IND vs SA: ಟಿ ಟ್ವೆಂಟಿ ಸರಣಿ ಕುರಿತು ಹೊರಬಿತ್ತು ಮೆಗಾ ಅಪ್‌ಡೇಟ್; ಆಟಗಾರರಿಗೆ ಇದು ಸಿಹಿ ಸುದ್ದಿ

ಕಳೆದೆರಡು ತಿಂಗಳುಗಳಿಂದ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಹದಿನೈದನೇ ಆವೃತ್ತಿ ಇಂದು ( ಮೇ 29 ) ಮುಕ್ತಾಯಗೊಳ್ಳುತ್ತಿದ್ದು, ಇಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ಟೂರ್ನಿಗೆ ತೆರೆಬೀಳಲಿದೆ.
ಹೀಗೆ ವಿಶ್ವದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದನೇ ಆವೃತ್ತಿ ಮುಕ್ತಾಯವಾದ ಬೆನ್ನಲ್ಲೇ ಟೀಮ್ ಇಂಡಿಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳು ಆರಂಭಗೊಳ್ಳಲಿವೆ. ಮೊದಲಿಗೆ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಹೌದು, ಜೂನ್ 9ರಿಂದ ಆರಂಭವಾಗಲಿರುವ 5 ಪಂದ್ಯಗಳ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ.
ದಕ್ಷಿಣ ಆಫ್ರಿಕಾ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದು, ರೋಹಿತ್ ಶರ್ಮಾ ವಿಶ್ರಾಂತಿ ಪಡೆದುಕೊಳ್ಳುವ ಕಾರಣದಿಂದಾಗಿ ಕೆಎಲ್ ರಾಹುಲ್ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಸಾರಥ್ಯವನ್ನು ವಹಿಸಿಕೊಂಡಿದ್ದಾರೆ. ಇನ್ನು ಇತ್ತೀಚೆಗಷ್ಟೇ ಈ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿತ್ತು. ಇದೀಗ ಮೂಲವೊಂದು ತಿಳಿಸಿರುವ ಪ್ರಕಾರ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಈ ಸರಣಿಯಲ್ಲಿ ಬೃಹತ್ ಬದಲಾವಣೆಯೊಂದನ್ನು ಮಾಡಲಾಗುತ್ತಿದೆ. ಈ ಕುರಿತಾದ ವಿವರ ಮುಂದೆ ಇದೆ ಓದಿ.

ಸರಣಿಯಲ್ಲಿ ಇರುವುದಿಲ್ಲ ಬಯೋ ಬಬಲ್
ಕಳೆದೆರಡು ವರ್ಷಗಳಿಂದ ಕ್ರಿಕೆಟ್ ಆಟಗಾರರು ಯಾವುದೇ ಟೂರ್ನಿಯಲ್ಲಿ ಅಥವಾ ಸರಣಿಯಲ್ಲಿ ಭಾಗವಹಿಸಬೇಕು ಎಂದರೂ ಕಠಿಣ ಬಯೋ ಬಬಲ್ ವ್ಯವಸ್ಥೆಯನ್ನು ಅನುಸರಿಸಬೇಕಿತ್ತು. ಕೊರೋನಾವೈರಸ್ ಹಾವಳಿಯಿಂದಾಗಿ ಸೃಷ್ಟಿಯಾಗಿದ್ದ ಈ ಪ್ರವೃತ್ತಿಗೆ ಇದೀಗ ಬಿಸಿಸಿಐ ಬ್ರೇಕ್ ಹಾಕಲು ತೀರ್ಮಾನಿಸಿದ್ದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಈ ಟಿ ಟ್ವೆಂಟಿ ಸರಣಿಯಲ್ಲಿ ಯಾವುದೇ ಬಯೋ ಬಬಲ್ ನಿಯಮ ಇರುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಬಯೋ ಬಬಲ್ ತೆಗೆದು ಹಾಕಿದ ಮೊದಲ ಸರಣಿ
ಈ ಮೂಲಗಳ ಮಾಹಿತಿಯಂತೆ ಏನಾದರೂ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸರಣಿಯಿಂದ ಬಯೋ ಬಬಲ್ ವ್ಯವಸ್ಥೆಯನ್ನು ತೆಗೆದು ಹಾಕಿದರೆ ಕೊರೋನಾವೈರಸ್ ನಂತರ ಬಯೋ ಬಬಲ್ ವ್ಯವಸ್ಥೆಯನ್ನು ರದ್ದು ಮಾಡಿದ ಮೊದಲ ಬೋರ್ಡ್ ಬಿಸಿಸಿಐ ಮತ್ತು ಬಯೋ ಬಸ್ ವ್ಯವಸ್ಥೆ ಇಲ್ಲದೆ ಕೊರೋನಾ ನಂತರ ನಡೆದ ಮೊದಲ ಸರಣಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ ಟ್ವೆಂಟಿ ಸರಣಿ ಎನಿಸಿಕೊಳ್ಳಲಿದೆ.

ದ. ಆಫ್ರಿಕಾ ಟಿ20 ಸರಣಿಗೆ ಪ್ರಕಟವಾದ ಟೀಮ್ ಇಂಡಿಯಾ
ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ, ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications