ಭಾರತ vs ದಕ್ಷಿಣ ಆಫ್ರಿಕಾ: ಮೊದಲನೇ ಟಿ20ಗೆ ಬದಲು ಮಳೆಯದ್ದೇ ಆಟ!

ಧರ್ಮಶಾಲಾ, ಸೆಪ್ಟೆಂಬರ್ 15: ಭಾರತಕ್ಕೆ ಪ್ರವಾಸ ಕೈಗೊಂಡಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, ಭಾನುವಾರ (ಸೆಪ್ಟೆಂಬರ್ 15) ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಆತಿಥೇಯ ಭಾರತದ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡುವುದರಲ್ಲಿತ್ತು. ಆದರೆ ನಿಲ್ಲದ ಮಳೆಯ ಕಾರಣ ಟಾಸ್ ಕೂಡ ನಡೆಯದೆ ಪಂದ್ಯ ರದ್ದಾಗಿದೆ.
ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಬಳಗ ಪಾಲ್ಗೊಳ್ಳುತ್ತಿರುವ ಎರಡನೇ ಸರಣಿಯಿದು. ಈ ಮೊದಲು ವೆಸ್ಟ್ ಇಂಡೀಸ್‌ಗೆ ಪ್ರವಾಸ ಗೈಗೊಂಡಿದ್ದ ಭಾರತ ತಂಡ ಟಿ20, ಏಕದಿನ, ಟೆಸ್ಟ್ ಸರಣಿಗಳನ್ನು ಜಯಿಸಿತ್ತು. ಭಾನುವಾರ ನಿಲ್ಲದೆ ಮಳೆ ಸುರಿದಿದ್ದರಿಂದ ಇತ್ತಂಡಗಳ ಮೊದಲ ಟಿ20 ಪಂದ್ಯ ರದ್ದಾಯಿತು. ದ್ವಿತೀಯ ಪಂದ್ಯ ಸೆಪ್ಟೆಂಬರ್ 18ರಂದು ನಡೆಯಲಿದೆ.
ಭಾರತ vs ದಕ್ಷಿಣ ಆಫ್ರಿಕಾ, 1ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್
ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್/ರಾಹುಲ್ ಚಹರ್, ದೀಪಕ್ ಚಹರ್, ನವದೀಪ್ ಸೈನಿ.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ಸಿ), ರೀಜಾ ಹೆಂಡ್ರಿಕ್ಸ್, ರಾಸ್ಸಿ ವಾನ್ ಡೆರ್ ಡುಸೆನ್, ಟೆಂಬಾ ಬಾವುಮಾ, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ಬ್ಯೂರನ್ ಹೆಂಡ್ರಿಕ್ಸ್, ಜೂನಿಯರ್ ದಲಾ/ಅನ್ರಿಕ್ ನಾರ್ಟ್ಜೆ, ತಬ್ರೈಜ್ ಶಮ್ಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications