Ind vs SA: 2ನೇ ಏಕದಿನ ಪಂದ್ಯದ ಸಂಭಾವ್ಯ ಆಡುವ ಬಳಗ: ಸರಣಿ ಜೀವಂತವಾಗಿರಿಸತ್ತಾ ಧವನ್ ಪಡೆ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ರೋಚಕ ಸೆಣೆಸಾಟದ ಬಳಿಕವೂ ಟೀಮ್ ಇಂಡಿಯಾ ಅಂತಿಮ ಹಂತದಲ್ಲಿ ಎಡವಿತ್ತು. ಹೀಗಾಗಿ 9 ರನ್‌ಗಳ ಅಂತರದ ಸೋಲು ಕಾಣುವಂತಾಗಿತ್ತು. ಇದೀಗ ಎರಡನೇ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದು ಗೆದ್ದರೆ ಮಾತ್ರವೇ ಸರಣಿಯಲ್ಲಿ ಜೀವಂತವಾಗುಳಿಯಲಿದೆ.
ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕ ಶ್ರೇಯಸ್ ಐಯ್ಯರ್, ಸಂಜು ಸ್ಯಾಮ್ಸನ್ ಹಾಗೂ ಶಾರ್ದೂಲ್ ಠಾಕೂರ್ ಅವರಿಂದ ಅದ್ಭುತ ಪ್ರದರ್ಶನ ನೀಡಿದ ಕಾರಣದಿಂದಾಗಿ ಪಂದ್ಯದಲ್ಲಿ ಅದ್ಭಜುತ ಹೋರಾಟ ಪ್ರದರ್ಶನ ನೀಡುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಇತರ ದಾಂಡಿಗರಿಂದ ಕೂಡ ಟೀಮ್ ಇಂಡಿಯಾ ಹೆಚ್ಚಿ ಪ್ರದರ್ಶನವನ್ನು ನಿರೀಕ್ಷಿಸುಇತ್ತಿದ್ದು ಸಾಂಘಿಕ ಪ್ರದರ್ಶನ ನೀಡಿದರೆ ಮಾತ್ರವೇ ಗೆಲುವು ಸಾಧ್ಯ. ದ. ಆಫ್ರಿಕಾದ ಬಲಿಷ್ ಪಡೆಯ ವಿರುದ್ಧ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಲಿಷ್ಠವಾಗಿದೆ ದಕ್ಷಿಣ ಆಫ್ರಿಕಾ ಬಳಗ
ದಕ್ಷಿಣ ಆಫ್ರಿಕಾ ಪಡೆ ಬಲಿಷ್ಠವಾಗಿದ್ದು ಪೂರ್ಣಪ್ರಮಾಣದ ಆಟಗಾರರ ಪಡೆಯೊಂದಿಗ ಕಣಕ್ಕಿಳಿಯುತ್ತಿದೆ. ಆದರೆ ಭಾರತ ತಂಡ ಶಿಖರ್ ಧವನ್ ನೇತೃತ್ವದಲ್ಲಿ ದ್ವಿತಿಯ ದರ್ಜೆಯ ಆಟಗಾರರ ಪಡೆಯೊಂದಿಗೆ ಕಣಕ್ಕಿಳಿಯುತ್ತಿದೆ. ಹಾಗಿದ್ದರೂ ಮೊದಲ ಪಂದ್ಯದಲಿ ಭಾತ ತಂಡ ನಿಡಿರುವ ಪ್ತರದರ್ಶನ ಅಮೋಘವಾಗಿದ್ದು ಪಂದ್ಯದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಪೈಪೋಟಿ ನೀಡುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಇದೇ ಪ್ರದರ್ಶನವನ್ನು ಮತ್ತಷ್ಟು ಉತ್ತಮಗೊಳಿಸುವ ವಿಶ್ವಾಸದೊಂದಿಗೆ ಎರಡನೇ ಪಂದ್ಯದಲ್ಲಿ ಶಿಖರ್ ಧವನ್ ನೇತೃತ್ವದ ಭಾರತ ತಂಡ ಕಣಕ್ಕಿಳಿಯಲಿದೆ.

ಪಂದ್ಯದ ಸಮಯ ಹಾಗೂ ನೇರಪ್ರಸಾರ
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆಯಲಿದ್ದು ಜೆಎಸ್‌ಸಿಎ ಇಂಟರ್‌ನ್ಯಾಶನ್ ಸ್ಟೇಡಿಯಣ ಈ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಈ ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದ್ದು ಟಾಸ್ ಪ್ರಕ್ರಿಯೆ 1 ಗಂಟೆಯ ವೇಳೆಗೆ ನಡೆಯಲಿದೆ. ಇನ್ನು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಈ ಪಂದ್ಯದ ನೇರಪ್ರಸಾರವಾಗಲಿದ್ದು ಹಾಟ್‌ಸ್ಟಾರ್‌ನಲ್ಲಿಯೂ ಪಂದ್ಯಗಳನ್ನು ವೀಕ್ಷಿಣೆ ಮಾಡಬಹುದಾಗಿದೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಭಾರತ ತಂಡ: ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಕುಲದೀಪ್ ಯಾದವ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ರಾಹುಲ್ ತ್ರಿಪಾಠಿ, ಮುಖೇಶ್ ಕುಮಾರ್, ಋತುರಾಜ್ ಗಾಯಕ್ವಾಡ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಜಾನ್ನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಹೆನ್ರಿಚ್ ಕ್ಲಾಸೆನ್, ಲುಂಗಿ ಎನ್‌ಗಿಡಿ, ರೀಜಾ ಹೆಂಡ್ರಿಕ್ಸ್

ಇತ್ತಂಡಗಳ ಸಂಭಾವ್ಯ ಆಡುವ ಬಳಗ ಹೀಗಿದೆ
ಟೀಮ್ ಇಂಡಿಯಾ: ಶಿಖರ್ ಧವನ್, ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಮುಖೇಶ್ ಕುಮಾರ್, ಕುಲ್‌ದೀಪ್ ಯಾದವ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ, ಐಡೆನ್ ಮಾರ್ಕ್ರಾಮ್, ಆಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೋ ರಬಾಡ, ತಬ್ರೈಜ್ ಶಮ್ಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications