For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ, 1ನೇ ಟೆಸ್ಟ್, Live: ದ.ಆಫ್ರಿಕಾಕ್ಕೆ ಸವಾಲಿನ ಮೊತ್ತ

IND vs RSA 1ST Test: Mayank Agarwal steals the show on Day 02 | Oneindia Kannada
India vs South Africa, 1st Test, Day 2- Live Score

ವಿಶಾಖಪಟ್ಟಣ, ಅಕ್ಟೋಬರ್ 3: ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ನಲ್ಲಿ ಆರಂಭಿಕರಾಗಿ ಆಡಿದ ಮೊದಲ ಪಂದ್ಯದಲ್ಲೇ ಹಿಟ್‌ಮ್ಯಾನ್ ರೋಹಿತ್ ಶರ್ಮಾ (176 ರನ್) ಭರ್ಜರಿ ಆಟ ನೀಡಿದ್ದಾರೆ. ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಕೂಡ ಉತ್ತಮ ಆಟ ಪ್ರದರ್ಶಿಸಿದ್ದಾರೆ.

ಆರಂಭಿಕರಾಗಿ ಇಳಿದು 119.4ನೇ ಓವರ್‌ ವರೆಗೆ ಆಡಿದ್ದ ಮಯಾಂಕ್, 215 ರನ್ (371 ಎಸೆತ) ಬಾರಿಸಿ ಡೀನ್ ಎಲ್ಗರ್ ಎಸೆತಕ್ಕೆ ಡೇನ್ ಪೀಡ್ಟ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದಾರೆ. ಮಯಾಂಕ್ ಅಗರ್ವಾಲ್ ಜೊತೆ ಅದ್ಭುತ ಜೊತೆಯಾಟ ಆಡಿದ ರೋಹಿತ್ 176 ರನ್ (244 ಎಸೆತ) ಬಾರಿಸಿ 81.6ನೇ ಓವರ್‌ನಲ್ಲಿ ಕೇಶವ್ ಮಹಾರಾಜ್ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್‌ಗೆ ಸ್ಟಂಪ್ಡ್‌ ಆಗಿ ನಿರ್ಗಮಿಸಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46113

ನಾಯಕ ವಿರಾಟ್ ಕೊಹ್ಲಿ 20, ಚೇತೇಶ್ವರ್ ಪೂಜಾರ 6, ಅಜಿಂಕ್ಯ ರಹಾನೆ 15, ರವೀಂದ್ರ ಜಡೇಜಾ 30, ಹನುಮ ವಿಹಾರಿ 10, ವೃದ್ಧಿಮಾನ್ ಸಹಾ 21 ರನ್ ನೊಂದಿಗೆ 136 ಓವರ್‌ಗೆ 7 ವಿಕೆಟ್‌ ಕಳೆದು 502 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ ಆಡುತ್ತಿದೆ.

ಭಾರತ ತಂಡ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.

ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಮ್, ಡೀನ್ ಎಲ್ಗರ್, ಥ್ಯೂನಿಸ್ ಡಿ ಬ್ರೂಯಿನ್, ಟೆಂಬಾ ಬವುಮಾ, ಫಾಫ್ ಡು ಪ್ಲೆಸಿಸ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ವೆರ್ನಾನ್ ಫಿಲಾಂಡರ್, ಸೆನುರಾನ್ ಮುತ್ತುಸಾಮಿ, ಕೇಶವ್ ಮಹಾರಾಜ್, ಡೇನ್ ಪೀಡ್, ಕಗಿಸೊ ರಬಾಡಾ.

Story first published: Thursday, October 3, 2019, 16:47 [IST]
Other articles published on Oct 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+