287ರನ್ ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ!

Posted By:
India Vs South Africa, 2nd Test, Day 4: Hosts set a target of 287 for visitors to win

ಸೆಂಚುರಿಯನ್, ಜನವರಿ 16 : ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ 287ರನ್ ಟಾರ್ಗೆಟ್ ಸಿಕ್ಕಿದೆ. ವೇಗಿ ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 258ರನ್ನಿಗೆ ನಿಯಂತ್ರಿಸಿದ ಭಾರತ ಗೆಲುವಿನ ನಿರೀಕ್ಷೆಯಲ್ಲಿ ಕಣಕ್ಕಿಳಿದಿದೆ.

ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಶಮಿ ಅವರು 16 ಓವರ್ ಗಳಲ್ಲಿ 49 ರನ್ನಿಗೆ 4 ವಿಕೆಟ್ ಗಳಿಸಿದರು. ಬೂಮ್ರಾ ಅವರು 3/70 ಹಾಗೂ ಇಶಾಂತ್ ಶರ್ಮ 2/40 ಗಳಿಸಿದರು. ದಕ್ಷಿಣ ಆಫ್ರಿಕಾ ತಂಡವು 91.3 ಓವರ್ ಗಳಲ್ಲಿ 258 ಸ್ಕೋರಿಗೆ ಆಲೌಟ್ ಆಯಿತು.

ಸ್ಕೋರ್ ಕಾರ್ಡ್

ಡೀನ್ ಎಲ್ಗಾರ್ 61(8 ಬೌಂಡರಿ, 1 ಸಿಕ್ಸರ್), ಎಬಿ ಡಿ ವಿಲಿಯರ್ಸ್ 80 (10 ಬೌಂಡರಿ), ಫಾಫ್ ಡು ಪ್ಲೆಸಿಸ್ 48(4 ಬೌಂಡರಿ), ಫಿಲ್ಯಾಂಡರ್ 26 ರನ್ (2 ಬೌಂಡರಿ) ಗಳಿಸಿದರು.

287 ಗುರಿ ಬೆನ್ನು ಹತ್ತಿದ ಟೀಂ ಇಂಡಿಯಾ ಮತ್ತೊಮ್ಮೆ ಕಳಪೆ ಆರಂಭ ಪಡೆದುಕೊಂಡಿತು. ಮುರಳಿ ವಿಜಯ್ 9, ಲೋಕೇಶ್ ರಾಹುಲ್ 4 ಗಳಿಸಿ ಔಟಾದರು.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, January 16, 2018, 20:55 [IST]
Other articles published on Jan 16, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ