Guwahati Test: ಭಾರತದ ಪಾಲಿಗೆ ಸ್ಮರಣೀಯ ಟೆಸ್ಟ್; ಕಾರಣವೇನು?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ ಗುವಾಹಟಿಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ 30 ರನ್‌ಗಳ ಸೋಲು ಕಂಡ ಬಳಿಕ, ಸರಣಿಯಲ್ಲಿ ಸಮಬಲ ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಎರಡನೇ ಟೆಸ್ಟ್ ಪಂದ್ಯ ಭಾರತಕ್ಕೆ ಸ್ಮರಣೀಯ ಪಂದ್ಯವಾಗಿರಲಿದೆ. ಈ ಮೂಲಕ ಭಾರತ ವಿಶ್ವ ಕ್ರಿಕೆಟ್‌ನಲ್ಲಿ ಈ ಹಿಂದೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ವಿಶೇಷ ಪಟ್ಟಿಗೆ ಸೇರ್ಪಡೆ ಆಗುತ್ತದೆ.
ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣವು ಇಲ್ಲಿಯ ವರೆಗೆ ಸೀಮಿತ ಓವರ್‌ಗಳ ಪಂದ್ಯಕ್ಕೆ ಮಾತ್ರ ಆತಿಥ್ಯ ನೀಡಿತ್ತು. ಅಲ್ಲದೆ ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾ ಇಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯ ಭಾರತದ ಪಾಲಿಗೆ ಸ್ಮರಣೀಯವಾಗಿರಲಿದೆ. ಏಕೆಂದರೆ ಭಾರತ ಆಯೋಜಿಸುತ್ತಿರುವ 300ನೇ ಟೆಸ್ಟ್ ಪಂದ್ಯ ಎಂಬ ಹೆಗ್ಗಳಿಕೆ ಈ ಟೆಸ್ಟ್ ಪಂದ್ಯದ್ದಾಗಿದೆ. ಇದಕ್ಕೂ ಮೊದಲು ಈ ಸಾಧನೆಯನ್ನು ಕೇವಲ ಎರಡು ದೇಶಗಳು ಮಾತ್ರ ಮಾಡಿವೆ.

ತವರಿನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಯೋಜಿಸಿದ ಕೀರ್ತಿ ಕ್ರಿಕೆಟ್ ಜನಕರ ನಾಡು ಎಂದೇ ಕರೆಯಲ್ಪಡುವ ಇಂಗ್ಲೆಂಡ್‌ಗೆ ಸಲ್ಲುತ್ತದೆ. ಇಂಗ್ಲೆಂಡ್ ಈ ವರೆಗೆ 566 ಟೆಸ್ಟ್ ಪಂದ್ಯಗಳನ್ನು ಆಯೋಜಿಸಿದೆ. ಈ ಪಟ್ಟಿಯಲ್ಲಿ ಆಸೀಸ್ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ತವರಿನಲ್ಲಿ 450 ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ನೀಡಿದೆ. ಇನ್ನು ಈ ಪಟ್ಟಿಯಲ್ಲಿ ಸದ್ಯ ಭಾರತ ಮೂರನೇ ಸ್ಥಾನದಲ್ಲಿದೆ. ಟೀಮ್ ಇಂಡಿಯಾ ಗುವಾಹಟಿ ಮೈದಾನಕ್ಕೆ ಎಂಟ್ರಿ ಪಡೆಯುತ್ತಿದ್ದಂತೆ ತವರಿನಲ್ಲಿ 300ನೇ ಟೆಸ್ಟ್ ಪಂದ್ಯವನ್ನು ಆಯೋಜಿಸಿದ ಕೀರ್ತಿಯನ್ನು ತನ್ನದಾಗಿಸಿಕೊಳ್ಳಲಿದೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದ ಪಾಲಾಗಲಿದೆ.
ಅತಿ ಹೆಚ್ಚು ಪಂದ್ಯ ಆಯೋಜಿಸಿರುವ ದೇಶಗಳು
ಇಂಗ್ಲೆಂಡ್ - 566 ಟೆಸ್ಟ್ ಪಂದ್ಯ
ಆಸ್ಟ್ರೇಲಿಯಾ - 450 ಟೆಸ್ಟ್ ಪಂದ್ಯ
ಭಾರತ - 299 ಟೆಸ್ಟ್ ಪಂದ್ಯ
ವೆಸ್ಟ್ ಇಂಡೀಸ್ - 270 ಟೆಸ್ಟ್ ಪಂದ್ಯ
ದಕ್ಷಿಣ ಆಫ್ರಿಕಾ - 254 ಟೆಸ್ಟ್ ಪಂದ್ಯ
ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು?
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದರು. ಇವರು ಬ್ಯಾಟಿಂಗ್ ಮಾಡುವಾಗ ಕುತ್ತಿನಲ್ಲಿ ಸೆಳೆತ ಕಾಣಿಸಿಕೊಂಡಿದ್ದರಿಂದ ಇವರು ಮೈದಾನದಿಂದ ಹೊರ ನಡೆದರು. ಬಳಿಕ ಇವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಇವರಿಗೆ 10 ದಿನ ವಿಶ್ರಾಂತಿ ಅವಶ್ಯಕತೆ ಇದೆ ಎಂದು ತಿಳಿದು ಬಂದಿದ್ದು, ಎರಡನೇ ಟೆಸ್ಟ್‌ನಿಂದ ಗಿಲ್ ಹೊರ ನಡೆದಿದ್ದಾರೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದು, ಉಪನಾಯಕ ರಿಷಭ್ ಪಂತ್ ಅವರತ್ತ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications