21ನೇ ಶತಕ ಗಳಿಸಿ, ವಿರಾಟ್ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ
ಜೋಹಾನ್ಸ್ ಬರ್ಗ್, ಜನವರಿ 15: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮೊದಲ ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಶತಕ ಗಳಿಸಿದರು.
ಇದು ಕೊಹ್ಲಿ ಅವರ ವೃತ್ತಿ ಬದುಕಿನ 21ನೇ ಟೆಸ್ಟ್ ಶತಕವಾಗಿದೆ. ಈ ಶತಕ ಗಳಿಸುವ ಮೂಲಕ ಕೊಹ್ಲಿ ಅವರು ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಶತಕ, ದ್ವಿಶತಕ ಗಳನ್ನು ಸಿಡಿಸುತ್ತಿದ್ದಂತೆ ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ ಶುರುವಾಗುತ್ತದೆ. ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಕೊಹ್ಲಿ ಮುನ್ನುಗ್ಗುತ್ತಿದ್ದಾರೆ.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ 105 ಬಾರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ 50ನೇ ಶತಕ ಪೂರೈಸಿದ್ದರು. ನಂತರ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ, ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ದಾಖಲೆಯನ್ನು ಮುರಿದರು. ಗವಾಸ್ಕರ್ ಅವರು ನಾಯಕನಾಗಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ(11) ಹೊಂದಿದ್ದರು. ಕೊಹ್ಲಿ ಅವರು ಈಗ ನಾಯಕರಾಗಿ 14 ಶತಕ ಗಳಿಸಿದ್ದಾರೆ. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಶತಕದ ಬಳಿಕ ಕೊಹ್ಲಿ ಸಾಧನೆಯತ್ತ ಒಂದು ನೋಟ..

54.02 ರನ್ ಸರಾಸರಿ
ವಿರಾಟ್ ಕೊಹ್ಲಿ ಅವರು ಈ ಸಮಯಕ್ಕೆ 65 ಪಂದ್ಯಗಳಿಂದ 109 ಇನ್ನಿಂಗ್ಸ್ ಗಳಲ್ಲಿ 5402ರನ್ ಗಳಿಸಿದ್ದು, 54.02 ರನ್ ಸರಾಸರಿ ಹೊಂದಿದ್ದಾರೆ. 15 ಅರ್ಧ ಶತಕ ಹಾಗೂ 21 ಶತಕ ಗಳಿಸಿದ್ದು, 243ರನ್ ಗರಿಷ್ಠ ಮೊತ್ತವಾಗಿದೆ. ಕ್ರಿಕೆಟ್ ನ ಮೂರು ಮಾದರಿಯಲ್ಲೂ 50 ಪ್ಲಸ್ ರನ್ ಸರಾಸರಿ ಹೊಂದಿರುವ ಏಕೈಕ ಆಟಗಾರ ಎನಿಸಿಕೊಂಡಿರುವ ಕೊಹ್ಲಿ ಈ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಒಟ್ಟು 53 ಶತಕ ಬಾರಿಸಿದ್ದಾರೆ
ಈ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ನಲ್ಲಿ 21 ಹಾಗೂ ಏಕದಿನ ಕ್ರಿಕೆಟ್ 32 ಶತಕ ಗಳಿಸಿದ್ದಾರೆ. ಒಟ್ಟು 53 ಶತಕ ಬಾರಿಸಿದ್ದು, ಅತಿ ಹೆಚ್ಚು ಶತಕ ಗಳಿಸಿರುವ ಭಾರತೀಯ ಆಟಗಾರರ ಪೈಕಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅವರು 31 ಪಂದ್ಯಗಳಲ್ಲಿ 49 ಇನ್ನಿಂಗ್ಸ್ ಗಳಿಂದ 12 ಶತಕ ಹಾಗೂ 4 ಅರ್ಧಶತಕ ಗಳಿಸಿದ್ದಾರೆ. 53 ಶತಕಗಳ ಮೂಲಕ ಬ್ರಿಯಾನ್ ಲಾರಾ ಸಮಕ್ಕೆ ನಿಂತಿದ್ದಾರೆ.

ನಾಯಕನಾಗಿ ವಿದೇಶದಲ್ಲಿ ಅತಿ ಹೆಚ್ಚು ಶತಕ
ನಾಯಕನಾಗಿ ವಿದೇಶದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಭಾರತೀಯ ಆಟಗಾರರ ಪೈಕಿ ಕೊಹ್ಲಿ ನಂ.1.
* 7- ಶತಕ- ವಿರಾಟ್ ಕೊಹ್ಲಿ (22 ಇನ್ನಿಂಗ್ಸ್)
* 5- ಮೊಹಮ್ಮದ್ ಅಜರುದ್ದೀನ್ (41 ಇನ್ನಿಂಗ್ಸ್)
* 4 - ಸಚಿನ್ ತೆಂಡೂಲ್ಕರ್ (21 ಇನ್ನಿಂಗ್ಸ್)
* 4- ರಾಹುಲ್ ದ್ರಾವಿಡ್ (30 ಇನ್ನಿಂಗ್ಸ್)
* 3 ಸೌರವ್ ಗಂಗೂಲಿ (43 ಇನ್ನಿಂಗ್ಸ್)

ತ್ವರಿತವಾಗಿ 21 ಶತಕ ಗಳಿಕೆ
ಡಾನ್ ಬ್ರಾಡ್ಮನ್ : 56 ಇನ್ನಿಂಗ್ಸ್ ನಲ್ಲಿ 21 ಶತಕ
ಸುನೀಲ್ ಗವಾಸ್ಕರ್ : 98 ಇನ್ನಿಂಗ್ಸ್
ಸ್ಟೀವನ್ ಸ್ಮಿತ್ : 105 ಇನ್ನಿಂಗ್ಸ್
ವಿರಾಟ್ ಕೊಹ್ಲಿ : 109 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್ : 110 ಇನ್ನಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications