IND vs SA: ನ.5ರಂದು ಈಡನ್ ಗಾರ್ಡನ್ಸ್‌ನಲ್ಲಿ 70 ಸಾವಿರ ಪ್ರೇಕ್ಷಕರಿಗೆ 'ಕೊಹ್ಲಿ ಮಾಸ್ಕ್' ವಿತರಣೆ!
ಕೋಲ್ಕತ್ತಾ, ಅಕ್ಟೋಬರ್ 31: ಭಾನುವಾರ, ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯುವ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಪ್ರಮುಖ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.
ಭಾರತ ತಂಡದ ವಿಶ್ವಕಪ್ ಪಂದ್ಯದ ದಿನವೇ ಹೊಂದಿಕೆಯಾಗುವಂತೆ ವಿರಾಟ್ ಕೊಹ್ಲಿಯ 35ನೇ ಹುಟ್ಟುಹಬ್ಬದಂದು ಸ್ಟಾರ್ ಬ್ಯಾಟರ್‌ನನ್ನು ಹುರಿದುಂಬಿಸಲು ಸುಮಾರು 70,000 ಅಭಿಮಾನಿಗಳಿಗೆ ಉಚಿತ 'ವಿರಾಟ್ ಕೊಹ್ಲಿ ಮುಖವಾಡಗಳನ್ನು' ಹಂಚಲಾಗುತ್ತದೆ.

'ಕಿಂಗ್ ಕೊಹ್ಲಿ' ಹುಟ್ಟುಹಬ್ಬದ ಪ್ರಯುಕ್ತವಾಗಿ, ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಮೈದಾನಕ್ಕೆ ಬರುವ ಪ್ರೇಕ್ಷಕರಿಗೆ ಕೊಹ್ಲಿ ಮುಖವಾಡಗಳನ್ನು ವಿತರಿಸಲು ದೊಡ್ಡ ಯೋಜನೆಯನ್ನು ಹಾಕಿಕೊಂಡಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವಿಶ್ವಕಪ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಮುಂಚಿತವಾಗಿಯೇ ಮಾರಾಟವಾಗುವುದರೊಂದಿಗೆ ಪಂದ್ಯವು ಹೌಸ್‌ಫುಲ್ ಆಗಿ ನಡೆಯಲಿದೆ.
ವಿರಾಟ್ ಕೊಹ್ಲಿಯ ಮಾಸ್ಕ್‌ಗಳನ್ನು ವಿತರಿಸುವುದರ ಹೊರತಾಗಿ, ಪಂದ್ಯದ ಆರಂಭಕ್ಕೂ ಮೊದಲು ಕೇಕ್ ಕತ್ತರಿಸುವ ಸಮಾರಂಭವನ್ನು ನಡೆಸಲು ಮತ್ತು ವಿರಾಟ್ ಕೊಹ್ಲಿಗೆ ವಿಶೇಷ ಸ್ಮರಣಿಕೆಯನ್ನು ನೀಡಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ (ಸಿಎಬಿ) ಯೋಜಿಸಿದೆ.
"ಈ ಕುರಿತು ಐಸಿಸಿಯಿಂದ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿಗೆ ದಿನವನ್ನು ವಿಶೇಷವಾಗಿಸಲು ನಾವು ಬಯಸುತ್ತೇವೆ," ಎಂದು ಸಿಎಬಿ ಅಧ್ಯಕ್ಷ ಸ್ನೇಹಶಿಶ್ ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.
"ಕ್ರೀಡಾಂಗಣಕ್ಕೆ ಬರುವ ಪ್ರತಿಯೊಬ್ಬ ವಿರಾಟ್ ಕೊಹ್ಲಿ ಅಭಿಮಾನಿ ಒಳಗೆ ಹೋಗುವಾಗ ಮುಖವಾಡಗಳನ್ನು ಧರಿಸಬೇಕೆಂದು ನಾವು ಬಯಸುತ್ತೇವೆ. ಅಂದು ನಾವು ಸುಮಾರು 70,000 ಮಾಸ್ಕ್‌ಗಳನ್ನು ವಿತರಿಸಲು ಯೋಜಿಸಿದ್ದೇವೆ," ಎಂದು ತಿಳಿಸಿದರು.
ನವೆಂಬರ್ 2013ರಲ್ಲಿ ಈಡನ್ ಗಾರ್ಡನ್ಸ್‌ನಲ್ಲಿ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ 199ನೇ ಟೆಸ್ಟ್ ಆಡಿದಾಗ ಇದೇ ರೀತಿಯ ವಾತಾವರಣವನ್ನು ನಿರ್ಮಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications