ಈಡನ್ ಗಾರ್ಡನ್‌ನಲ್ಲಿ ಹೇಗಿದೆ ದಕ್ಷಿಣ ಆಫ್ರಿಕಾ ಪ್ರದರ್ಶನ? ಇಲ್ಲಿದೆ ಹೆಡ್ ಟು ಹೆಡ್ ರೆಕಾರ್ಡ್
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಸಕಲ ರೀತಿಯಲ್ಲೂ ಈಡನ್ ಗಾರ್ಡನ್ ಸಿದ್ಧವಾಗಿದೆ. ಈ ಮೈದಾನ ಭಾರತದ ಪಾಲಿಗೆ ಲಕ್ಕಿ.. ಭಾರತ ಈ ಮೈದಾನದಲ್ಲಿ ಕಳೆದ 15 ವರ್ಷಗಳಲ್ಲಿ ಒಂದೇ ಒಂದು ಸೋಲನ್ನು ಕಂಡಿಲ್ಲ. ದಕ್ಷಿಣ ಆಫ್ರಿಕಾ ಸಹ ಸರಣಿಯಲ್ಲಿ ಪುಟಿದೇಳುವ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಇನ್ನು ಕೋಲ್ಕತ್ತಾದ ಅಂಗಳದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಒಟ್ಟು ಮೂರು ಬಾರಿ ಮುಖಾಮುಖಿ ಆಗಿವೆ.
ಉಭಯ ದೇಶಗಳ ನಡುವಣ ಟೆಸ್ಟ್ ಪಂದ್ಯಗಳಲ್ಲಿ 3 ಪಂದ್ಯಕ್ಕೆ ಈಡನ್ ಗಾರ್ಡನ್ ಈ ಮೊದಲೇ ಆತಿಥ್ಯ ನೀಡಿದೆ. ಈ ಅಂಗಳದಲ್ಲಿ ಭಾರತ, ದಕ್ಷಿಣ ಆಫ್ರಿಕಾ ನಡುವಣ ಹೆಡ್ ಟು ಹೆಡ್ ದಾಖಲೆಯನ್ನು ನೋಡಿದರೆ, ಆತಿಥೇಯ ತಂಡ 2 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ದಕ್ಷಿಣ ಆಫ್ರಿಕಾ ಒಂದು ಪಂದ್ಯದಲ್ಲಿ ಜಯ ಸಾಧಿಸಿದೆ. ಉಭಯ ದೇಶಗಳ ನಡುವಣ ಮೊದಲ ಟೆಸ್ಟ್ ಪಂದ್ಯ 1996ರಲ್ಲಿ ಈ ಮೈದಾನದಲ್ಲಿ ನಡೆದಿತ್ತು. ಆ ವೇಳೆ ದಕ್ಷಿಣ ಆಫ್ರಿಕಾ ಏಕಪಕ್ಷೀಯವಾಗಿ ಜಯ ಸಾಧಿಸಿತ್ತು.

6 ವರ್ಷದ ಬಳಿಕ ಮತ್ತೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈಡನ್ ಗಾರ್ಡನ್‌ನಲ್ಲಿ ಮುಖಾಮುಖಿ ಆದವು. ಈ ವೇಳೆ ಟೀಮ್ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಮೈದಾನದಲ್ಲಿ ಭಾರತ, ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ 2010ರಲ್ಲಿ ಕಣಕ್ಕೆ ಇಳಿದಿತ್ತು. ಆಗಲೂ ಆತಿಥೇಯ ತಂಡ ಇನಿಂಗ್ಸ್ ಹಾಗೂ 57 ರನ್ ಜಯ ಸಾಧಿಸಿತ್ತು.
ಹೇಗಿದೆ ಅಂಕಿ ಅಂಶಗಳ ಲೆಕ್ಕಾಚಾರ?
ಉಭಯ ತಂಡಗಳ ನಡುವಣ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳು ಸಮಬಲದ ಪ್ರದರ್ಶನ ನೀಡಿವೆ. ಒಟ್ಟಾರೆ ಉಭಯ ತಂಡಗಳು ಈ ವರೆಗೆ 44 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಭಾರತ 16, ದಕ್ಷಿಣ ಆಫ್ರಿಕಾ 18 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಇನ್ನು 10 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಇದರಲ್ಲಿ ಭಾರತ ತವರಿನಲ್ಲಿ 11 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ತವರಿನಲ್ಲಿ 13 ಪಂದ್ಯ ಜಯ ಸಾಧಿಸಿದೆ. ಎದುರಾಳಿ ತವರಿನಲ್ಲಿ ಎರಡೂ ತಂಡಗಳು ತಲಾ 5 ಪಂದ್ಯ ಗೆದ್ದಿವೆ. ದಕ್ಷಿಣ ಆಫ್ರಿಕಾ ಕೊನೆಯ ಬಾರಿಗೆ ಭಾರತವನ್ನು ತವರಿನಲ್ಲಿ 2010ರಲ್ಲಿ ಸೋಲಿಸಿತ್ತು. ಆಗ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ 6 ವಿಕೆಟ್‌ಗೆ 558 ರನ್ ಗಳನ್ನು ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 233 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 319 ರನ್ ಸೇರಿಸಿ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ಇನಿಂಗ್ಸ್ ಹಾಗೂ 6 ರನ್‌ಗಳಿಂದ ಪಂದ್ಯ ಗೆದ್ದಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications