ಭಾರತ vs ದ.ಆಫ್ರಿಕಾ, 1ನೇ ಟೆಸ್ಟ್, Live: ರೋಹಿತ್-ಮಯಾಂಕ್ ಭರ್ಜರಿ ಆಟ

ವಿಶಾಖಪಟ್ಟಣ, ಅಕ್ಟೋಬರ್ 2: ಆಂಧ್ರ ಪ್ರದೇಶದ ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಕಣಕ್ಕಿಳಿದಿವೆ. ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿದೆ.
ಇನ್ನಿಂಗ್ಸ್ ಆರಂಭಿಸಿರುವ ಭಾರತ ಪರ ಆರಂಭಿಕ ಆಟಗಾರರಾದ ಮಯಾಂಕ್ ಅಗರ್ವಾಲ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡಿದ್ದು, ಶರ್ಮಾ ಶತಕ, ಅಗರ್ವಾಲ್ ಅರ್ಧ ಶತಕ ಬಾರಿಸಿದ್ದಾರೆ.
ಇತ್ತಂಡಗಳ 3 ಪಂದ್ಯಗಳ ಟಿ20 ಸರಣಿ ಒಂದು ಪಂದ್ಯ ರದ್ದೂ ಸೇರಿ 1-1ರಿಂದ ಸಮಬಲಗೊಂಡಿತ್ತು. 3 ಪಂದ್ಯಗಳ ಟೆಸ್ಟ್ ಸರಣಿ ಗೆದ್ದುಕೊಳ್ಳುವತ್ತ ಎರಡೂ ತಂಡಗಳು ಕಣ್ಣಿಟ್ಟಿವೆ. ಭಾರತ ತಂಡದಲ್ಲಿ ರಿಷಬ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ಮೈದಾನಕ್ಕಿಳಿದಿದ್ದಾರೆ.
ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್
ಭಾರತ ತಂಡ: ರೋಹಿತ್ ಶರ್ಮಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮ ವಿಹಾರಿ, ವೃದ್ಧಿಮಾನ್ ಸಹಾ (ವಿಕೆ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್, ಡೀನ್ ಎಲ್ಗರ್, ಥ್ಯೂನಿಸ್ ಡಿ ಬ್ರೂಯಿನ್, ಟೆಂಬಾ ಬವುಮಾ, ಫಾಫ್ ಡು ಪ್ಲೆಸಿಸ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ವೆರ್ನಾನ್ ಫಿಲಾಂಡರ್, ಸೆನುರಾನ್ ಮುತ್ತುಸಾಮಿ, ಕೇಶವ್ ಮಹಾರಾಜ್, ಡೇನ್ ಪೀಡ್, ಕಗಿಸೊ ರಬಾಡಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications