ICC Women's T20 World Cup: ಭಾರತ, ಪಾಕ್ ಹೈ ವೋಲ್ಟೇಜ್ ಫೈಟ್: ಅಂಕಿ ಅಂಶಗಳು ಯಾರ ಪರ? ಟಾಸ್ ಗೆದ್ದರೆ ಏನು ಮಾಡಬೇಕು?
ಯುಎಇನಲ್ಲಿ ಮಹಿಳಾ ಟಿ20 ವಿಶ್ವಕಪ್ ನಡೆಯುತ್ತಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ಎರಡನೇ ಪಂದ್ಯಕ್ಕಾಗಿ ಭಾರತ ಸನ್ನದ್ಧವಾಗಿದೆ. ಅಕ್ಟೋಬರ್ 6 ರಂದು ಹರ್ಮನ್ ಪ್ರೀತ್ ಕೌರ್ ಪಡೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಉಭಯ ತಂಡಗಳಿಗೂ ಇದು ಎರಡನೇ ಪಂದ್ಯವಾಗಿದೆ. ಈಗಾಗಲೇ ಆಡಿದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 31 ರನ್‌ಗಳಿಂದ ಮಣಿಸಿರುವ ಪಾಕ್ ಅಂಕದ ಖಾತೆ ಓಪನ್ ಮಾಡಿದೆ. ಪಾಕಿಸ್ತಾನ ತಂಡವನ್ನು ಮಣಿಸಿ ಜಯದ ಅಭಿಯಾನವನ್ನು ಆರಂಭಿಸುವ ಯೋಜನೆ ಭಾರತ ತಂಡದ್ದಾಗಿದೆ. ಮೊದಲ ಪಂದ್ಯದಲ್ಲಿ ಆದ ಮಿಸ್ಟೆಕ್‌ಗಳನ್ನು ಮೆಟ್ಟಿ ನಿಂತು ಆಡುವ ಇರಾದೆ ಭಾರತ ತಂಡದ್ದಾಗಿದೆ.

ಏನು ಹೇಳುತ್ತೆ ಅಂಕಿ ಅಂಶ?
ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡದ ನಡುವೆ ಇದುವರೆಗೆ ಒಟ್ಟು 15 ಟಿ20 ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ತಂಡ 12ರಲ್ಲಿ ಗೆದ್ದಿದ್ದು, ಪಾಕ್ 3ರಲ್ಲಿ ಜಯ ಸಾಧಿಸಿದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಭಾರತ ಪಾಕ್‌ಗಿಂತ ತುಂಬ ಮುಂದಿದೆ. ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಉಭಯ ತಂಡಗಳ ನಡುವೆ ಒಟ್ಟು 7 ಪಂದ್ಯಗಳು ನಡೆದಿದ್ದು, ಈ ಪೈಕಿ ಭಾರತ ತಂಡ 5 ಮತ್ತು ಪಾಕಿಸ್ತಾನ 2 ಪಂದ್ಯಗಳನ್ನು ಗೆದ್ದಿವೆ.
ಪಿಚ್ ಏನು ಹೇಳುತ್ತದೆ?
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕೂ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ. ಪಿಚ್ ತುಂಬಾ ನಿಧಾನವಾಗಿದ್ದು, ಇಲ್ಲಿ ರನ್‌ಗಳಿಸಲು ಬ್ಯಾಟರ್‌ಗಳು ಪರದಾಟವನ್ನು ನಡೆಸುತ್ತಿದ್ದಾರೆ. ಈ ಮೈದಾನದಲ್ಲಿ ಪ್ರಸಕ್ತ ವಿಶ್ವಕಪ್‌ನಲ್ಲಿ ಲೋ ಸ್ಕೋರಿಂಗ್ ಪಂದ್ಯಗಳು ನಡೆದಿವೆ. ಈ ಪಂದ್ಯಕ್ಕೆ ಮಳೆಯ ಭೀತಿ ಸಹ ಕಾಡುತ್ತಿದೆ. ಟಾಸ್ ಗೆದ್ದ ತಂಡ ಮೊದಲ ಬೌಲಿಂಗ್ ಮಾಡಲು ಮುಂದಾಗಬಹುದು.
ಎಲ್ಲಿ ವೀಕ್ಷಿಸಬಹುದು?
ಭಾರತ, ಪಾಕಿಸ್ತಾನ ನಡುವಣ ಮಹಿಳಾ T20 ವಿಶ್ವಕಪ್ ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ. ಅಲ್ಲದೆ ಲೈವ್ ಸ್ಟ್ರೀಮಿಂಗ್‌ನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.
ಎಷ್ಟು ಗಂಟೆಗೆ ಪಂದ್ಯ ಆರಂಭ?
ಭಾರತ ಹಾಗೂ ಪಾಕ್ ನಡುವಣ ಪಂದ್ಯ ಭಾರತೀಯ ಕಾಲ ಮಾನ ಮಧ್ಯಾಹ್ನ 3.30ಕ್ಕೆ ನಡೆಯಲಿದೆ.
ಭಾರತ ಮಹಿಳಾ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಶೋಭನಾ, ರಾಧಾ ಯಾದವ್, ಸಜನಾ ಸಜೀವನ್,
ಪಾಕಿಸ್ತಾನ ಮಹಿಳಾ ತಂಡ: ಫಾತಿಮಾ ಸನಾ (ನಾಯಕಿ), ಅಲಿಯಾ ರಿಯಾಜ್, ಡಯಾನಾ ಬೇಗ್, ಗುಲ್ ಫಿರೋಜ್, ಇರಾಮ್ ಜಾವೇದ್, ಮುನಿಬಾ ಅಲಿ, ನಶ್ರಾ ಸುಂಧು, ನಿದಾ ದಾರ್, ಒಮೈಮಾ ಸೊಹೈಲ್, ಸದಾಫ್ ಶಮಾಸ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸೈಯದಾ ಅರುಬ್ ಶಾ, ತಸ್ಮಿಯಾ ರುಬಾಬ್, ತುಬಾ ಹಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications