For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ, 3ನೇ ಟೆಸ್ಟ್, Live: ಸೋಲಿನಂಚಿನಲ್ಲಿ ದಕ್ಷಿಣ ಆಫ್ರಿಕಾ!

India vs South Africa, 3rd Test, Day 3 - Live Score

ರಾಂಚಿ, ಅಕ್ಟೋಬರ್ 21: ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಮತ್ತು ಕೊನೆಯ ಟೆಸ್ಟ್‌ನಲ್ಲೂ ಭಾರತ ಬ್ಯಾಟಿಂಗ್ ಹಾಗು ಬೌಲಿಂಗ್ ಪಾರಮ್ಯ ಮೆರೆದಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ ಈ ಟೆಸ್ಟ್‌ನಲ್ಲೂ ಸೋತು ವೈಟ್‌ವಾಷ್ ಮುಖಭಂಗ ಅನುಭವಿಸುವುದರಲ್ಲಿದೆ.

ಮೊದಲನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ, ಜುಬೇರ್ ಹಂಝ 62, ತೆಂಬ ಬವುಮಾ 32, ಜಾರ್ಜ್ ಲಿಂಡ್ಲೆ 37 ರನ್‌ನೊಂದಿಗೆ 56.2 ಓವರ್‌ಗೆ 162 ರನ್ ಬಾರಿಸಿ ಭರ್ಜರಿ 335 ರನ್ ಹಿನ್ನಡೆ ಅನುಭವಿಸಿತು. ಮೊಹಮ್ಮದ್ ಶಮಿ 2, ಉಮೇಶ್ ಯಾದವ್ 3, ಶಹಬಾಝ್ ನದೀಮ್ 2, ರವೀಂದ್ರ ಜಡೇಜಾ 2 ವಿಕೆಟ್‌ ಪಡೆದು ಈ ವೇಳೆ ಕಾಡಿದರು.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್, Live ಸ್ಕೋರ್‌ಕಾರ್ಡ್

1
46115

ಕೊಹ್ಲಿ ಪಡೆ, ದಕ್ಷಿಣ ಆಫ್ರಿಕಾಕ್ಕೆ ಫಾಲೋ ಆನ್ ನೀಡಿದ್ದು, ದ್ವಿತೀಯ ಇನ್ನಿಂಗ್ಸ್‌ನಲ್ಲೂ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೈಫಲ್ಯ ತೋರಿಸಿಕೊಂಡಿದೆ. ಸೋಮವಾರ (ಅಕ್ಟೋಬರ್ 21) ದಿನದಾಟದ ಅಂತ್ಯಕ್ಕೆ ಆಫ್ರಿಕಾ 46 ಓಬರ್‌ಗೆ 8 ವಿಕೆಟ್ ಕಳೆದು 132 ರನ್ ಗಳಿಸಿ ಸೋಲಿನಂಚಿನಲ್ಲಿತ್ತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ರೋಹಿತ್ ಶರ್ಮಾ 212, ಅಜಿಂಕ್ಯ ರಹಾನೆ 115, ವಿರಾಟ್ ಕೊಹ್ಲಿ 12, ರವೀಂದ್ರ ಜಡೇಜಾ 51, ವೃದ್ಧಿಮಾನ್ ಸಹಾ 24, ಉಮೇಶ್ ಯಾದವ್ 31, ರವಿಚಂದ್ರನ್ ಅಶ್ವಿನ್ 14 ರನ್‌ನೊಂದಿಗೆ 116.3 ಓವರ್‌ಗೆ 9 ವಿಕೆಟ್‌ ಕಳೆದು 497 ರನ್ ಪೇರಿಸುವುದರೊಂದಿಗೆ ಡಿಕ್ಲೇರ್ ಘೋಷಿಸಿತ್ತು.

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಶಹಬಾಜ್ ನದೀಮ್, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್, ಕ್ವಿಂಟನ್ ಡಿ ಕಾಕ್, ಜುಬೇರ್ ಹಮ್ಜಾ, ಫಾಫ್ ಡು ಪ್ಲೆಸಿಸ್ (ಸಿ), ತೆಂಬ ಬವುಮಾ, ಹೆನ್ರಿಕ್ ಕ್ಲಾಸೆನ್ (ವಿಕೆ), ಜಾರ್ಜ್ ಲಿಂಡೆ, ಡೇನ್ ಪೀಡ್ಟ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ, ಲುಂಗಿ ಎನ್‌ಗಿಡಿ.

Story first published: Monday, October 21, 2019, 18:11 [IST]
Other articles published on Oct 21, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+