Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಟೆಸ್ಟ್ ತಂಡದಿಂದ ಮಾರಕ ವೇಗಿ ಜಸ್‌ಪ್ರೀತ್‌ ಬೂಮ್ರಾ ಹೊರಕ್ಕೆ!

ಬೂಮ್ರ ಕನಸು ನುಚ್ಚು ನೂರು.| jasprit bumrah | Oneindia Kannada
India vs South Africa: Jasprit Bumrah ruled out from India’s Test squad

ನವದೆಹಲಿ, ಸೆಪ್ಟೆಂಬರ್ 24: ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಅಕ್ಟೋಬರ್ 2ರಿಂದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮುನ್ನ ಭಾರತ ಟೆಸ್ಟ್ ತಂಡದಿಂದ ವೇಗಿ ಜಸ್‌ಪ್ರೀತ್‌ ಬೂಮ್ರಾ ಹೊರ ಬಿದ್ದಿದ್ದಾರೆ. ಬೂಮ್ರಾ ಗಾಯಗೊಂಡಿರುವುದರಿಂದ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

ಬೂಮ್ರಾ ಬದಲಿಗೆ ಭಾರತ ತಂಡದಲ್ಲಿ ಮತ್ತೊಬ್ಬ ವೇಗಿ ಉಮೇಶ್ ಯಾದವ್ ಅವರನ್ನು ಹೆಸರಿಸಲಾಗಿದೆ. ಇತ್ತಂಡಗಳ 3 ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲಗೊಂಡಿತ್ತು. 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಳ್ಳವತ್ತ ಎರಡೂ ತಂಡಗಳು ಕಣ್ಣಿಟ್ಟಿವೆ.

'ಬೂಮ್ರಾ ತನ್ನ ಬೆನ್ನಿನ ಕೆಳಭಾಗದಲ್ಲಿ ಸಣ್ಣ ಮಟ್ಟಿನ ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ. ಹೀಗಾಗಿ ಮುಂಬರಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಬೂಮ್ರಾ ಹೊರ ಬಿದ್ದಿದ್ದಾರೆ,' ಎಂದು ಬಿಸಿಸಿಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್‌ 2ರಿಂದ ವಿಶಾಖಪಟ್ನಂನಲ್ಲಿ ಆರಂಭವಾಗಲಿದೆ.

ಫಿಟ್‌ನೆಸ್‌ನತ್ತ ಮರಳಲು ಬೂಮ್ರಾ ಬೆಂಗಳೂರಿನಲ್ಲಿರುವ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಗೆ ಹೋಗಲಿದ್ದಾರೆ,' ಎಂದು ಪ್ರಕಟನೆ ಹೇಳಿದೆ. 'ಬೂಮ್ರಾ ಗಾಯಕ್ಕೀಡಾಗಿರುವುದು ದೈನಂದಿನ ವಿಕಿರಣ ತಪಾಸಣೆ ವೇಳೆ ಕಂಡುಬಂದಿದೆ. ಬೂಮ್ರಾ ಚೇತರಿಕೆಯ ಮೇಲ್ವಿಚಾರಣೆಯನ್ನು ಎನ್‌ಸಿಎ ನೋಡಿಕೊಳ್ಳಲಿದೆ,' ಎಂದು ಬಿಸಿಸಿಐ ಮಾಹಿತಿ ನೀಡಿದೆ.

15 ಜನರ ಭಾರತ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ವಿಸಿ), ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ವೃದ್ಧಿಮಾನ್ ಸಹಾ (ವಿಕೆ), ಆರ್ ಅಶ್ವಿನ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಇಶಾಂತ್ ಶರ್ಮಾ, ಶುಭ್‌ಮಾನ್ ಗಿಲ್.

Story first published: Wednesday, September 25, 2019, 14:49 [IST]
Other articles published on Sep 25, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+