Guwahati Test: ಮೊದಲ ದಿನ ದಕ್ಷಿಣ ಆಫ್ರಿಕಾ 247/6; ಕುಲ್‌ದೀಪ್‌ಗೆ 3 ವಿಕೆಟ್
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಮೊದಲ ದಿನ ಉಭಯ ತಂಡದ ಆಟಗಾರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ಬೌಲರ್‌ಗಳು 6 ವಿಕೆಟ್ ಕಬಳಿಸಿದರೆ, ದಕ್ಷಿಣ ಆಫ್ರಿಕಾ ಮೊದಲ ದಿನ 247ರನ್ ಕಲೆ ಹಾಕಿ ಅಬ್ಬರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನು ಕಂಡಿತು. ಸ್ಟಾರ್ ಆರಂಭಿಕ ಜೋಡಿ ಏಡೆನ್ ಮಾರ್ಕ್ರಮ್ ಹಾಗೂ ರಿಯಾನ್ ರಿಕಲ್ಟನ್ ಭಾರತೀಯ ಬೌಲರ್‌ಗಳು ಕೇಳುತ್ತಿದ್ದ ಪ್ರಶ್ನೆಗೆ ಸಮಯೋಚಿತವಾಗಿ ಉತ್ತರವನ್ನು ನೀಡುತ್ತಾ ಸಾಗಿದರು. ಈ ಜೋಡಿ 26.5 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 82 ರನ್ ಸೇರಿಸಿದ್ದಾಗ ಮಾರ್ಕ್ರಮ್ ಅವರಿಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಮಾರ್ಕ್ರಮ್ 5 ಬೌಂಡರಿ ಸಹಾಯದಿಂದ 38 ರನ್ ಬಾರಿಸಿದರು.

ಮಾರ್ಕ್ರಮ್ ಮಾರ್ಕ್ರಮ್ ಮಾರ್ಕ್ರಮ್ ಔಟ್ ಆಗುತ್ತಿದ್ದಂತೆ ರಿಯಾನ್ ರಿಕಲ್ಟನ್ ಸಹ ಜವಾಬ್ದಾರಿಯನ್ನು ಮರೆತರು. ಇವರು ಕುಲ್‌ದೀಪ್ ಯಾದವ್ ಎಸೆತವನ್ನು ಕೆಣಕಿ ರಿಷಭ್ ಪಂತ್‌ಗೆ ಕ್ಯಾಚ್ ನೀಡಿದರು. ಸತತ 2 ವಿಕೆಟ್ ಕಳೆದುಕೊಂಡು ಒತ್ತಡದಲ್ಲಿ ದಕ್ಷಿಣ ಆಫ್ರಿಕಾಕ್ಕೆ ನಾಯಕ ತೆಂಬು ಬವುಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಆಧಾರವಾಯಿತು. ಈ ಜೋಡಿ ಮೂರನೇ ವಿಕೆಟ್‌ಗೆ 182 ಎಸೆತಗಳನ್ನು ಎದುರಿಸಿ 84 ರನ್ ಕಲೆ ಹಾಕಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ, ಒಳ್ಳೆಯ ಎಸೆತಗಳಿಗೆ ಮನ್ನಣೆ ನೀಡಿದ ಜೋಡಿ ತಂಡ ಉತ್ತಮ ಮೊತ್ತ ಕಲೆ ಹಾಕುವ ನಿಟ್ಟಿನಲ್ಲಿ ಚಿತ್ತ ನೆಡುವಂತೆ ಮಾಡಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಟ್ರಿಸ್ಟನ್ ಸ್ಟಬ್ಸ್ 112 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 49 ರನ್ ಬಾರಿಸಿದ್ದಾಗ, ಕುಲ್‌ದೀಪ್ ಯಾದವ್ ಎಸೆತವನ್ನು ಕೆಣಕಿ ಕೆಎಲ್ ರಾಹುಲ್ ಅವರಿಗೆ ವಿಕೆಟ್ ಕ್ಯಾಚ್ ನೀಡಿದರು. ತೆಂಬು ಬವುಮಾ ಸಹ 41 ರನ್ ಬಾರಿಸಿದ್ದಾಗ ರವೀಂದ್ರ ಜಡೇಜಾ ತೋಡಿದ ಖೆಡ್ಡಾಗೆ ಬಲಿಯಾದರು. ಯಶಸ್ವಿ ಜೈಸ್ವಾಲ್ ಹಿಡಿದ ಉತ್ತಮ ಕ್ಯಾಚ್ ಪಡೆದರು. ವಿಯಾನ್ ಮುಲ್ಡರ್ ಸಹ ಕುಲ್‌ದೀಪ್ ಎಸೆತದಲ್ಲಿ ಪೆವಿಲಿಯನ್ ಸೇರಿದರು.

ಕುಲ್‌ದೀಪ್‌ಗೆ 3 ವಿಕೆಟ್
201 ರನ್‌ಗೆ 5 ವಿಕೆಟ್ ಕಳೆದುಕೊಂಡು ಆಗ ಸಂಕಷ್ಟದಲ್ಲಿದ್ದ ತಂಡಕ್ಕೆ ಸೆನುರಾನ್ ಮುತ್ತುಸಾಮಿ ಹಾಗೂ ಟೋನಿ ಡಿ ಜೋರ್ಜಿ ಜೋಡಿ ನೆರವಾಯಿತು. ಈ ಜೊಡಿ 6ನೇ ವಿಕೆಟ್‌ಗೆ 83 ಎಸೆತಗಳಲ್ಲಿ 45 ರನ್ ಸೇರಿಸಿತು. ಟೋನಿ ಡಿ ಜೋರ್ಜಿ 28 ರನ್ ಬಾರಿಸಿದ್ದಾಗ ಸಿರಾಜ್ ಇವರ ವಿಕೆಟ್ ಪಡೆದರು. 81.5 ಓವರ್‌ಗಳ ಆಟವಾದಗ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 247 ರನ್ ಸೇರಿಸಿದೆ. ಭಾರತದ ಪರ ಕುಲ್‌ದೀಪ್ ಯಾದವ್ 3, ರವೀಂದ್ರ ಜಡೇಜಾ, ಸಿರಾಜ್, ಬುಮ್ರಾ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications