ಭಾರತ vs ದ. ಆಫ್ರಿಕಾ 3ನೇ ಟಿ20: ದ್ವಿತಿಯಾರ್ಧದಲ್ಲಿ ಕುಸಿತ: 180 ರನ್‌ಗಳ ಗುರಿ ರಕ್ಷಿಸಿಕೊಳ್ಳುತ್ತಾ ಭಾರತ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಅದ್ಭುತ ಆರಂಭವನ್ನು ಪಡೆದ ನಂತರ ಕುಸಿತ ಅನುಭವಿಸಿತು. ಇದರ ಪರಿಣಾಮವಾಗಿ ಭಾರತ ತಂಡ 200 ರನ್‌ಗಳ ಗಡಿದಾಟುವ ಅವಕಾಶವನ್ನು ಕಳೆದುಕೊಂಡಿತು. ದ್ವಿತಿಯಾರ್ಧದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ದಕ್ಷಿಣ ಆಫ್ರಿಕಾ ಬೌಲರ್‌ಗಳಿ ಭಾರತ ತಂಡವನ್ನು 179 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಭಾರತದ ಬೌಲಿಂಗ್ ಹೇಗಿರಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಅದ್ಭುತ ಆರಂಭ: ಈ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಆರಂಭವನ್ನು ಪಡೆಯಿತು. ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದರೂ ಋಉತುರಾಜ್ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶವನ್ನು ನಿಡಲಾಗಿತ್ತು. ಈ ಅವಕಾಶವನ್ನು ಋತು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಮನಮೋಹಕ ಪ್ರದರ್ಶನ ನೀಡಿದ ಗಾಯಕ್ವಾಡ್ ಭರ್ಜರಿ ಅರ್ಧ ಶತಕ ಸಿಡಿಸಿದರು. ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ ಅರ್ಧ ಶತಕ ಸಿಡಿಸಿದ್ದಾರೆ. ಈ ಜೋಡಿ ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 97 ರನ್‌ಗಳ ಜೊತೆಯಾಟವನ್ನು ನೀಡಿತು.
ಆದರೆ ಈ ಜೊಡಿ ಬೇರ್ಪಟ್ಟ ಬಳಿಕ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದೆ. ನಂತರ ಬಂದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಶ್ರೇಯಸ್ ಐಯ್ಯರ್ 14 ರನ್ ಬಾರಿಸಿ ಔಟಾದರೆ ಹಾರ್ದಿಕ್ ಪಾಂಡ್ಯ 31 ರನ್‌ಗಳ ಕೊಡುಗೆ ನೀಡಿದರು. ರಿಷಬ್ ಪಂತ್ ಕೇವಲ 6 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ದಿನೇಶ್ ಕಾರ್ತಿಕ್ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಆಡುವ ಬಳಗ ಹೀಗಿದೆ:
ಭಾರತ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಬೆಂಚ್: ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಕಿಯಾ
ಬೆಂಚ್: ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications