
ಪುಣೆ, ಅಕ್ಟೋಬರ್ 12: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯದ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತದ ವೇಗಿಗಳಾದ ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ಆರ್ ಅಶ್ವಿನ್ ಪಾರಮ್ಯ ಮೆರೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಬಳಗ 326 ರನ್ ಮುನ್ನಡೆ ಸಾಧಿಸಿದೆ.
ಆರಂಭಿಕ ಇನ್ನಿಂಗ್ಸ್ ಆಡಿದ ದಕ್ಷಿಣ ಆಫ್ರಿಕಾವನ್ನು ಭಾರತದ ಬೌಲರ್‌ಗಳು ಕಾಡಿದರು. ಆರ್ ಅಶ್ವಿನ್ 4, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದಿರು. ಪ್ರೋಟಿಯಾಸ್ ಥ್ಯೂನಿಸ್ ಡಿ ಬ್ರೂಯಿನ್ 30, ಫಾ ಡು ಪ್ಲೆಸಿಸ್ 64, ಕ್ವಿಂಟನ್ ಡಿ ಕಾಕ್ 31, ವರ್ನಾನ್ ಫಿಲಾಂಡರ್ 44, ಕೇಶವ್ ಮಹಾರಾಜ್ 72 ರನ್‌ನೊಂದಿಗೆ 105.4 ಓವರ್‌ನಲ್ಲಿ 275 ರನ್ ಪೇರಿಸಿ ಇನ್ನಿಂಗ್ಸ್ ಮುಗಿಸಿದೆ.
ಭಾರತ vs ದ.ಆಫ್ರಿಕಾ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಮಯಾಂಕ್ ಅಗರ್ವಾಲ್ 108, ಚೇತೇಶ್ವರ ಪೂಜಾರ 58, ವಿರಾಟ್ ಕೊಹ್ಲಿ 254, ಅಜಿಂಕ್ಯ ರಹಾನೆ 59, ರವೀಂದ್ರ ಜಡೇಜಾ 91 ರನ್‌ನೊಂದಿಗೆ 156.3 ಓವರ್‌ಗೆ 5 ವಿಕೆಟ್ ಕಳೆದು 601 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.
ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ.
ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್, ಐಡೆನ್ ಮಾರ್ಕ್ರಮ್, ಥ್ಯೂನಿಸ್ ಡಿ ಬ್ರೂಯಿನ್, ಟೆಂಬಾ ಬವುಮಾ, ಫಾಫ್ ಡು ಪ್ಲೆಸಿಸ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೆನುರನ್ ಮುತ್ತುಸಾಮಿ, ವೆರ್ನಾನ್ ಫಿಲಾಂಡರ್, ಕೇಶವ್ ಮಹಾರಾಜ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ.