For Quick Alerts
ALLOW NOTIFICATIONS  
For Daily Alerts
 

ರಾಂಚಿಯಲ್ಲಿ ಮಿಂಚಿದ ಭಾರತ, ದಕ್ಷಿಣ ಆಫ್ರಿಕಾಕ್ಕೆ ವೈಟ್‌ವಾಷ್ ಮುಖಭಂಗ

India vs South Africa, 3rd Test: India won by an innings and 202 runs

ರಾಂಚಿ, ಅಕ್ಟೋಬರ್ 22: ಪ್ರವಾಸಿ ದಕ್ಷಿಣ ಆಫ್ರಿಕಾಕ್ಕೆ ಮತ್ತೊಂದು ಸೋಲಾಗಿದೆ. ರಾಂಚಿಯಲ್ಲಿ ಮುಕ್ತಾಯಗೊಂಡ ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಮತ್ತು ಕೊನೆಯ ಟೆಸ್ಟ್ ನಲ್ಲಿ ಭಾರತ ಒಂದು ಇನ್ನಿಂಗ್ಸ್‌ ಸಹಿತ 202 ರನ್ ಗೆಲುವನ್ನಾಚರಿಸಿದೆ. ಇದರೊಂದಿಗೆ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 3-0ಯ ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಭರ್ಜರಿ ಬ್ಯಾಟಿಂಗ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ರವೀಂದ್ರ ಜಡೇಜಾ ಮತ್ತು ಶಬಾಝ್ ನದೀಮ್ ಮತ್ತು ರವಿಚಂದ್ರನ್ ಅಶ್ವಿನ್ ಮಾರಕ ಬೌಲಿಂಗ್ ದಾಳಿಯ ಬೆಂಬಲದೊಂದಿಗೆ ಭಾರತ ದಾಖಲೆಯ ಗೆಲುವು ಕಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ರೋಹಿತ್ ಶರ್ಮಾ 212, ಅಜಿಂಕ್ಯ ರಹಾನೆ 115, ವಿರಾಟ್ ಕೊಹ್ಲಿ 12, ರವೀಂದ್ರ ಜಡೇಜಾ 51, ವೃದ್ಧಿಮಾನ್ ಸಹಾ 24, ಉಮೇಶ್ ಯಾದವ್ 31, ರವಿಚಂದ್ರನ್ ಅಶ್ವಿನ್ 14 ರನ್‌ನೊಂದಿಗೆ 116.3 ಓವರ್‌ಗೆ 9 ವಿಕೆಟ್‌ ಕಳೆದು 497 ರನ್ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ದಕ್ಷಿಣ ಆಫ್ರಿಕಾ, ಜುಬೇರ್ ಹಂಝ 62, ತೆಂಬ ಬವುಮಾ 32, ಜಾರ್ಜ್ ಲಿಂಡ್ಲೆ 37 ರನ್‌ನೊಂದಿಗೆ 56.2 ಓವರ್‌ಗೆ 162 ರನ್ ಬಾರಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 335 ರನ್ ಹಿನ್ನಡೆ ಅನುಭವಿಸಿತು. ಕೊಹ್ಲಿ ಪಡೆ ಫಾಲೋ ಆನ್ ನೀಡಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ಗೆ ಇಳಿದ ಆಫ್ರಿಕಾ, ಜಾರ್ಜ್ ಲಿಂಡೆ 27, ಡೇನ್ ಪೀಡ್ಟ್ 23, ಥ್ಯೂನಿಸ್ ಡಿ ಬ್ರೂಯಿನ್ 30 ರನ್‌ನೊಂದಿಗೆ 48 ಓವರ್‌ಗೆ 133 ರನ್ ಪೇರಿಸಿ ಶರಣಾಯಿತು.

ಭಾರತದ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ 3, ಜಾರ್ಜ್ ಲಿಂಡೆ 4 ವಿಕೆಟ್‌ ಪಡೆದು ಗಮನ ಸೆಳೆದರೆ, ದಕ್ಷಿಣ ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಭಾರತ ಮೊಹಮ್ಮದ್ ಶಮಿ 2+3, ಉಮೇಶ್ ಯಾದವ್ 3+2, ರವೀಂದ್ರ ಜಡೇಜಾ 2+1, ಶಬಾಝ್ ನದೀಮ್ 2+2 ಮತ್ತು ರವಿಚಂದ್ರನ್ ಅಶ್ವಿನ್ 0+1 ವಿಕೆಟ್‌ ನೊಂದಿಗೆ ಮಿಂಚಿದರು. ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳು ರೋಹಿತ್‌ ಪಡೆದುಕೊಂಡರು.

Story first published: Tuesday, October 22, 2019, 10:41 [IST]
Other articles published on Oct 22, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+