Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪಂತ್ ಬದಲಿಗೆ ಸಹಾ!

Wriddhiman Saha To Play Ahead Of Rishabh Pant In The First Test

ವಿಶಾಖಪಟ್ಟಣಂ, ಅಕ್ಟೋಬರ್ 01: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಟೆಸ್ಟ್ ಪಂದ್ಯಗಳ ಸರಣಿ ಅಕ್ಟೋಬರ್ 02 ರಿಂದ ಶುರುವಾಗಲಿದೆ. ವೈಜಾಗ್ ನಲ್ಲಿ ಮೊದಲ ಟೆಸ್ಟ್ ಪಂದ್ಯಕ್ಕೆ ಮೈದಾನ ಅಣಿಯಾಗಿದೆ. ಈ ನಡುವೆ ಟೀಂ ಇಂಡಿಯಾದ ಆಡುವ ಹನ್ನೊಂದು ಮಂದಿ ಬಳಗದಲ್ಲಿ ಭಾರಿ ಬದಲಾವಣೆ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಘೋಷಿಸಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ್ದ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಬದಲಿಗೆ ಅನುಭವಿ ವೃದ್ಧಿಮಾನ್ ಸಹಾಗೆ ಆಡಲು ಅವಕಾಶ ಸಿಗಲಿದೆ ಎಂದು ನಾಯಕ ಕೊಹ್ಲಿ ಹೇಳಿದ್ದಾರೆ. ಜನವರಿ 2018ರಲ್ಲ್ ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವಾಡಿದ್ದ ಸಹಾ ನಂತರ ಗಾಯಾಳುವಾಗಿ, ತಂಡದಿಂದ ಹೊರ ಬಿದ್ದಿದ್ದರು.

ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಭುಜದ ಗಾಯಕ್ಕೆ ಸರ್ಜರಿ ಕೂಡಾ ಆಗಿ, ಇಂಡಿಯನ್ ಪ್ರೀಮಿಯರ್ ಲೀಗ್ ನಿಂದಲೂ ಹೊರಗುಳಿಯುವಂತಾಗಿತ್ತು.

ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡ ಟೀಂ ಇಂಡಿಯಾದಲ್ಲಿ ಸಹಾ ಅವರು ಆಯ್ಕೆಯಾಗಿದ್ದರೂ ರಿಷಪ್ ಪಂತ್ ಗೆ ಸ್ಥಾನ ಸಿಕ್ಕಿತ್ತು. ಆದರೆ ಪಂತ್ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು.

ಸಹಾ ಜೊತೆಗೆ ಟೆಸ್ಟ್ ತಂಡಕ್ಕೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡಾ ಮರಳುತ್ತಿದ್ದಾರೆ. ಅಶ್ವಿನ್ ಅವರು ವೈಜಾಗ್ ಟೆಸ್ಟ್ ಆಡುವುದನ್ನು ಕೊಹ್ಲಿ ಖಚಿತಪಡಿಸಿದ್ದಾರೆ. ಕಳೆದ ಡಿಸೆಂಬರ್ ನಲ್ಲಿ ಅಡಿಲೇಡ್ ಟೆಸ್ಟ್ ಪಂದ್ಯದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಅಶ್ವಿನ್ ದೂರವೇ ಇದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್ ಆಗಿದ್ದರು.

Story first published: Tuesday, October 1, 2019, 13:02 [IST]
Other articles published on Oct 1, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+