For Quick Alerts
ALLOW NOTIFICATIONS  
For Daily Alerts
 

3ನೇ ಟಿ20: ಕ್ವಿಂಟನ್ ಡಿ ಕಾಕ್ ಅಬ್ಬರ, ದಕ್ಷಿಣ ಆಫ್ರಿಕಾಕ್ಕೆ ಶರಣಾದ ಭಾರತ

India vs South Africa, 3rd T20I Match- Live Score

ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ (ಸೆಪ್ಟೆಂಬರ್ 22) ನಡೆದ ದಕ್ಷಿಣ ಆಫ್ರಿಕಾ-ಭಾರತ ನಡುವಿನ 3ನೇ ಟಿ20 ಪಂದ್ಯದಲ್ಲಿ ಕ್ವಿಂಟನ್ ಡಿ ಕಾಕ್ ಪಡೆ 9 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಈ ಪಂದ್ಯದೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ (ಆರಂಭಿಕ ಪಂದ್ಯ ರದ್ದು ಸೇರಿ) ಇತ್ತಂಡಗಳು 1-1ರ ಸಮಬಲ ಸಾಧಿಸಿವೆ.

ಟಾಸ್ ಗೆದ್ದು ಇನ್ನಿಂಗ್ಸ್‌ ಆರಂಭಿಸಿದ ಭಾರತಕ್ಕೆ ರೋಹಿತ್ ಶರ್ಮಾ 9, ಶಿಖರ್ ಧವನ್ 36, ವಿರಾಟ್ ಕೊಹ್ಲಿ 9, ರಿಷಭ್ ಪಂತ್ 19, ಶ್ರೇಯಸ್ ಅಯ್ಯರ್ 5, ಕೃನಾಲ್ ಪಾಂಡ್ಯ 4, ಹಾರ್ದಿಕ್ ಪಾಂಡ್ಯ 14, ರವೀಂದ್ರ ಜಡೇಜಾ 19, ವಾಷಿಂಗ್ಟನ್ ಸುಂದರ್ 4 ರನ್ ಸೇರಿಸಿದರು.

ಕೊಹ್ಲಿ ಪಡೆ 20 ಓವರ್‌ಗೆ 9 ವಿಕೆಟ್ ಕಳೆದು 134 ರನ್ ಮಾಡಿತು. ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಜಾರ್ನ್ ಫಾರ್ಚೂನ್ 2, ಕಾಗಿಸೋ ರಬಾಡಾ 3, ಬ್ಯೂರನ್ ಹೆಂಡ್ರಿಕ್ಸ್ 2, ತಬ್ರೆಜ್ ಶಮ್ಸಿ 1 ವಿಕೆಟ್‌ ಪಡೆದು ಆತಿಥೇಯರನ್ನು ಕಾಡಿದರು.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟಿ20 ಪಂದ್ಯ, ಸ್ಕೋರ್‌ಕಾರ್ಡ್

1
46112

ಗುರಿ ಬೆನ್ನತ್ತಿದ ಆಫ್ರಿಕಾದಿಂದ ರೀಜಾ ಹೆಂಡ್ರಿಕ್ಸ್ 28, ಕ್ವಿಂಟನ್‌ ಡಿ ಕಾಕ್ 79 (52 ಎಸೆತ), ತೆಂಬ ಬವುಮಾ 27 ರನ್‌ ಕೊಡುಗೆಯಿತ್ತರು. ಪ್ರವಾಸಿ ಆಫ್ರಿಕಾ 16.5 ಓವರ್‌ಗೆ 1 ವಿಕೆಟ್‌ ನಷ್ಟದಲ್ಲಿ 140 ರನ್ ಬಾರಿಸಿ ಗೆಲುವಿನ ನಗು ಬೀರಿತು. ಬ್ಯೂರನ್ ಹೆಂಡ್ರಿಕ್ಸ್ ಪಂದ್ಯಶ್ರೇಷ್ಠ, ಕ್ವಿಂಟನ್‌ ಡಿ ಕಾಕ್ ಸರಣಿಶ್ರೇಷ್ಠರೆನಿಸಿದರು.

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ರಿಷಭ್ ಪಂತ್ (ವಿಕೆ), ಶ್ರೇಯಸ್ ಅಯ್ಯರ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ನವದೀಪ್ ಸೈನಿ.

ದಕ್ಷಿಣ ಆಫ್ರಿಕಾ ತಂಡ: ರೀಜಾ ಹೆಂಡ್ರಿಕ್ಸ್, ಕ್ವಿಂಟನ್ ಡಿ ಕಾಕ್ (ಸಿ & ವಿಕೆ), ಟೆಂಬಾ ಬವುಮಾ, ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಆ್ಯಂಡಿಲೆ ಫೆಹ್ಲುಕ್ವಾಯೊ, ಜಾರ್ನ್ ಫೋರ್ಟುಯಿನ್, ಕಗಿಸೊ ರಬಾಡಾ, ಬ್ಯೂರನ್ ಹೆಂಡ್ರಿಕ್ಸ್, ತಬ್ರೈಜ್ ಶಮ್ಸಿ.

Story first published: Sunday, September 22, 2019, 22:28 [IST]
Other articles published on Sep 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+