Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ಪ್ರಥಮ ಟಿ20ಯಲ್ಲಿ ಕಣಕ್ಕಿಳಿಯುವ ತಂಡಗಳು, ಪಿಚ್ ರಿಪೋರ್ಟ್ ಮತ್ತು ಹವಾಮಾನ ವರದಿ

India vs South Africa 1st T20I Preview, Predicted Playing 11, Pitch report, Weather Forecast details
ಆಡೋಕು ಮುಂಚೆಯೇ ಭಾರತದ ಈ ಬೌಲರ್ ಬಗ್ಗೆ ಭಯವಾಗುತ್ತೆ ಎಂದ ಸೌತ್ ಆಫ್ರಿಕಾ ನಾಯಕ | Oneindia Kannada

ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲೇ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಗರಿಗೆದರಿದ್ದು, ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯ ಮೂಲಕ ತನ್ನ ಅಂತರರಾಷ್ಟ್ರೀಯ ಕ್ರಿಕೆಟ್ ಪಯಣವನ್ನು ಪುನರಾರಂಭಿಸುತ್ತಿದೆ. ಹೌದು, ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಂಡಿದ್ದು, ಟೀಮ್ ಇಂಡಿಯಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಮುಖಾಮುಖಿಯಾಗುತ್ತಿದೆ.

ಇತ್ತಂಡಗಳ ನಡುವಿನ ಈ ಸರಣಿಯ ಮೊದಲ ಪಂದ್ಯ ನಾಳೆ ( ಜೂನ್ 9 ) ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಟೀಮ್ ಇಂಡಿಯಾ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಜಸ್ಪ್ರಿತ್ ಬುಮ್ರಾ ಅನುಪಸ್ಥಿಯಲ್ಲಿ ಕಣಕ್ಕಿಳಿಯಲಿದೆ. ಇನ್ನು ಈ ಬಲಿಷ್ಟ ಆಟಗಾರರು ವಿಶ್ರಾಂತಿಗಾಗಿ ತಂಡದಿಂದ ಹೊರಗುಳಿದಿದ್ದು, ಹಲವಾರು ಯುವ ಕ್ರಿಕೆಟಿಗರು ಸ್ಥಾನ ಪಡೆದುಕೊಂಡಿದ್ದಾರೆ.

ಇನ್ನು ಈ ಯುವ ಆಟಗಾರರನ್ನೊಳಗೊಂಡ ಟೀಮ್ ಇಂಡಿಯಾವನ್ನು ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಲಿದ್ದು, ಪ್ರಥಮ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿಯಬಹುದಾದ ಸಂಭಾವ್ಯ ಆಡುವ ಬಳಗ, ಪಂದ್ಯದ ಮಾಹಿತಿ, ಪಿಚ್ ರಿಪೋರ್ಟ್, ಹವಾಮಾನ ವರದಿ ಮತ್ತು ಹವಾಮಾನ ವರದಿ ಈ ಕೆಳಕಂಡಂತಿದೆ.

ಪಿಚ್ ರಿಪೋರ್ಟ್

ಪಿಚ್ ರಿಪೋರ್ಟ್

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ/ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪಿಚ್ ನಿಧಾನಗತಿಯ ಪಿಚ್ ಆಗಿದ್ದು, ಬೌಂಡರಿ ಗೆರೆ ತುಸು ಹತ್ತಿರದಲ್ಲಿರಲಿದೆ. ಹೀಗಾಗಿ ಈ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡ 170ರ ಆಸುಪಾಸಿನಲ್ಲಿ ರನ್ ಕಲೆಹಾಕಿ ಎದುರಾಳಿ ತಂಡಕ್ಕೆ ಪೈಪೋಟಿಯುತ ಗುರಿಯನ್ನು ನೀಡುವುದು ಖಚಿತ. ಇನ್ನು ಈ ಪಿಚ್ ನಿಧಾನಗತಿಯ ಪಿಚ್ ಆಗಿದ್ದು, ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಅನುಕೂಲಕರವಾಗಿರಲಿದೆ.

ಹವಾಮಾನ ವರದಿ ಮತ್ತು ನೇರಪ್ರಸಾರ

ಹವಾಮಾನ ವರದಿ ಮತ್ತು ನೇರಪ್ರಸಾರ

ಗುರುವಾರ ದೆಹಲಿಯಲ್ಲಿ ಹಗಲಿನ ಹವಾಮಾನವು ಸುಮಾರು 41 ಡಿಗ್ರಿ ಎಂದು ಊಹಿಸಲಾಗಿದೆ ಆದರೆ ರಾತ್ರಿಯಲ್ಲಿ ಅದು ಸುಮಾರು 30 ಡಿಗ್ರಿಗಳಿಗೆ ಇಳಿಯಲಿದೆ. ಪಂದ್ಯದ ದಿನದಂದು ಮಳೆಯ ಭೀತಿಯಿಲ್ಲ, ಹಾಗಾಗಿ ಪ್ರೇಕ್ಷಕರು ಅಡೆತಡೆಯಿಲ್ಲದ ಆಟವನ್ನು ವೀಕ್ಷಿಸಬಹುದು. ಸ್ವಲ್ಪ ಪ್ರಮಾಣದ ಇಬ್ಬನಿ ಇರಬಹುದು ಆದರೆ ಇದು ಪಂದ್ಯ ತಿರುವು ನೀಡುವಂತ ಪ್ರಭಾವವನ್ನು ಬೀರುವುದಿಲ್ಲ.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಡಿಸ್ನೆ ಪ್ಲಸ್ ಹಾಟ್‌ಸ್ಟಾರ್ ಅಪ್ಲಕೇಷನ್‌ನಲ್ಲಿ ವೀಕ್ಷಿಸಬಹುದು.

ಸಂಭಾವ್ಯ ಅಡುವ ಬಳಗಗಳು

ಸಂಭಾವ್ಯ ಅಡುವ ಬಳಗಗಳು

ಭಾರತ: 1. ಕೆಎಲ್ ರಾಹುಲ್ (ನಾಯಕ), 2. ಇಶಾನ್ ಕಿಶನ್, 3. ಶ್ರೇಯಸ್ ಅಯ್ಯರ್, 4. ರಿಷಬ್ ಪಂತ್ (ವಿಕೆಟ್ ಕೀಪರ್), 5. ದಿನೇಶ್ ಕಾರ್ತಿಕ್, 6. ಹಾರ್ದಿಕ್ ಪಾಂಡ್ಯ, 7. ಅಕ್ಸರ್ ಪಟೇಲ್, 8. ಭುವನೇಶ್ವರ್ ಕುಮಾರ್, 9. ಹರ್ಷಲ್ ಪಟೇಲ್ , 10. ಯುಜ್ವೇಂದ್ರ ಚಹಾಲ್, 11. ಉಮ್ರಾನ್ ಮಲಿಕ್ / ಅವೇಶ್ ಖಾನ್.

ದಕ್ಷಿಣ ಆಫ್ರಿಕಾ: 1. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), 2. ರೀಜಾ ಹೆಂಡ್ರಿಕ್ಸ್, 3. ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, 4. ಐಡೆನ್ ಮಾರ್ಕ್ರಾಮ್, 5. ​​ಟೆಂಬಾ ಬವುಮಾ (ನಾಯಕ), 6. ಡೇವಿಡ್ ಮಿಲ್ಲರ್, 7. ಡ್ವೈನ್ ಪ್ರಿಟೋರಿಯಸ್, 8. ಕಗಿಸೊ ರಬಾಡ, 9 ಕೇಶವ್ ಮಹಾರಾಜ್, 10. ತಬ್ರೈಜ್ ಶಮ್ಸಿ, 11. ಅನ್ರಿಚ್ ನಾರ್ಕಿಯಾ

Story first published: Wednesday, June 8, 2022, 14:43 [IST]
Other articles published on Jun 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+