IND vs SA T20: 4ನೇ ಟಿ20 ಪಂದ್ಯದ ಟಾಸ್ ವಿಳಂಬ: ಮಂಜಿನ ಕಾಟ, ಗಿಲ್ ಅಲಭ್ಯ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ನಾಲ್ಕನೇ ಟಿ20 ಪಂದ್ಯ ಲಕ್ನೋದಲ್ಲಿ ನಡೆಯುತ್ತಿದೆ. ಆದರೆ 6.30ಗೆ ನಡೆಯಬೇಕಿತ್ತ ಟಾಸ್ ವಿಳಂಬವಾಗಿದೆ. ಮಂಜಿನಿಂದ ಕಾಣುವಲ್ಲಿ ಸಮಸ್ಯೆ ಆಗುತ್ತಿದ್ದರಿಂದ ಟಾಸ್ ಮಾಡಲು ವಿಳಂಬವಾಗಿದೆ. ಈ ವೇಳೆ ಟೀಮ್ ಇಂಡಿಯಾದ ಹಲವು ಆಟಗಾರರು ಮೈದಾನದಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದರು.
ನಿಗದಿತ ಸಮಯದಲ್ಲಿ ಟಾಸ್ ನಡೆಯಬೇಕಿತ್ತು. ಆದರೆ ಮಂಜಿನ ಕಾರಣದಿಂದಾಗಿ ಆರಂಭದಲ್ಲಿ 20 ನಿಮಿಷಗಳ ಕಾಲ ವಿಳಂಬಗೊಳಿಸಲಾಯಿತು. ಬಳಿಕ ಮತ್ತೆ ಪರಿಶೀಲನೆ ನಡೆಸಿದಾಗ ಮತ್ತೋಮ್ಮೆ ಅಂಪೈರ್ಗಳು ತಪಾಸಣೆಯನ್ನು 7.30ಕ್ಕೆ ನಡೆಸಲು ತೀರ್ಮಾನಿಸಲಾಯಿತು. ಮತ್ತೊಮ್ಮೆ ತಪಾಸಣೆ ರಾತ್ರಿ 9 ಕ್ಕೆ ನಡೆಯಲಿದೆ. ಇನ್ನು ಪಂದ್ಯದ ಓವರ್‌ಗಳಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಆದರೆ ಸದ್ಯದ ಪರೀಸ್ಥಿತಿಯನ್ನು ನೋಡಿದರೆ ಪಂದ್ಯ ರದ್ದುಗೊಳಿಸುವ ಸಾಧ್ಯತೆ ಇದೆ.

ಭಾರತದ ಉತ್ತರದಲ್ಲಿ ಸದ್ಯ ತುಂಬ ಚಳಿ ಇದೆ. ಈ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ತಾಪಮಾನದಲ್ಲಿ ಕುಸಿತ ಕಂಡು ಬಂದಿದೆ. ಭಾರೀ ಮಂಜಿನಿಂದಾಗಿ ಟಾಸ್ ಅನ್ನು ಮುಂದೂಡಲಾಯಿತು. ಅಂಪೈರ್ಗಳು ಈಗಾಗಲೇ ಮೂರು ಬಾರಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮುಂದಿನ ಪರಿಶೀಲನೆ ರಾತ್ರಿ 8:30 ಕ್ಕೆ ನಡೆಯಲಿದೆ.
ಗಿಲ್ ಅಲಭ್ಯ
ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆ ಇದೆ. ಇವರು ಗಾಯಗೊಂಡಿದ್ದು, ನಾಲ್ಕನೇ ಪಂದ್ಯದಿಂದ ಹೊರಗುಳಿಯಬಹುದು. ಇವರ ಬದಲಿಗೆ ಸಂಜು ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆಯಬಹುದು. ಈ ಅವಕಾಶವನ್ನು ಸಂಜು ಸ್ಯಾಮ್ಸನ್ ಎರಡೂ ಕೈಗಳಲ್ಲಿ ಬಳಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಕ್ವಿಂಟನ್ ಡಿ ಕಾಕ್ ತಮ್ಮ ಟಿ20 ವೃತ್ತಿ ಜೀವನದ 100ನೇ ಪಂದ್ಯ ಆಡಲು ಸಿದ್ಧರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications