ಶ್ರೇಯಸ್, ಇಶಾನ್ ಅಮೋಘ ಆಟಕ್ಕೆ ಗೆಲುವಿನ ಸಿಹಿ: ಆದರೆ ನಾಯಕ ಧವನ್ ಹೊಗಳಿದ್ದು ಯಾರನ್ನು ಗೊತ್ತಾ!?

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡ ಅಮೋಘ ಆಟವನ್ನು ಪ್ರದರ್ಶಿಸಿದ್ದು ಭರ್ಜರಿ ಗೆಲುವು ದಾಖಲಿಸಿದೆ. ಶಿಖರ್ ಧವನ್ ನೇತೃತ್ವದ ಎರಡನೇ ದರ್ಜೆಯ ಭಾರತ ತಂಡ ಈ ಸರಣಿಯಲ್ಲಿ ಕಣಕ್ಕಿಳಿದಿದ್ದರೂ ಬಲಿಷ್ಠ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದು ಮಿಂಚುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೂರು ಪಮದ್ಯಗಳ ಏಕದಿನ ಸರೆಣಿಯಲ್ಲಿ ಟೀಮ್ ಇಂಡಿಯಾ 1-1 ಅಂತರದಿಂದ ಸಮಬಲ ಸಾಧಿಸಿದೆ.
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ಉಪ ನಾಯಕ ಶ್ರೇಯಸ್ ಐಯ್ಯರ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರೆ ಯುವ ಆಟಗಾರ ಇಶಾನ್ ಕಿಶನ್ ಅದ್ಭುತ ಪ್ರದರ್ಶನ ನೀಡಿ ಶತಕದ ಅಂಚಿನಲ್ಲಿ ಎಡವಿದ್ದರು. ಈ ಪ್ರದರ್ಶನದ ಕಾರಣದಿಂದಾಗಿ ಭಾರತ ತಂಡ ಅಮೋಘ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯ ಮುಗಿದ ಬಳಿಕ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗದ ಪ್ರದರ್ಶನದ ಜೊತೆಗೆ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅದರಲ್ಲೂ ಓರ್ವ ಬೌಲರ್ ಬಗ್ಗೆ ನಾಯಕ ಧವನ್ ವಿಶೇಷ ಮಾತಿಗಳನ್ನಾಡಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ.

ಹರಿಣ ಪಡೆಯನ್ನು 278 ರನ್‌ಗೆ ಕಟ್ಟಿ ಹಾಕಿದ್ದ ಭಾರತ
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡ ಹೆಂಡ್ರಿಕ್ಸ್ ಹಾಗೂ ಮಾರ್ಕ್ರಮ್ ಅದ್ಭುತ ಪ್ರದರ್ಶನ ನಿಡುವ ಮೂಲಕ ಆಸರೆಯಾದರು. ಈ ಜೋಡಿ ಶತಕದ ಜೊತೆಯಾಟವನ್ನು ಆಡಿದ್ದಲ್ಲದೆ ಕ್ರಮವಾಗಿ 74 ಹಾಗೂ 79 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಈ ಜೋಡಿಯ ಅದ್ಭುತ ಪ್ರದರ್ಶನದ ಹೊರತಾಗಿಯೂ ದಕ್ಷಿಣ ಆಫ್ರಿಕಾ ತಂಡವನ್ನು 278 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು.

ಐಯ್ಯರ್, ಇಶಾನ್ ಭರ್ಜರಿ ಬ್ಯಾಟಿಂಗ್
ದಕ್ಷಿಣ ಆಫ್ರಿಕಾ ತಂಡ ನೀಡಿದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಟಗಾರರನ್ನು ಅಗ್ಗಕ್ಕೆ ಕಳೆದುಕೊಂಡರೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಐಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ತಂಡಕ್ಕೆ ಆಸರೆಯಾಯಿತು. ಅಮೋಘವಾಗಿ ಇನ್ನಿಂಗ್ಸ್ ಬೆಳೆಸಿದ ಈ ಜೋಡಿ ಬರೊಬ್ಬರಿ 161 ರನ್‌ಗಳ ಜೊತೆಯಾಟವನ್ನು ನೀಡಿದರು. 84 ಎಸೆತಗಳಲ್ಲಿ ಭರ್ಜರಿ 93 ರನ್ ಸಿಡಿಸಿದ ಇಶಾನ್ ಕಿಶನ್ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರೂ ಶ್ರೇಯಸ್ ಐಯ್ಯರ್ ತಮ್ಮ ಎರಡನೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಸಂಜು ಸ್ಯಾಮ್ಸನ್ ಜೊತೆಗೂಡಿ ತಂಡವನ್ನು ಗೆಲುವಿನ ತಡ ಸೇರಿಸುವಲ್ಲಿಯೂ ಯಶಸ್ವಿಯಾದರು. ಈ ಮೂಲಕ ಕಳೆದ ಪಂದ್ಯದಲ್ಲಿ ಗೆಲುವಿನ ಗೆರೆ ದಾಟಿಸಲು ವಿಫಲವಾಗಿದ್ದ ಈ ಜೋಡಿ ಈ ಪಂದ್ಯದಲ್ಲಿ ಯಶಸ್ಸು ಸಾಧಿಸಿದಂತಾಯಿತು.

ಪಂದ್ಯ ಮುಗಿದ ಬಳಿಕ ಬೌಲರ್‌ಗಳನ್ನು ಹೊಗಳಿದ ನಾಯಕ
ಇನ್ನು ಈ ಪಂದ್ಯದ ಮುಕ್ತಾಯದ ಬಳಿಕ ನಾಯಕ ಶಿಖರ್ ಧವನ್ ಮಾತನಾಡುತ್ತಾ ತಂಡದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಕೊಂಡಾಡಿದ್ದಾರೆ. ದಕ್ಷಿಣ ಆಫ್ರಿಕಾ ದಾಂಡಿಗರ ವಿರುದ್ಧ ಸಂಘಟಿತವಾಗಿ ನಡೆಸಿದ ದಾಳಿ ಖುಷಿ ನೀಡಿದೆ ಎಂದಿದ್ದಾರೆ ಶಿಖರ್ ಧವನ್. ಈ ಸಂದರ್ಭದಲ್ಲಿ ಅವರು ಪವರ್‌ಪ್ಲೇ ಅವಧಿಯಲ್ಲಿಯೇ ಮೊದಲ ಯಶಸ್ಸು ತಂದುಕೊಟ್ಟ ಮೊದಲ ಪಂದ್ಯವನ್ನಾಡಿದ ಶಹ್ಬಾಜ್ ಅಹ್ಮದ್ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ನನಗೆ ಬೌಲಿಂಗ್ ವಿಭಾಗದ ಪ್ರದರ್ಶನ ಸಾಕಷ್ಟು ಸಮಾಧಾನ ತಂದುಕೊಟ್ಟಿದೆ. ಅದರಲ್ಲೂ ಶಹ್ಬಾಜ್ ಅವರ ಬೌಲಿಂಗ್. ಅವರು ಮೊದಲ ಹತ್ತು ಓವರ್‌ಗಳಲ್ಲಿ ಮಾಡಿದ ಬೌಲಿಂಗ್ ದಾಳಿಯಿಂದಾಗಿ ನಮಗೆ ಮೊದಲ ಯಶಸ್ಸು ದೊರೆಯಿತು"ಎಂದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಶ್ರೇಯಸ್ ಐಯ್ಯರ್ ಹಾಗೂ ಇಶಾನ್ ಕಿಶನ್ ಬ್ಯಾಟಿಂಗ್ ಬಗ್ಗೆಯೂ ಧವನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇತ್ತಂಡಗಳ ಆಡುವ ಬಳಗ
ದ. ಆಫ್ರಿಕಾ ಪ್ಲೇಯಿಂಗ್ XI: ಜಾನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್ (ನಾಯಕ), ಜಾರ್ನ್ ಫೋರ್ಚುಯಿನ್, ಕಗಿಸೊ ರಬಾಡ, ಅನ್ರಿಚ್ ನಾರ್ಕಿಯಾ
ಬೆಂಚ್: ಟೆಂಬಾ ಬಾವುಮಾ, ಲುಂಗಿ ಎನ್ಗಿಡಿ, ತಬ್ರೈಜ್ ಶಮ್ಸಿ, ಮಾರ್ಕೊ ಜಾನ್ಸೆನ್, ಆಂಡಿಲೆ ಫೆಹ್ಲುಕ್ವಾಯೊ
ಭಾರತ ಪ್ಲೇಯಿಂಗ್ XI: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್,
ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ಬೆಂಚ್: ಋತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಮುಖೇಶ್ ಕುಮಾರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications