Ind vs SA: ಅಂತಿಮ ಕ್ಷಣದಲ್ಲಿ ಪ್ರಮುಖ ಬದಲಾವಣೆ: ಗೊಂದಲಮಯವಾಗಿದೆ ಭಾರತದ ಆಡುವ ಬಳಗ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಇಂದು ಆರಂಭವಾಗಲಿದ್ದು ಮೊದಲ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಾಕಷ್ಟು ಕಾರಣಗಳಿಗೆ ಕುತೂಹಲವನ್ನು ಸೃಷ್ಟಿಸಿರುವ ಈ ಸರಣಿಯಲ್ಲಿ ಟೀಮ್ ಇಂಡಿಯಾದ ದಿಗ್ಗಜ ಆಟಗಾರರು ಹೊರಗುಳಿದಿದ್ದಾರೆ. ಇದೀಗ ನಾಯಕನಾಗಿ ಆಯ್ಕೆಯಾಗಿದ್ದ ಕೆಎಲ್ ರಾಹುಲ್ ಈ ಸರಣಿಯಿಂದ ಗಾಯಗೊಂಡು ಹೊರಬೀಳುವ ಮೂಲಕ ತಂಡಕ್ಕೆ ಆಘಾತ ಉಂಟಾಗಿದೆ. ರಾಹುಲ್ ಜೊತೆಗೆ ಕುಲ್ದೀಪ್ ಯಾದವ್ ಕೂಡ ಅಂತಿಮ ಹಂತದಲ್ಲಿ ಅಲಭ್ಯವಾಗುತ್ತಿದ್ದು ಮತ್ತಷ್ಟು ಹಿನ್ನಡೆಗೆ ಕಾರಣವಾಗಿದೆ.
ಕೆಎಲ್ ರಾಹುಲ್ ಅಲಭ್ಯತೆಯಿಂದಾಗಿ ತಂಡದ ನಾಯಕತ್ವದ ಹೊಣೆಗಾರಿಗೆ ರಿಷಭ್ ಪಂತ್ ಹೆಗಲೇರಿದ್ದು ಉಪನಾಯಕನಾಗಿ ಹಾರ್ದಿಕ್ ಪಾಂಡ್ಯ ನೇಮಕವಾಗಿದ್ದಾರೆ. ಟೀಮ್ ಇಂಡಿಯಾದಲ್ಲಿ ಉಂಟಾಗಿರುವ ಈ ಅನಿವಾರ್ಯ ಬದಲಾವಣೆಯಿಂದಾಗಿ ಅಂತಿಮ ಹಂತದಲ್ಲಿ ಸಹಜವಾಗಿಯೇ ಒಂದಷ್ಟು ಗೊಂದಲಗಳು ಉಂಟಾಗಿದೆ. ಪ್ರತಿಭಾವಂತ ಆಟಗಾರರ ಪಡೆಯಿದ್ದರೂ ಈ ಸಂದಿಗ್ಧ ಪರಿಸ್ಥಿತಿಯನ್ನು ಭಾರತ ತಂಡ ಯಾವ ರೀತಿಯಾಗಿ ನಿಭಾಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಅಭ್ಯಾಸದಲ್ಲಿ ಗಾಯಗೊಂಡ ರಾಹುಲ್
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಭಾರತ ತಂಡದ ಆಟಗಾರರು ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ನಾಯಕನಾಗಿದ್ದ ಕೆಎಲ್ ರಾಹುಲ್ ಕಾಲಿಗೆ ಗಾಯವಾಗಿದೆ. ಹೀಗಾಗಿ ಅವರು ಈ ಸರಣಿಯಲ್ಲಿ ಆಡಲು ಅಸಮರ್ಥವಾಗಿರುವ ಕಾರಣ ತಂಡದಿಂದ ಹೊರಗುಳಿಯಬೇಕಾಗಿದೆ. ಇನ್ನು ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಗಾಯದ ಕಾರಣದಿಂದಾಗಿ ತಮಡದಿಂದ ಹೊರಬಿದ್ದಿದ್ದಾರೆ. ಈ ಇಬ್ಬರ ಅಲಭ್ಯತೆಯಿಂದಾಗಿ ಆಡುವ ಬಳಗದಲ್ಲಿ ಅಂತಮ ಕ್ಷಣದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಆರಂಭಿಕರಾಗಿ ಕಣಕ್ಕಿಳಿಯುವ ಆಟಗಾರರು ಯಾರು?
ಕೆಎಲ್ ರಾಹುಲ್ ಹಾಗೂ ಇಶಾನ್ ಕಿಶನ್ ಈ ಸರಣಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಸ್ಪಷ್ಟವಾಗಿತ್ತು. ಆದರೆ ಇದೀಗ ಕೆಎಲ್ ರಾಹುಲ್ ಅಲಭ್ಯತೆಯಿಂದಾಗಿ ಇಶಾನ್ ಕಿಶನ್‌ಗೆ ಸಾಥ್ ನೀಡುವ ಆಟಗಾರ ಯಾರು ಎಂಬುದು ಕುತೂಹಲ ಮೂಡಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಋತುರಾಜ್ ಗಾಯಕ್ವಾಡ್ ಇಶಾನ್ ಕಿಶನ್‌ಗೆ ಸಾಥ್ ನಿಡುವ ಸಾಧ್ಯತೆ ಹೆಚ್ಚಿದೆ. ಈ ಅವಕಾಶವನ್ನು ಋತುರಾಜ್ ಗಾಯಕ್ವಾಡ್ ಸದುಪಯೋಗಪಡಿಸಿಕೊಳ್ಳಬೇಕಿದೆ.

ಅನುಭವಿ ಆಟಗಾರರ ಮೇಲಿದೆ ಜವಾಬ್ಧಾರಿ
ಇನ್ನು ಅಗ್ರ ಕ್ರಮಾಂಕದಲ್ಲಿ ಯುವ ಆಟಗಾರರು ಕಣಕ್ಕಿಳಿಯುತ್ತಿರುವ ಕಾರಣ ಕೆಳ ಕ್ರಮಾಂಕದಲ್ಲಿ ಅನುಭವಿಗಳು ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ಇಬ್ಬರಿಗೂ ಅವಕಾಶ ದೊರೆಯಲಿದ್ದು ಫಿನಿಷರ್ ಜವಾಬ್ಧಾರಿ ಈ ಆಟಗಾರರ ಮೇಲಿರಲಿದೆ. ಆದರೆ ಈ ಆಟಗಾರರು ಯಾವ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂಬುದು ನಂತರವೇ ಸ್ಪಷ್ಟವಾಗಲಿದೆ. ಪಂದ್ಯದ ಸ್ಥಿತಿ ನೋಡಿ ಈ ಆಟಗಾರರು ಬ್ಯಾಟಿಂಗ್‌ಗೆ ಇಳಿಯುವುದು ಸ್ಪಷ್ಟ.

ಬೌಲಿಂಗ್ ವಿಭಾಗ ಹೀಗಿದೆ
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ನಿರ್ವಹಿಸುವ ಸಾಧ್ಯತೆಯಿದೆ. ಕುಲ್ದೀಪ್ ಯಾದವ್ ಅಲಭ್ಯವಾಗಿರುವ ಕಾರಣದಿಂದಾಗಿ ಅವರ ಸ್ಥಾನದಲ್ಲಿ ಅಕ್ಷರ್ ಪಟೇಲ್ ಅವಕಾಶ ಗಳಿಸಬಹುದು. ಮತ್ತೊಂದೆಡೆ ಅನುಭವಿ ಯುಜುವೇಂದ್ರ ಚಾಹಲ್ ಮೋಡಿ ಮಾಡಲು ಸಜ್ಜಾಗಿದ್ದಾರೆ. ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗದ ನೇತೃತ್ವ ವಹಿಸಿಕೊಂಡರೆ ಹರ್ಷಲ್ ಪಟೇಲ್ ಡೆತ್ ಓವರ್ ಬೌಲರ್ ಆಗಿ ಕಣಕ್ಕಿಳಿಯಲಿದ್ದರೆ. ಆವೇಶ್ ಖಾನ್ ಮತ್ತೋರ್ವ ವೇಗದ ಬೌಲರ್ ಆಗಿ ಕಣಕ್ಕಿಳಿಯುವ ಸಾಧ್ಯತೆಯಿದೆ

ಸಂಭಾವ್ಯ ಆಡುವ ಬಳಗ ಹೀಗಿದೆ
ಭಾರತದ ಸಂಭಾವ್ಯ ಆಡುವ ಬಳಗ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪ ನಾಯಕ), ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಯುಜುವೇಂದ್ರ ಸಹಲ್, ಆವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications