ಭಾರತ vs ದ. ಆಫ್ರಿಕಾ ಟಿ20 ಸರಣಿ: ವಿಶ್ವದಾಖಲೆ ಮೇಲೆ ಭಾರತದ ಕಣ್ಣು: ಸರಣಿಯ ಸಂಪೂರ್ಣ ಮಾಹಿತಿ ಇಲ್ಲಿದೆ!

ಐಪಿಎಲ್ 15ನೇ ಆವೃತ್ತಿ ಅಂತ್ಯವಾಗಿದೆ. ಇದೀಗ ಭಾರತದ ಮುಂದಿನ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಭಾರತದಲ್ಲಿಯೇ ಟಿ20 ಸರಣಿಗಾಗಿ ಕಾದಾಟವನ್ನು ನಡೆಸಲಿದ್ದು ಕ್ರಿಕೆಟ್ ಪ್ರೇಮಿಗಳು ಈ ಮುಖಾಮುಖಿಗಾಗಿ ಕಾಯುತ್ತಿದ್ದಾರೆ. ಎರಡು ತಂಡಗಳು ಕೂಡ ಈಗಾಗಲೇ ಬಲಿಷ್ಠ ತಂಡಗಳನ್ನು ಕಣಕ್ಕಿಳಿಸಿದ್ದು ಸರಣಿಯ ಕುತೂಹಲ ಹೆಚ್ಚಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಭಾರತಕ್ಕೆ ಅತ್ಯಂತ ಪ್ರಮುಖವಾಗಿದೆ. ಯಾಕೆಂದರೆ ಈ ಸರಣಿಯಲ್ಲಿ ಭಾರತ ಟಿ20 ವಿಶ್ವದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಭಾರತ ಈಗ ಸತತ 12 ಟಿ20 ಪಂದ್ಯಗಳನ್ನು ಗೆದ್ದುಕೊಂಡಿದ್ದು ಸತತ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಸಾಧನೆಯನ್ನು ಸರಿಗಟ್ಟಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಈ ದಾಖಲೆಯನ್ನು ಭಾರತ ಮುರಿಯಲಿದೆ.

ಸರಣಿಯ ಆರಂಭ, ಸಮಯ ಹಾಗೂ ಸ್ಥಳ
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಈ ಟಿ20 ಸರಣಿ ಜೂನ್ 9ರಿಂದ ಆರಂಭವಾಗಲಿದೆ. ಭಾರತ ಈ ಸರಣಿಯ ಆತಿಥ್ಯವಹಿಸಿಕೊಳ್ಳುತ್ತಿದ್ದು ಐದಿ ತಾಣಗಳಲ್ಲಿ ಈ ಸರಣಿ ಆಯೋಜನೆಯಾಗಲಿದೆ. ಸಂಜೆ 7 ಗಂಟೆಗೆ ಈ ಪಂದ್ಯಗಳು ಆರಂಭವಾಗಲಿದೆ. ದೆಹಲಿ, ಕಟಕ್, ವೈಜಾಗ್, ರಾಜ್‌ಕೋಟ್ ಹಾಘೂ ಬೆಂಗಳುರಿನಲ್ಲಿ ಪಂದ್ಯಗಳು ನಡೆಯಲಿದೆ.

ನೇರಪ್ರಸಾರ ಹಾಗು ಲೈವ್‌ಸ್ಟ್ರೀಮಿಂಗ್
ಈ ಸರಣಿಯ ಪಂದ್ಯಗಳು ಸ್ಟಾರ್‌ಸ್ಪೋರ್ಟ್ಸ್ ವಾಹಿನಿಯಲ್ಲಿ ನೇರಪ್ರಸಾರವಾಗಲಿದೆ. ಸ್ಥಳೀಯ ಭಾಷೆಯಲ್ಲಿ ಕೂಡ ವೀಕ್ಷಕ ವಿವರಣೆಗಳು ಲಭ್ಯವಿರಲಿದೆ. ಹಾಟ್‌ಸ್ಟಾರ್‌ನಲ್ಲಿಯೂ ಲೈವ್‌ಸ್ಟ್ರೀಮಿಂಗ್ ಇರಲಿದೆ. ಸಂಜೆ 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದ್ದು 7 ಗಂಟೆಗೆ ಪಂದ್ಯ ಆರಂಭವಾಗಲಿದೆ.

ಪಂದ್ಯದ ವೇಳಾಪಟ್ಟಿ ಹಾಗೂ ಸ್ಥಳ
ಟಿ20I ಸರಣಿಯ ಮೊದಲ ಪಂದ್ಯ ಜೂನ್ 9 ರಂದು ನಡೆಯಲಿದ್ದು ದೆಹಲಿಯಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಸರಣಿಯ ಎರಡನೇ ಪಂದ್ಯ ಜೂನ್ 12 ಭಾನುವಾರದಂದು ನಡೆಯಲಿದ್ದು ಕಟಕ್‌ನಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ. ಜೂನ್ 14 ಮಂಗಳವಾರ ಈ ಸರಣಿಯ ಮೂರನೇ ಪಂದ್ಯ ವೈಜಾಗ್‌ನಲ್ಲಿ ನಡೆಯಲಿದೆ. ಜೂನ್ 17 ಶುಕ್ರವಾರ 4ನೇ ಪಂದ್ಯ ರಾಜ್‌ಕೋಟ್‌ನಲ್ಲಿ ಆಯೋಜನೆಯಾಗಲಿದೆ. ಇನ್ನು ಐದನೇ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಿಕೊಳ್ಳಲಿದ್ದು ಜೂನ್ 19ರಂದು ಈ ಪಂದ್ಯ ಆಯೋಜನೆಯಾಗಲಿದೆ.

ಸ್ಕ್ವಾಟ್‌ಗಳು ಹೀಗಿದೆ
ಭಾರತ: ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ/ ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ಟಬ್ರೈಜ್ ಶಂಸಿ, ಟ್ರಿಸ್ಟನ್ ಸ್ಟಬ್ಸ್, ವ್ಯಾನ್ ಡೆರ್ ಡಸ್ಸೆನ್, ಮಾರ್ಕೊ ಜಾನ್ಸೆನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications