For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಚೇತೇಶ್ವರ್ ಪೂಜಾರ ಕೆಣಕಿದ ಕಾಗಿಸೊ ರಬಾಡ

India vs South Africa: Aggressive Kagiso Rabada reaps his reward

ಪುಣೆ, ಅಕ್ಟೋಬರ್ 10: ದಕ್ಷಿಣ ಆಫ್ರಿಕಾ ವೇಗಿ ಕಾಗಿಸೊ ರಬಾಡ ಟೀಮ್ ಇಂಡಿಯಾ ಟೆಸ್ಟ್ ಸ್ಪೆಶಾಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ಕೆಣಕಿದ ದೃಶ್ಯ ಕಂಡುಬಂತು. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಗುರುವಾರ (ಅಕ್ಟೋಬರ್ 10) ನಡೆದ ಟೆಸ್ಟ್‌ ವೇಳೆ ರಬಾಡ, ಪೂಜಾರ ಅವರನ್ನು ಕೆಣಕಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ಪರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದ ಚೇತೇಶ್ವರ ಪೂಜಾರ, 50.6ನೇ ಓವರ್‌ನಲ್ಲಿ ರಬಾಡ ಎಸೆತಕ್ಕೆ ನಾಯಕ ಫಾ ಡು ಪ್ಲೆಸಿಸ್‌ಗೆ ಕ್ಯಾಚಿತ್ತು ನಿರ್ಗಮಿಸಿದ್ದರು. ಆಗ ಪೂಜಾರ 58 ರನ್ ಗಳಿಸಿದ್ದರು.

ಚೇತೇಶ್ವರ ವಿಕೆಟ್‌ ದೊರೆಯುತ್ತಲೇ ಪೂಜಾರ ಅವರತ್ತ ಸಂಭ್ರಮಾಚರಿಸುತ್ತ ಬಂದ ರಬಾಡ, ಎಂಥದ್ದೋ ಹೇಳಿದರು. ಯಾಕೆಂದರೆ ಪೂಜಾರ 0 ರನ್ ಗಳಿಸಿದ್ದಾಗಲೇ ಔಟಾಗುವುದರಲ್ಲಿದ್ದರು. ಆದರೆ ಕ್ಯಾಚ್ ಡ್ರಾಪ್ ಆಗಿದ್ದರಿಂದ ಚೇತೇಶ್ವರಗೆ ಜೀವದಾನ ಲಭಿಸಿತ್ತು.

ವಿಕೆಟ್‌ ಲಭಿಸಿದಾಗ ನಿಮ್ಮ ಬಳಿ ಬಂದ ರಬಾಡ ಹೇಳಿದ್ದೇನು? ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪೂಜಾರ, 'ಆತ (ರಬಾಡ) ಏನು ಹೇಳಿದನೋ ನನಗೆ ನೆನಪಾಗುತ್ತಿಲ್ಲ. ಆದರೆ ಒಂದಂತೂ ನಿಜ; ಬ್ಯಾಟ್ಸ್‌ಮನ್‌ಗೆ ಏನಾದರೂ ಹೇಳುತ್ತಿರುವವರಲ್ಲಿ ರಬಾಡ ಕೂಡ ಒಬ್ಬ,' ಎಂದರು.

ರಬಾಡ ಬೌಲಿಂಗ್‌ ದಾಳಿಯನ್ನು ದಕ್ಷಿಣ ಆಫ್ರಿಕಾ ಕೋಚ್ ವಿನ್ಸೆಂಟ್ ಬಾರ್ನ್ಸ್ ಕೂಡ ಶ್ಲಾಘಿಸಿದ್ದಾರೆ. 'ಆತ ಬೌಲಿಂಗ್ ಮಾಡೋದನ್ನು ನೋಡೋದಕ್ಕೆ ಖುಷಿಯಾಗತ್ತೆ. ಮುಖ್ಯವಾಗಿ ಊಟದ ಬಳಿಕದ ಬೌಲಿಂಗ್‌ ನೋಡೋದು ಇನ್ನೂ ಅದ್ಭುತ,' ಎಂದು ವಿನ್ಸೆಂಟ್ ಪ್ರತಿಕ್ರಿಯಿಸಿದ್ದಾರೆ. ರಬಾಡ ಮೊದಲ ದಿನ 18.1 ಓವರ್ ಎಸೆದು 48 ರನ್‌ಗೆ 3 ವಿಕೆಟ್ ಮುರಿದಿದ್ದಾರೆ. ಭಾರತ 85.1 ಓವರ್‌ಗೆ 3 ವಿಕೆಟ್‌ ನಷ್ಟದಲ್ಲಿ 273 ರನ್ ಬಾರಿಸಿದೆ.

Story first published: Thursday, October 10, 2019, 22:07 [IST]
Other articles published on Oct 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+