ಭಾರತ vs ದ.ಆಫ್ರಿಕಾ: 1ನೇ ಟಿ20 ಪಂದ್ಯಕ್ಕೆ ಮಳೆ ತೊಂದರೆ ಕೊಡುತ್ತಾ?

ಧರ್ಮಶಾಲಾ, ಸೆಪ್ಟೆಂಬರ್ 14: ಪ್ರವಾಸ ಸರಣಿಗಾಗಿ ಭಾರತಕ್ಕೆ ಬಂದಿರುವ ದಕ್ಷಿಣ ಆಫ್ರಿಕಾ ತಂಡ ಭಾನುವಾರ (ಸೆಪ್ಟೆಂಬರ್ 15) ಆತಿಥೇಯ ಭಾರತದ ವಿರುದ್ಧ ಟಿ20 ಪಂದ್ಯದ ಮೂಲಕ ಸರಣಿ ಆರಂಭಿಸಲಿದೆ. ಮೊದಲ ಟಿ20 ಪಂದ್ಯ ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.
ಆರಂಭಿಕ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆಯಾ? ಹೌದು. ಮೊದಲ ಪಂದ್ಯಕ್ಕೆ ಶೇ. 50ರಷ್ಟು ವರುಣನ ತೊಂದರೆಯಿದೆ ಎನ್ನುತ್ತಿದೆ ಧರ್ಮಶಾಲಾ ಹವಾಮಾನ ವರದಿ. ಮಳೆಯ ಕಾರಣಕ್ಕೆ ಶನಿವಾರ (ಸೆಪ್ಟೆಂಬರ್ 14) ಟೀಮ್ ಇಂಡಿಯಾದ ಅಭ್ಯಾಸಕ್ಕೂ ಅಡ್ಡಿಯಾಗಿದೆ. ಮಳೆ ಸುರಿದಿದ್ದರಿಂದ ಕೊಹ್ಲಿ ಪಡೆ ಶನಿವಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಬೇಕಾಗಿ ಬಂದಿತ್ತು.
ಧರ್ಮಶಾಲಾದಲ್ಲಿ ಸದ್ಯಕ್ಕಂತೂ ಮಳೆ ಸುರಿಯುತ್ತಿದೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಗುಡುಗು ಸಹಿತ ಮಳೆ ಸಮಸ್ಯೆ ನೀಡುವುದು ನಿರೀಕ್ಷಿತವೇ. ಮಳೆಯಿಂದಾಗಿ ಮೈದಾನದ ಸಿಬ್ಬಂದಿಗೆ ಮೈದಾನವನ್ನು ಸಜ್ಜುಗೊಳಿಸುವುಕ್ಕೂ ತೊಂದರೆಯಾಗಿತ್ತು. ಹಾಗಂತ ಸದ್ಯದ ಮಾಹಿತಿ ಪ್ರಕಾರ, ಮಳೆ ದೀರ್ಘ ಕಾಲ ಸುರಿಯುತ್ತಿರುವ ಬದಲು ಬಿಟ್ಟು ಬಿಟ್ಟು ಬರುತ್ತಿದೆ ಎನ್ನಲಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸ ಸರಣಿಯನ್ನು ಯಶಸ್ವಿಯಾಗಿ ಮುಗಿಸಿರುವ ಭಾರತ ತಂಡ, ವಿಶ್ವಕಪ್ ಬಳಿಕ ಪಾಲ್ಗೊಳ್ಳುತ್ತಿರುವ ಎರಡನೇ ಅಧಿಕೃತ ಸರಣಿಯಿದು. ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯು 3 ಟಿ20, 3 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಅಂದ್ಹಾಗೆ ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications