For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ, 3ನೇ ಟೆಸ್ಟ್, Live: ರೋಹಿತ್, ರಹಾನೆ ಸೊಗಸಾದ ಆಟ

India vs South Africa, 3rd Test, day 2 - Live Score

ರಾಂಚಿ, ಅಕ್ಟೋಬರ್ 20: ರಾಂಚಿಯಲ್ಲಿ ನಡೆಯುತ್ತಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ಆರಂಭ ಕಂಡಿದೆ. ಟಾಸ್ ಗೆದ್ದಿದ್ದ ವಿರಾಟ್ ಕೊಹ್ಲಿ ಪಡೆ ಬ್ಯಾಟಿಂಗ್ ಆಯ್ದುಕೊಂಡಿತ್ತು.

ಇನ್ನಿಂಗ್ಸ್‌ ಆರಂಭಿಸಿರುವ ಭಾರತದಿಂದ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ 10, ಚೇತೇಶ್ವರ ಪೂಜಾರ 0, ವಿರಾಟ್ ಕೊಹ್ಲಿ 12 ರನ್ ಬಾರಿಸಿ ಔಟ್ ಆಗಿದ್ದಾರೆ. ಶನಿವಾರ ಮೊದಲ ದಿನದಾಟದ ಅಂತ್ಯಕ್ಕೆ ಭಾರತ 58 ಓವರ್‌ಗೆ 3 ವಿಕೆಟ್ ಕಳೆದು 224 ರನ್ ಮಾಡಿತ್ತು.

ಭಾರತ vs ದ.ಆಫ್ರಿಕಾ, 3ನೇ ಟೆಸ್ಟ್, 1ನೇ ದಿನ Live ಸ್ಕೋರ್‌ಕಾರ್ಡ್

1
46115

ದಿನದ ಆರಂಭದಲ್ಲಿ 224/3 ಸ್ಕೋರಿನಿಂದ ಆರಂಭಿಸಿದ ರಹಾನೆ-ರೋಹಿತ್ ಪಡೆ ಉತ್ತಮ ಗತಿಯಲ್ಲಿ ರನ್ ಗಳಿಸಿತು. 192 ಎಸೆತಗಳಲ್ಲಿ 115ರನ್ ಗಳಿಸಿ ರಹಾನೆ ಅವರು ಜಾರ್ಜ್ ಲಿಂಡೆ ವಿಕೆಟ್ ಒಪ್ಪಿಸಿದರು. ರಹಾನೆ 11ನೇ ಟೆಸ್ಟ್ ಶತಕ ಗಳಿಸಿ ಕ್ಲಾಸೆನ್ ಗೆ ಕ್ಯಾಚಿತ್ತರು. ಲಿಂಡೆಗೆ ಇದು ಮೊದಲ ಟೆಸ್ಟ್ ವಿಕೆಟ್ ಆಗಿದೆ.

ಭೋಜನ ವಿರಾಮದ ವೇಳೆಗೆ 375/4 ಸ್ಕೋರ್ ಮಾಡಿದ್ದ ಟೀಂ ಇಂಡಿಯಾ ರನ್ ಗತಿ ಹೆಚ್ಚಳವಾಗಲು ರೋಹಿತ್ ದ್ವಿಶತಕ ಹಾಗೂ ಅಜಿಂಕ್ಯ ರಹಾನೆ ಶತಕ ಕಾರಣವಾಗಿದೆ.

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಶಹಬಾಜ್ ನದೀಮ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್, ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಫಾಫ್ ಡು ಪ್ಲೆಸಿಸ್ (ಸಿ), ತೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್ (ವಿಕೆ), ಜಾರ್ಜ್ ಲಿಂಡೆ, ಡೇನ್ ಪೀಡ್ಟ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.

Story first published: Sunday, October 20, 2019, 12:45 [IST]
Other articles published on Oct 20, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+