲು ನಾವು ಕಠಿಣ ಪರಿಶ್ರಮ ಪಡಬೇಕಾಗುತ್ತದೆ ಎಂದು ಅರಿವಾಗಿತ್ತು. ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಸಾಕಷ್ಟು ಅನುಭವದ ಆಟಗಾರರಾಗಿದ್ದಾರೆ. ತಾಳ್ಮೆಯಿಂದ ಆಟವಾಡುತ್ತಾ ಪಂದ್ಯದಲ್ಲಿ ಹಿಡಿತವನ್ನು ಸಡಿಲಿಸಲು ಮುನ್ನುಗ್ಗುತ್ತಾ ಹೋದರು. ಇದು ಬಹಳ ನಿರ್ಣಾಯಕವಾಗಿತ್ತು. ಈ ಪಂದ್ಯವನ್ನು ನಾವು ಗೆಲ್ಲುವ ಸಾಧ್ಯತೆಯೇ ಇಲ್ಲ ಎಂಬಂದಿತ್ತು ಪರಿಸ್ಥಿತಿ. ಈ ಪಂದ್ಯವನ್ನು ನಾವು ಗೆದ್ದ ರೀತಿ ನಮಗೆ ಸಾಕಷ್ಟು ಸಂತಸ ಮೂಡಿಸಿದೆ.

ವಿರಾಟ್ ಕೊಹ್ಲಿಗೆ ಹ್ಯಾಟ್ಸ್‌ಆಫ್
ಇನ್ನು ಮುಂದುವರಿದು ಮಾತನಾಡಿದ ನಾಯಕ ರೋಹಿತ್ ಶರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿಗೆ ಹ್ಯಾಟ್ಸ್‌ಆಫ್ ಎಂದಿದ್ದಾರೆ. "ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿಗೆ ಹ್ಯಾಟ್ಸ್‌ಆಫ್ ಹೇಳಲೇಬೇಕು. ಭಾರತದ ಪರವಾಗಿ ಆಡುವಾಗ ವಿರಾಟ್ ಕೊಹ್ಲಿಯ ಅತ್ಯುತ್ತಮ ಇನ್ನಿಂಗ್ಸ್ ಇದಾಗಿದೆ. ಇಲ್ಲಿಗೆ ಆಗಮಿಸಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ ನಾಯಕ ರೋಹಿತ್ ಶರ್ಮಾ.

ಅಸಾಧ್ಯ ಗೆಲುವು ಸಾಧ್ಯವಾಗಿಸಿದ ಕೊಹ್ಲಿ
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯಂತ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಿತ್ತು. 31 ರನ್‌ಗಳಿಗೆ 4 ವಿಕೆಟ್‌ಗಳನ್ನು ಟೀಮ್ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿದರು. ಪರಿಸ್ಥಿತಿಗೆ ತಕ್ಕನಾಗಿ ಆಡುತ್ತಾ ಸಾಗಿದ ಈ ಜೋಡಿ ಅಂತಿಮ ಓವರ್‌ನಲ್ಲಿ ಬೇರ್ಪಟ್ಟಿತ್ತು. ಹಾರ್ದಿಕ್ ಪಾಂಡ್ಯ 40 ರನ್‌ಗಳಿಸಿ ವಿರಾಟ್ ಕೊಹ್ಲಿಗೆ ಅದ್ಭುತವಾಗಿ ಸಾಥ್ ನೀಡಿದರು. ಮತ್ತೊಂದೆಡೆ ವಿರಾಟ್ ಕೊಹ್ಲಿ ಆರಂಭದಲ್ಲಿ ಎಚ್ಚರಿಕೆಯ ಪ್ರದರ್ಶನ ನೀಡಿದರಾದರೂ ಬಳಿಕ ಅದ್ಭುತವಾಗಿ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿಕೊಂಡರು. ಅದರಲ್ಲೂ ಮಹತ್ವದ ಘಟ್ಟದಲ್ಲಿ ಪಾಕಿಸ್ತಾನದ ಪ್ರಮುಖ ಬೌಲರ್‌ಗಳನ್ನು ದಂಡಿಸಿದ ಕೊಹ್ಲಿ ಅಸಾಧ್ಯ ಗೆಲುವು ಸಾಧ್ಯವಾಗಿಸಿದರು. 53 ಎಸೆತಗಳನ್ನು ಎದುರಿಸಿದ ವಿರಾಟ್ 82 ರನ್‌ಗಳಿಸಿ ಅಜೃಯವಾಗುಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications