ಭಾರತ vs ದ. ಆಫ್ರಿಕಾ: ಟೀಮ್ ಇಂಡಿಯಾ ಟಿ20 ಸ್ಕ್ವಾಡ್‌ನಿಂದ ಕೊಹ್ಲಿ ಔಟ್!?

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಈ ಬಾರಿಯ ಐಪಿಎಲ್‌ನಲ್ಲಿಯೂ ಮುಂದುವರಿದಿದೆ. ಆರಂಭಿಕ ಹಂತದ ಒಂದೆರಡು ಪಂದ್ಯಗಳಲಲ್ಇ 40ಕ್ಕೂ ಅಧಿಕ ರನ್ ಗಳಿಸಲು ಕೊಹ್ಲಿ ಯಶಸ್ವಿಯಾಗಿದ್ದರೂ ನಂತರ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿರುವ ಕೊಹ್ಲಿ ಆರ್‌ಆರ್ ವಿರುದ್ಧದ ಪಂದ್ಯದಲಲ್ಇಯೂ ಎರಡಂಕಿ ತಲುಪಲು ವಿಫಲವಾಗಿದ್ದಾರೆ. ಹೀಗಾಗಿ ಆರ್‌ಸಿಬಿ ಮಾತ್ರವಲ್ಲ ಟೀಮ್ ಇಂಡಿಯಾ ಆಯ್ಕೆಗಾರರು ಕೂಡ ಕೊಹ್ಲಿ ಫಾರ್ಮ್ ಬಗ್ಗೆ ಕಳವಳಗೊಂಡಿರುವುದು ಸ್ಪಷ್ಟವಾಗಿದೆ.
ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಮುಂದುವರಿದಿರುವ ಕಾರಣ ಮುಂದಿನ ಟೀಮ್ ಇಂಡಿಯಾ ಟಿ20 ಸರಣಿಗೆ ವಿರಾಟ್ ಕೊಹ್ಲಿ ಆಯ್ಕೆಯಾಗುವ ಸಂಭವ ಇಲ್ಲ ಎನ್ನಲಾಗಿದೆ. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ನಿರ್ಧಸಿದೆ ಎನ್ನಲಾಗಿದ್ದು ಕೊಹ್ಲಿ ಫಾರ್ಮ್ ಗಳಿಸಲು ಈ ವಿಶ್ರಾಂತಿಯ ಅಗತ್ಯವಿದೆ ಎಂಬ ನಿರ್ಧಾರವನ್ನು ಆಯ್ಕೆ ಸಮಿತಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್‌ಸೈಡ್ ಸ್ಪೋರ್ಟ್‌ಗೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದು ಈ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ.
ಹಾಗಾದರೆ ದಕ್ಷಿಣ ಆಫ್ರಿಕಾ ವಿರುದ್ಧಧ ಟಿ20 ಸರಣಿಗೆ ಕೊಹ್ಲಿ ಆಯ್ಕೆಯಾಗುವ ಬಗ್ಗೆ ಆಯ್ಕೆ ಮಂಡಳಿ ಸದಸ್ಯರು ಹೇಳಿದ್ದೇನು?ಮುಂದೆ ಓದಿ..

ದಕ್ಷಿಣ ಆಫ್ರಿಕಾ ಪ್ರವಾಸಕ್ಕಿಲ್ಲ ಕೊಹ್ಲಿ?
ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ನಿಂದ ಹೊರಬರಲು ವಿಫಲವಾಗಿರುವ ಕಾರಣ ಕೊಹ್ಲಿಗೆ ವಿಶ್ರಾಂತಿ ನೀಡಲು ಭಾರತ ತಂಡದ ಆಯ್ಕೆ ಸಮಿತಿ ಬಯಸಿದೆ. ಭಾರತದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಹಾಗೂ ಐರ್ಲೆಂಡ್‌ನಲ್ಲಿ ನಡೆಯಲಿರುವ ಪ್ರವಾಸದಿಂದ ವಿರಾಟ್ ಕೊಹ್ಲಿ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ಮುಂದಿನ ಜುಲೈ ತಿಂಗಳಿನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸದಲ್ಲಿ ಮತ್ತೆ ಟೀಮ್ ಇಂಡಿಯಾ ಜರ್ಸಿ ತೊಡಲಿದ್ದಾರೆ.

ಆಯ್ಕೆ ಸಮಿತಿಯ ಸದಸ್ಯ ಹೇಳಿದ್ದೇನು?
ಬಿಸಿಸಿಐನ ಆಯ್ಕೆ ಸಮಿತಿ ಸದಸ್ಯರೊಬ್ಬರು ಇನ್‌ಸೈಡ್ ಸ್ಪೋರ್ಟ್‌ಗೆ ಕೊಹ್ಲಿ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಆಟಗಾರನೋರ್ವ ಕಠಿಣ ಸಂದರ್ಭವನ್ನು ಎದುರಿಸುತ್ತಿರುವುದು ಇದು ಮೊದಲಲ್ಲ. ಅದು ಬಹಳ ಸ್ವಾಭಾವಿಕ. ನಾವು ಹೇಗೂ ಯುವ ಆಟಗಾರರಿಗೆ ಅವಕಾಶವನ್ನು ನೀಡಲು ಬಯಸುತ್ತಿದ್ದೇವೆ. ಹೀಗಾಗಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಬಹುದು. ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗುತ್ತದೆ. ಅವರು ಆಡಲು ಬಯಸಿದರೆ ನಂತರ ನಾವು ಅದರ ಬಗ್ಗೆ ನಿರ್ಧರಿಸುತ್ತೇವೆ. ಆಯ್ಕೆಗೂ ಮುನ್ನ ನಾವು ಅವರೊಂದಿಗೆ ಚರ್ಚಿಸಲಿದ್ದೇವೆ" ಎಂದಿದ್ದಾರೆ.

ವಿಶ್ರಾಂತಿ ಪಡೆಯಲು ಒತ್ತಾಯ
ವಿರಾಟ್ ಕೊಹ್ಲಿ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿರುವ ಕಾರಣದಿಂದಾಗಿ ಕೊಹ್ಲಿ ವಿಶ್ರಾಂತಿಯನ್ನು ಪಡೆಯುವುದು ಸೂಕ್ತ ಎಂಬ ಒತ್ತಾಯಗಳು ಇತ್ತೀಚೆಗೆ ಕೇಳಿ ಬಂದಿದೆ. ಅದರಲಗ್ಲೂ ಕೊಹ್ಲಿಗೆ ಆಪ್ತವಾಗಿರುವ ಮಾಜಿ ಕೋಚ್ ರವಿ ಶಾಸ್ತ್ರಿ ಕೂಡ ಕೊಹ್ಲಿ ವಿಶ್ರಾಂತಿ ಪಡೆಯುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅತೊಯಾಗಿ ಆಡಿದ ಕಾರಣದಿಂದಾಗಿ ಈ ಕೆಟ್ಟ ಫಾರ್ಮ್‌ನಿಮದ ಬಳಲುತ್ತಿದ್ದಾರೆ ಎಂದಿದ್ದಾರೆ ರವಿ ಶಾಸ್ತ್ರಿ.

ದೀರ್ಘ ಕಾಲದಿಂದ ಕಳಪೆ ಫಾರ್ಮ್‌ನಲ್ಲಿ ಕೊಹ್ಲಿ
ವಿರಾಟ್ ಕೊಹ್ಲಿ 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶತಕ ಬಾರಿಸಿದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಲು ವಿಫಲವಾಗಿದ್ದಾರೆ. ಐಪಿಎಲ್‌ನಲ್ಲಿಯೂ ಈ ಆವೃತ್ತಿಯಲ್ಲಿ ಕೊಹ್ಲಿ ಸಂಪೂರ್ಣ ಮಂಕಾಗಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 128 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ. 16ರ ಸರಾಸರಿಯಲ್ಲಿ ಕೊಹ್ಲಿ ಬ್ಯಾಟಿಂಗ್ ನಡೆಸಿರುವುದು ಅವರ ಬ್ಯಾಟಿಂಗ್ ಫಾರ್ಮ್‌ಗೆ ಸಾಕಷ್ಇಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications